ಪುಟ್ಟ ಬಾಲಕನ ಅನನ್ಯ ಸಾಧನೆಗೆ ಶಿಕ್ಷಣಾಧಿಕಾರಿಗಳ ಶಹಭಾಸ್‌ಗಿರಿ…!

ಸಾಧನೆಯ ಹಂಬಲ ಎಲ್ಲಿಗೂ ಇದ್ದೇ ಇರುತ್ತದೆ. ಕೆಲವರು ತಮ್ಮ ಎಳೆ ವಯಸ್ಸಿನಲ್ಲಿಯೇ ಸಾಧನೆಯ ಶಿಖರವನ್ನು ಏರಿರುತ್ತಾರೆ. ಈಗಿನ ಕಾಲದಲ್ಲಿ ಪುಟಾಣಿ ಮಕ್ಕಳ ಬುದ್ಧಿಮತ್ತೆಯು ಎಲ್ಲರಿಗಿಂತ ಹೆಚ್ಚಿನ ಸಾಮಥ್ರ್ಯವನ್ನು ಹೊಂದಿದೆ. ಕೆಲವು ಪುಟಾಣಿ ಮಕ್ಕಳಂತು, ಅತೀ ತೀಕ್ಷ್ಣ ಬುದ್ಧಿಯನ್ನುಳ್ಳವರಾಗಿರುತ್ತಾರೆ. ಕೆಲವೊಮ್ಮೆ, ದೊಡ್ಡವರು ನಿಬ್ಬೆರರಗಾಗುವಂತಹ ಸಾಧನೆಗಳನ್ನು ಅತೀ ಕಿರಿಯ ವಯಸ್ಸಿನ ಮಕ್ಕಳು ಮಾಡುತ್ತಾರೆ.

ಇದಕ್ಕೆ ದೃಷ್ಟಾಂತವೆನ್ನುವಂತೆ 2 ವರ್ಷ 4 ತಿಂಗಳಿನ ತಾನೀಶ್.ಎನ್ ಎಂಬ ಹುಡುಗ ನಾಲ್ಕು ರೆಕಾರ್ಡ್‌ಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಇವನು ಕೋಲಾರ ಜಿಲ್ಲೆಯ  ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದ ಯುವಕವಿ ಲಕ್ಕೂರು ಎಂ.ನಾಗರಾಜ್ ಹಾಗೂ ಶ್ರೀಮತಿ ಶ್ವೇತನಾಗರಾಜ್ ದಂಪತಿಯ ಪುತ್ರ. ಈ ಹುಡುಗನನ್ನು ಗುರುತಿಸಿದ ಮಾಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕಚೇರಿಗೆ ಕರೆಸಿ ಗೌರವಿಸಿದರು.  

ಮಾಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣಮೂರ್ತಿ Indian book of world record ಸಾಧಕ ಕಂದ ತಾನೀಶ್ ಎನ್‌ಗೆ ಅಭಿನಂದಿಸಿ ಮಾತನಾಡುತ್ತಾ “ಕೇವಲ 2 ವರ್ಷ 4 ತಿಂಗಳ ಮಗುವಿನ ಈ ಮಹತ್ತರ ಸಾಧನೆ, ಪ್ರಸ್ತುತ ಎಲ್ಲಾ ಮಕ್ಕಳಿಗೆ ಸ್ಪೂರ್ತಿಯಾಗಬೇಕು. ಈ ಸಣ್ಣ ವಯಸ್ಸಿನಲ್ಲಿ ದೇಶದ ಹಲವು ಪ್ರಮುಖ ವಿಚಾರಗಳ ಬಗ್ಗೆ ಹೇಳುವ ಈ ಸಾಧಕನ ಜ್ಞಾನಕ್ಕೆ ನಾವು ಅಭಿನಂದಿಸುತ್ತೇವೆ. ಮಗುವಿನ ಬಗ್ಗೆ ಪೋಷಕರು ಹೊಂದಿರುವ ಜವಾಬ್ದಾರಿಯುತ ಕಾಳಜಿ, ಪ್ರೋತ್ಸಾಹ, ಬೆಳವಣಿಗೆ ತನ್ನ ಉತ್ತಮ ಸಾಧನೆಗೆ ಶಕ್ತಿ ಎಂದರು. ತಾ‌ನೀಶ್. ಎನ್‌ನ ಮುಂದಿನ ಗಿನ್ನಿಸ್ ದಾಖಲೆಯ ಹಾದಿ ಸುಗಮವಾಗಿ ನಮ್ಮ ರಾಷ್ಟ್ರಕ್ಕೆ ಉತ್ತಮ ಹೆಸರು ತಂದು ಕೊಡಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ತಾನೀಶ್. ಎನ್‌ರವರ ತಂದೆ ಲಕ್ಕೂರು ಎಂ ನಾಗರಾಜ್ ಮಾತನಾಡುತ್ತಾ “ನನ್ನ ಶಿಕ್ಷಕ ವೃತ್ತಿಯ ತರಬೇತಿಯ ಗುರುಗಳಾಗಿದ್ದ ನನ್ನ ಮಾರ್ಗದರ್ಶಕರಾದ ಮಾಲೂರಿನ BEO ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿನಂದನೆಯ ಸಲ್ಲಿಕೆ ಹಾಗೂ ಅವನಿಗೆ ಅವರಿಂದ Indian book of world record ಪ್ರಶಸ್ತಿ ಸಮರ್ಪಣೆ ನಿಜಕ್ಕೂ ಬಹಳ ಸಂತಸವಾಗಿದೆ ಎಂದರು.

Exit mobile version