ಪ್ರಧಾನಿಗೆ ದಿಗ್ಬಂಧನ ಹಾಕಿದ ಪಂಜಾಬ್‌ ರೈತರು

ಸೂಕ್ತ ಭದ್ರತೆ ಒದಗಿಸದ ಕಾರಣ ಪ್ರಧಾನಿ ಮೋದಿಯವರು ಪ್ರಯಾಣಿಸುತ್ತಿದ್ದ ವೇಳೆ ಪ್ರತಿಭಟನಾಕಾರರ ಮಧ್ಯೆ ಸಿಲುಕಿದ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಇಂದು ಪಂಜಾಬ್‌ನಲ್ಲಿ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡ ಘಟನೆ ನಡೆದಿದೆ. ಈ ಘಟನೆಯನ್ನು ಕೇಂದ್ರ ಗೃಹ ಸಚಿವಾಲಯವು ದೊಡ್ಡ ಭದ್ರತಾ ಪ್ರಮಾದ ಎಂದು ಬಣ್ಣಿಸಿದೆ.

ಪಂಜಾಬ್‌ನಲ್ಲಿ ಪ್ರಧಾನಿಯವರ ಪ್ರಯಾಣದಲ್ಲಿ ಪ್ರಮುಖ ಭದ್ರತಾ ಲೋಪವಾದ ಹಿನ್ನೆಲೆಯಲ್ಲಿ ಅವರ ಬೆಂಗಾವಲು ಪಡೆ ಹಿಂತಿರುಗಲು ನಿರ್ಧರಿಸಿತು ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಸಚಿವಾಲಯವು ಪಂಜಾಬ್ ಸರ್ಕಾರವನ್ನು ಲೋಪಕ್ಕೆ ಹೊಣೆಗಾರನಾಗಿ ಮಾಡಿದೆ ಮತ್ತು ಘಟನೆ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಕೇಳಿದೆ ಎಂದು ಹೇಳಿಕೆ ತಿಳಿಸಿದೆ.

“ಪ್ರಧಾನಿ ಭದ್ರತೆಯಲ್ಲಿ ಗಂಭೀರವಾದ ಭದ್ರತಾ ಲೋಪವನ್ನು ಕೇಂದ್ರ ಗೃಹ ಸಚಿವಾಲಯ ಗಮನಿಸಿದೆ, ಪಂಜಾಬ್ ಸರ್ಕಾರದಿಂದ ವಿವರವಾದ ವರದಿಯನ್ನು ಕೇಳಲಾಗಿದೆ” ಎಂದಿದೆ.

ಘಟನೆ ನಡೆದಾಗ ಪ್ರಧಾನಿಯವರು ಬಟಿಂಡಾದಿಂದ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳುತ್ತಿದ್ದರು. ಪಂಜಾಬ್‌ನಲ್ಲಿ ಪ್ರಧಾನಿಯವರ ಪ್ರಯಾಣದಲ್ಲಿ ಪ್ರಮುಖ ಭದ್ರತಾ ಲೋಪದ ನಂತರ, ಅವರ ಬೆಂಗಾವಲು ಪಡೆ ಮತ್ತೆ ಬಟಿಂಡಾ ವಿಮಾನ ನಿಲ್ದಾಣಕ್ಕೆ ತೆರಳಲು ನಿರ್ಧರಿಸಿತು ಎಂದು ಸಚಿವಾಲಯ ಮಾಹಿತಿ ನೀಡಿದೆ.

Exit mobile version