“ನೀನೇ ರಾಜಕುಮಾರ” ಪುಸ್ತಕ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

Bengaluru: ಪತ್ರಕರ್ತ ಡಾಕ್ಟರ್ ಶರಣು ಹುಲ್ಲೂರು ಅವರು ಬರೆದ ಪುನೀತ್ ರಾಜಕುಮಾರ್ (Puneeth Rajkumar Biography) ಅವರ ಬಯೋಗ್ರಫಿಯಾದ “ನೀನೇ ರಾಜಕುಮಾರ” ಪುಸ್ತಕದ ಯನ್ನು ಪಿ ಆರ್ ಕೆ  ಕಛೇರಿಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದರು.

ಈ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಲೇಖಕ ಡಾಕ್ಟರ್ ಶರಣು ಹುಲ್ಲೂರು ,ಅಶ್ವಿನಿ ಪುನೀತ್ ರಾಜಕುಮಾರ್, ಪ್ರಕಾಶಕ ಜಮೀಲ್‌ ಸಾವಣ್ಣ ಮತ್ತು ಪಿ ಆರ್ ಕೆ ಸಂಸ್ಥೆಯ (Puneeth Rajkumar Biography) ಸತೀಶ್ ರವರು  ಕೂಡ ಹಾಜರಿದ್ದರು.

ಮಾರ್ಚ್ 15 2012ರಂದು ಮೊದಲ ಬಾರಿಗೆ ಈ ಪುಸ್ತಕವನ್ನು ಕಿಚ್ಚ ಸುದೀಪ್ (Kicha Sudeep) ಅವರು ಬಿಡುಗಡೆ ಮಾಡಿದ್ದರು. ನೀನೇ ರಾಜಕುಮಾರ ಪುಸ್ತಕ ಅಮೆಜಾನ್ ಸಪ್ನ(Sapna Book House) ಸೇರಿದಂತೆ ಅನೇಕ ಮಳಿಗೆಗಳಲ್ಲಿ ದಾಖಲೆ ರೀತಿಯಲ್ಲಿ ಮಾರಾಟವಾಗುತ್ತಿದೆ.

ಇದನ್ನೂ ನೋಡಿ:https://fb.watch/hvVU4xEQqE/

ಈ ಪುಸ್ತಕದಲ್ಲಿ ಅಪ್ಪು ರವರ ಜೀವನದ ಘಟನೆಗಳು ಸಮಾಜ ಸೇವೆ, ಸಿನಿಮಾ, ಹಾಗೂ ಅವರ ಅಪರೂಪದ ಕೆಲವು ಫೋಟೋಗಳನ್ನು ಕೂಡ ನೋಡಬಹುದಾಗಿದೆ.

https://vijayatimes.com/1930-to-2022-football-winners/

260ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಈ ಪುಸ್ತಕವು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ ಅಲ್ಲದೆ ಈ ಪುಸ್ತಕದೊಂದಿಗೆ ಪುನೀತ್ ರವರ ಸಹಿ ಇರುವಂತಹ ಫೋಟೋ ಮತ್ತು ಬುಕ್‌ ಮಾರ್ಕನ್ನು ಕೂಡ ಉಚಿತವಾಗಿ ಕೊಡಲಾಗುತ್ತಿದೆ.

ಸತತ ನಾಲ್ಕನೇ ಮುದ್ರಣಗಳಲ್ಲಿ ಮಾರಾಟವಾಗುತ್ತಿರುವ ಈ ಪುಸ್ತಕದ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ (Ashwini Punith Rajkumar) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,

ಪುನೀತ್ ರಾಜಕುಮಾರ್ ಅವರ ಬದುಕನ್ನು ಲೇಖಕರು ಅತ್ಯಂತ ಸೊಗಸಾಗಿ ವರ್ಣಿಸಿ ವರ್ಣಿಸಿದ್ದಾರೆ.

ಪತ್ರಕರ್ತ  ಶರಣು ಹುಲ್ಲೂರು ಪುನೀತ್ ರವರ ಜೊತೆ ಸಾಕಷ್ಟು ಸಂದರ್ಶನಗಳನ್ನು ಈ ಹಿಂದೆ ನಡೆಸಿದ್ದರು ಹಾಗೂ ಅವರ ಬಯೋಗ್ರಫಿ ಬರೆಯಬೇಕೆಂಬ ಯೋಚನೆ ಬಹಳ ಹಿಂದೆಯೇ ಮಾಡಿದ್ದರು ಈ ವಿಚಾರವನ್ನು ಅವರ ಬಳಿ ಪ್ರಸ್ತಾಪಿಸಿದ್ದರು.

ಆದರೆ ಅಪ್ಪುರವರು ನಿರಾಕರಿಸಿದ್ದರಂತೆ . ಪುನೀತ್ ರವರಿಗೆ ಒತ್ತಾಯ ಮಾಡಿದ ನಂತರ ಒಲ್ಲದ ಮನಸ್ಸಿನಿಂದ ಅವರು ಈ ಬಯೋಗ್ರಫಿಗೆ ಒಪ್ಪಿಗೆ ನೀಡಿದ್ದರು ಎಂದು ಪತ್ರಕರ್ತ ಶರಣು ಹುಲ್ಲೂರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: https://vijayatimes.com/i-am-modi-bilawal-bhutto/

ಈ ಪುಸ್ತಕಕ್ಕೆ ಖ್ಯಾತ ಪತ್ರಕರ್ತ ಮುರಳಿಧರ ಖಜಾನೆ ಇವರು ಮುನ್ನುಡಿ ಬರೆದಿದ್ದಾರೆ ಹಾಗೂ ಜೋಗಿ ಇವರು ಹಿನ್ನುಡಿ ಬರೆದಿದ್ದಾರೆ.

ಪತ್ರಕರ್ತ ಶರಣು ಇವರು ಈ ಹಿಂದೆ ಕಿಚ್ಚ ಸುದೀಪ್ ಅವರ ”ಕನ್ನಡ ಮಾಣಿಕ್ಯ ಕಿಚ್ಚ “ ಎಂಬ ಬಯೋಗ್ರಫಿ ಬರೆದಿದ್ದರು ಸುದೀಪ್ ರವರ ಹುಟ್ಟು ಹಬ್ಬದಂದು ಸ್ವತಃ ಪುನೀತ್ ರಾಜಕುಮಾರ್ ಅವರು ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದರು.
Exit mobile version