ಟ್ಯಾನ್ ಆಗ್ತೀನಿ ಎಂದು ನನ್ನ ತಾಯಿ ನನಗೆ ಸನ್ ಸ್ಕ್ರೀನ್ ಕಳುಹಿಸಿದ್ದಾರೆ, ಆದರೆ ನಾನು ಅದನ್ನು ಬಳಸುವುದಿಲ್ಲ : ರಾಹುಲ್ ಗಾಂಧಿ

politics

Bellary : ನನ್ನ ತಾಯಿ ನನಗೆ ಸನ್ಸ್ಕ್ರೀನ್ ಕ ಳುಹಿಸಿದ್ದಾರೆ, ಆದರೆ ನಾನು ಅದನ್ನು ಬಳಸುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi about sun screen) ತಮ್ಮ ಮುಖದ ಟ್ಯಾನಿಂಗ್‌ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅವರ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಸದ್ಯ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಸಾಗುತ್ತಿರುವ “ಭಾರತ್‌ ಜೋಡೋ ಯಾತ್ರೆ”(Rahul Gandhi about sun screen) ಪಾದಯಾತ್ರೆ ಬಳ್ಳಾರಿಯಲ್ಲಿ ಸಾಗುತ್ತಿದ್ದು,

ಈ ವೇಳೆ ಸ್ಥಳೀಯರೊಂದಿಗೆ ರಾಹುಲ್‌ ಗಾಂಧಿ ಸಂವಾದ ನಡೆಸಿದರು. ಈ ವೇಳೆ ಸ್ಥಳೀಯರೊಬ್ಬರು, “ನೀವು ಕಳೆದ ಅನೇಕ ದಿನಗಳಿಂದ ಯಾತ್ರೆಯಲ್ಲಿ ನಡೆಯುತ್ತಿದ್ದೀರಿ.

https://vijayatimes.com/cover-story-donation-scam/

ಯಾತ್ರೆಯ ವೇಳೆ ಮುಖವು ಟ್ಯಾನಿಂಗ್ ಆಗುವುದನ್ನು ಹೇಗೆ ತಪ್ಪಿಸುತ್ತೀರಿ? ನೀವು ಯಾವ ಸನ್ಸ್ಕ್ರೀನ್ ಬಳಸುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್‌ ಗಾಂಧಿ, “ನನ್ನ ತಾಯಿ ನನಗೆ ಸನ್ಸ್ಕ್ರೀನ್ ಕಳುಹಿಸಿದ್ದಾರೆ, ಆದರೆ ನಾನು ಯಾವುದೇ ಸನ್ಸ್ಕ್ರೀನ್ ಬಳಸುವುದಿಲ್ಲ.” ಎಂದಿದ್ದಾರೆ.

https://fb.watch/gdUU-PuSVP/

ಇದೇ ವೇಳೆ ರಾಹುಲ್ ಅವರ ಸನ್ಸ್ಕ್ರೀನ್ ಬಗ್ಗೆ ಕೇಳಿದ ಇನ್ನೊಬ್ಬರು “ನಿಮ್ಮ ಮುಖವು ಸನ್ಶೈನ್ ಆಗಿದೆ” ಎಂದು ರಾಹುಲ್‌ ಗಾಂಧಿ ಅವರನ್ನು ಹೊಗಳಿದ್ದಾರೆ. ಇನ್ನು ರಾಹುಲ್ ಗಾಂಧಿ ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ.

ಮುರುಘಾ ಶ್ರೀ ಸೇರಿ ಏಳು ಜನರ ವಿರುದ್ದ ಮತ್ತೊಂದು FIR!

ಪಕ್ಷದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ಯಾತ್ರೆಗೆ ವಿರಾಮ ನೀಡಲಾಗಿತ್ತು. ಕರ್ನಾಟಕದ ಬಳ್ಳಾರಿಯಲ್ಲಿ ಯಾತ್ರೆಯ ಕ್ಯಾಂಪ್ಸೈಟ್ನಲ್ಲಿಯೇ ರಾಹುಲ್‌ ಗಾಂಧಿ ಅಧ್ಯಕ್ಷೀಯ ಚುನಾವಣೆಗೆ ಮತ ಚಲಾಯಿಸಿದರು. ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರು 24 ವರ್ಷಗಳ ನಂತರ ಮೊದಲ ಗಾಂಧಿಯೇತರ ಮುಖ್ಯಸ್ಥರಾಗುವ ರೇಸ್ನಲ್ಲಿದ್ದಾರೆ.

https://youtu.be/X0N-X9ugedA ಕಂಠೀರವ ಕಿರಿಕ್‌ ! ಕಂಠೀರವ ಸ್ಟೇಡಿಯಂ ಒಳಗೆ ಅಥ್ಲೀಟ್ಸ್‌ಗೆ ಅವಕಾಶ ಪ್ರವೇಶವಿಲ್ಲ. COVER STORY

ಸದ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಶಶಿ ತರೂರ್ ವಿರುದ್ಧ ಭಾರಿ ಮತಗಳಿಸಿದ್ದಾರೆ ಎಂಬ ಊಹೆಗಳು ಹರಿದಾಡುತ್ತಿವೆ. ಒಟ್ಟಾರೆ ಬುಧವಾರ ಮತ ಎಣಿಕೆ ಪ್ರಕ್ರಿಯೆ ಮುಗಿದು, ಇಬ್ಬರ ಪೈಪೋಟಿಯಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನ ಮುಡಿಗೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version