ಪುನೀತ್ ರಾಜ್‍ಕುಮಾರ್ ಅವರಿಗೆ ಅಭಿಮಾನಿಯೊಬ್ಬರು ಬರೆದ ಪತ್ರ ಹೀಗಿದೆ!

appu

ಹುಟ್ಟುಹಬ್ಬದ ಶುಭಾಶಯಗಳು ಡಾಕ್ಟರ್. ಪುನೀತ್ ರಾಜ್ ಕುಮಾರ್(Puneeth Rajkumar) ಸರ್ ಎಂದು ಹೇಳಿ ಪ್ರಾರಂಭಿಸುವ ನಿಮ್ಮ ಅಭಿಮಾನಿ(Fan) ನಾ….ಈ ದಿನ ಬರಿ ನಿಮ್ಮ ಹುಟ್ಟುಹಬ್ಬವಲ್ಲ, ಕರುನಾಡಿನ ಪ್ರತಿ ಮನೆಮನೆಯ ಹಬ್ಬವಾಗಿದೆ. ನೀವು ದೈಹಿಕವಾಗಿ ನಮ್ಮನ್ನೆಲ್ಲಾ ಅಗಲಿರಬಹುದು. ಆದರೆ ಅಂತರಂಗದಲ್ಲಿ ನಿಮ್ಮ ಅಚ್ಚು ಹಾಗೇ ಉಳಿದಿದೆ. ಬಲಗೈ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ಗಾದೆಗೆ ನೀವು ನಿದರ್ಶನರಾಗಿದ್ದೀರಿ. ಅದೆಷ್ಟೋ ಜೀವಗಳಿಗೆ, ಜೀವನಗಳಿಗೆ ನೀವು ಪೂಜಿಸುವಂಥ ದೇವರಾಗಿ ಇದ್ದೀರಿ.


ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಸಾರ್ ನಿಮಗೆ. 1976ರ ಪ್ರೇಮದ ಕಾಣಿಕೆ ಚಿತ್ರಕ್ಕಾಗಿ ಕ್ಯಾಮೆರಾ ಮುಂದೆ ಬಂದ 6 ತಿಂಗಳ ಮಗು ಮಾಸ್ಟರ್ ಲೋಹಿತ್ (ಪುನೀತ್ ರಾಜ್ ಕುಮಾರ್ )
1976 ರಿಂದ 1989, 14 ಚಿತ್ರಗಳಲ್ಲಿ ಬಾಲನಟರಾಗಿ ನಟಿಸಿದ್ದಾರೆ. 1982 ರ ಚಲಿಸುವ ಮೋಡಗಳು ಚಿತ್ರದಲ್ಲಿ ರಾಮು ಪಾತ್ರಕ್ಕೆ ಮೊದಲ ರಾಜ್ಯ ಪ್ರಶಸ್ತಿ ದೊರೆಯಿತು. ಅದು ಅತ್ಯುತ್ತಮ ಬಾಲ ನಟನಾಗಿ
1983 ರಲ್ಲೂ ಎರಡು ಕನಸು ಚಿತ್ರದಲ್ಲಿ ಮತ್ತೊಮ್ಮೆ ರಾಜ್ಯಪ್ರಶಸ್ತಿ ಅತ್ಯುತ್ತಮ ಬಾಲನಟರಾಗಿ ಮಿಂಚಿದರು.

1985ರ ಬೆಟ್ಟದ ಹೂವು ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ. 1989 ರಲ್ಲಿ ತೆರೆಕಂಡ ಪರಶುರಾಮ ಚಲನಚಿತ್ರ ಇವರ ಕಟ್ಟಕಡೆಯ ಬಾಲ ನಟನಾಗಿ ನಟಿಸಿದ ಚಿತ್ರ. 13 ವರ್ಷಗಳ ಬಳಿಕ ಮೊದಲ ಬಾರಿಗೆ 2002 ರಲ್ಲಿ ಪರಿಪೂರ್ಣ ನಾಯಕ ನಟನಾಗಿ ಅಪ್ಪು ಚಿತ್ರದಲ್ಲಿ ಅಭಿನಯಿಸುತ್ತಾರೆ. ಅಲ್ಲಿಂದ ಶುರುವಾದ ಇವರ ಸಿನಿ ಜರ್ನಿಯು ಹಿರಿಯರು ಕಿರಿಯರು ಎನ್ನದೆ ಎಲ್ಲರ ಮನ ಮುಟ್ಟುವಂತಿತ್ತು. ಅಪ್ಪು ಸಿನಿಮಾದಿಂದ ಶುರುವಾದ ಇವರ ಸಿನಿ ಜರ್ನಿಯೂ ಇಂದು ಜೇಮ್ಸ್ ಸಿನಿಮಾದ ತನಕ ಬಂದು ನಿಂತಿದೆ.

ಈ ನಡುವೆ ಅದೆಷ್ಟೋ ಅತ್ಯುತ್ತಮ್ಮ ನಾಯಕ ನಟ ಮತ್ತು ಸೈಮಾ ಅವಾರ್ಡ್ ಫಾರ್ ದಿ ಬೆಸ್ಟ್ ಆಕ್ಟರ್, ಹೀಗೆ ಹಲವಾರು ಪ್ರಶಸ್ತಿಗಳು ಅಪ್ಪು ಅವರನ್ನು ಅಪ್ಪಿಕೊಂಡಿದೆ. ಕಿರುತೆರೆಯಲ್ಲಿ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ದಿಂದ ಅವರ ಸರಳತೆ, ಸಜ್ಜನತೆ ಅವರ ಆ ಮುಗ್ಧ ನಗು, ನಿಷ್ಕಲ್ಮಶ ನಗು ಇಂದು ಎಲ್ಲರನ್ನು ಕಾಡುತ್ತಿದೆ.
ಅಪ್ಪು ಅವರ ಅಗಲಿಕೆಯ ನಂತರ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಹಾಗೆಯೇ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿಯನ್ನು ಸಹ ನೀಡಲಾಗಿದೆ. 29-10-2021 ರಂದು ಕರುನಾಡಿಗೆ ಬರಸಿಡಿಲು ಬಡಿದಂತೆ ಅಪ್ಪುರವರು ನಮ್ಮನ್ನೆಲ್ಲ ಅಗಲಿದರು. ಯುವ ಜನರಿಗೆ ಸ್ಫೂರ್ತಿ, ನೊಂದವರಿಗೆ ಶಕ್ತಿಯಾಗಿದ್ದ ನಮ್ಮ ನಿಮ್ಮೆಲ್ಲರ ಪ್ರೀತಿಯ ಅರಸು ಇಂದು ಕೇವಲ ನೆನಪಾಗಿ ಉಳಿದು ಬಿಟ್ಟರು ಎಂಬ ಸಂಗತಿಯನ್ನು ನಂಬಲು ಕಷ್ಟಸಾಧ್ಯ! ಅಪ್ಪು ಸರ್ ನಿಮ್ಮ ವ್ಯಕ್ತಿತ್ವಕ್ಕೆ ನಾನೆಂದೂ ಅಪ್ಪಟ, ಸರಳ ಅಭಿಮಾನಿಯಾಗಿರುವೆ.

Exit mobile version