ಜನಾಂಗೀಯ ನಿಂದನೆ ಹಾಗೂ ಸೆಕ್ಸಿ ಟ್ವೀಟ್‌: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಇಂಗ್ಲೆಂಡ್ ಆಟಗಾರ ಓಲೀ ರಾಬಿನ್ಸನ್ ವಜಾ

ಲಂಡನ್, ಜೂ. 07: ಜನಾಂಗೀಯ ನಿಂದನೆ ಹಾಗೂ ಸೆಕ್ಸಿ ಟ್ವೀಟ್‌ ಮಾಡಿದ್ದ ಇಂಗ್ಲೆಂಡ್‌ ಕ್ರಿಕೆಟ್ ತಂಡದ ಆಟಗಾರ ಓಲೀ ರಾಬಿನ್ಸನ್‌ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ವಜಾಗೊಳಿಸಲಾಗಿದೆ.

ಯುವ ಆಟಗಾರ ಓಲೀ ರಾಬಿನ್ಸನ್, 2012 ಮತ್ತು 2013ರಲ್ಲಿ ಮಾಡಿದ್ದ ಟ್ವೀಟ್, ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.‌ ಇದರಿಂದಾಗಿ ರಾಬಿನ್ಸನ್ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದರು. ಆದರೆ‌ ಟ್ವೀಟ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ, ಓಲೀ ರಾಬಿನ್ಸನ್ ಅವರನ್ನು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.

ಓಲೀ ರಾಬಿನ್ಸನ್ ಇತ್ತೀಚೆಗೆ ಲಾರ್ಡ್ಸ್ ನಲ್ಲಿ ನಡೆದ ನ್ಯೂಜಿ಼ಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಇದರ ಬನ್ನಲ್ಲೇ ವರ್ಷಗಳ ಹಿಂದೆ ಅವರು ಮಾಡಿದ್ದ ಟ್ವೀಟ್ ಕುರಿತು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಟ್ವೀಟ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ECB, ಓಲೀ ರಾಬಿನ್ಸನ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಈ ಬಗ್ಗೆ ಮುಂದಿನ ತನಿಖೆಗೂ ಆದೇಶ ನೀಡಿದೆ.

ಪರಿಣಾಮ ಲಾರ್ಡ್ಸ್‌ ಪಂದ್ಯದಲ್ಲಿ “ಟೆಸ್ಟ್‌ ಕ್ಯಾಪ್‌” ಧರಿಸಿದ ಸಂಭ್ರಮದ ಜೊತೆಗೆ ಮೊದಲ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್‌ ಪಡೆದ ಸಂಭ್ರಮದಲ್ಲಿದ್ದ ಓಲೀ ರಾಬಿನ್ಸನ್, ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನ ಕೇವಲ ಒಂದೇ ಪಂದ್ಯಕ್ಕೆ ಸೀಮಿತಗೊಂಡಿದೆ.

Exit mobile version