ಪಂಜಾಬ್‌ನಲ್ಲಿ ನೈಟ್ ಕರ್ಫ್ಯೂ ಜಾರಿ: ಶಾಲಾ ಕಾಲೇಜು ಬಂದ್.

ಕಳೆದ ಕೆಲವು ದಿನಗಳಿಂದ ಪಂಜಾಬ್ ನಲ್ಲಿ ಸೋಂಕಿತರ ಸಂಖ್ಯೆಯು ಏರಿಕೆಯಾಗುತ್ತಿದೆ. ಪಂಜಾಬ್‌ನಲ್ಲಿ ಕೊರೊನಾ ಸೋಂಕು ಹೆಚ್ಚಿದ ಕಾರಣದಿಂದಾಗಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದಾರೆ ಮತ್ತು ಎಲ್ಲಾ ಶಾಲಾ ಕಲೇಜುಗಳನ್ನು ಬಂದ್ ಮಾಡಿದಾರೆ. ಪಂಜಾಬ್ನಲ್ಲಿ ನೈಟ್ ಕರ್ಫ್ಯೂ ರಾತ್ರಿ 10 ರಿಂದ 5 ವರೆಗು ವಿಧಿಸಿದ್ದು ಕಠಿಣ ನಿರ್ಬಂಧಗಳನ್ನು ಸೂಚಿಸಿದ್ದಾರೆ

ಕಳೆದ ಕೆಲವು ದಿನಗಳಿಂದ ಪಂಜಾಬ್ನಲ್ಲಿ ಸೋಂಕಿತರ ಸಂಖ್ಯೆಯು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಕ ಚೇರಿಗಳು, ಕಾರ್ಖಾನೆಗಳು ಇತರೆ ಯಾವುದೇ ಕೈಗಾರಿಕೆಗಳಿಗೆ ಹಾಜರಾಗಲು ಎರಡು  ಡೋಸ್‌ ಲಸಿಕೆ ಹಾಕಿಸಿಕೊಂಡಿರಬೇಕು ಇಲ್ಲದಿದರೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಎಲ್ಲಾ ಶಿಕ್ಷಣ  ಸಂಸ್ಥೆಗಳು ಸೇರಿದಂತೆ ಶಾಲೆಗಳು , ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಕೋಂಚಿಂಗ್ ಸಂಸ್ಥೆಗಳನ್ನು ಮುಚ್ಚಲಾಗಿದೆ.

ಬಾರ್‌ಗಳು, ಸಿನಿಮಾ ಹಾಲ್‌ಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಸ್ಪಾಗಳು ಸಿಬ್ಬಂದಿಗೆ ಎರಡೂ ಡೋಸ್‌ಗಳಲ್ಲಿ ಲಸಿಕೆ ಹಾಕಿದರೆ ಮಾತ್ರ ಶೇಕಡಾ 50 ರಷ್ಟು ಕಾರ್ಯನಿರ್ವಹಿಸಬಹುದು. ಆದಾಗ್ಯೂ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು ಎಂದು ಆದೇಶ ಹೊರಡಿಸಿದ್ದಾರೆ.

Exit mobile version