ಇಂದಿನ ಇ.ಡಿ ವಿಚಾರಣೆಗೂ ಮುನ್ನವೇ ಕಾಂಗ್ರೆಸ್ ಕಛೇರಿ ಸುತ್ತಮುತ್ತ ಪೊಲೀಸರ ಬಿಗಿ ಭದ್ರತೆ!

congress

ನ್ಯಾಷನಲ್ ಹೆರಾಲ್ಡ್(National Herald Case) ಮನಿ ಲಾಂಡರಿಂಗ್(Money Laundering) ಪ್ರಕರಣದಲ್ಲಿ ಸೋಮವಾರ ಜಾರಿ ನಿರ್ದೇಶನಾಲಯವು(ED) 10 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ, ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಅವರು ಇಂದು (ಜೂನ್ 14) ಮತ್ತೆ ಫೆಡರಲ್ ತನಿಖಾ ಸಂಸ್ಥೆಯ ಮುಂದೆ ಹೇಳಿಕೆ ನೀಡಲು ಸಿದ್ಧರಾಗಿದ್ದಾರೆ.

ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ಕೇಂದ್ರೀಯ ಸಂಸ್ಥೆಯ ಮುಂದೆ ಹಾಜರಾದರು. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಬೃಹತ್ ಗುಂಪಿನ ನೂಕುನುಗ್ಗಲಿನ ಮಧ್ಯೆ ದೆಹಲಿಯ ಇ.ಡಿ ಕಚೇರಿಗೆ(Delhi ED Office) ಆಗಮಿಸಿದರು. ದೆಹಲಿ ಮತ್ತು ರಾಜ್ಯ ರಾಜಧಾನಿಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು ಮತ್ತು ರಾಹುಲ್, ಸೋನಿಯಾ ಗಾಂಧಿಯವರಿಗೆ ಸಮನ್ಸ್ ನೀಡಿರುವುದನ್ನು ವಿರೋಧಿಸಿ ಹಲವಾರು ಹಿರಿಯ ನಾಯಕರನ್ನು ಬಂಧಿಸಲಾಯಿತು.

ಇಂದು ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಇಡಿ ಕಚೇರಿವರೆಗೆ ಪೊಲೀಸ್ ಪಡೆಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಿದ್ದು,
ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ದೆಹಲಿ ಪೊಲೀಸ್ ಆರ್‌ಎಎಫ್ ಸೇರಿದಂತೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ದೊಡ್ಡ ಪ್ರಮಾಣದ ನಿಯೋಜನೆಗೊಂಡಿದೆ, ಇದು 2 ಕಿಲೋಮೀಟರ್ ದೂರದಲ್ಲಿರುವ ಇಡಿ ಕಚೇರಿಯವರೆಗೆ ಇದೆ. ಇ.ಡಿ ಮತ್ತೆ ರಾಹುಲ್ ಗಾಂಧಿಗೆ ಸಮನ್ಸ್(Summons) ನೀಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ.


ಇಂದು ಬೆಳಗ್ಗೆ 9 ಗಂಟೆಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಂಸದರು ಮತ್ತೆ ಸಮಾವೇಶಗೊಳ್ಳಲಿದ್ದು, ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇ.ಡಿ ಮುಂದೆ ಎರಡನೇ ಬಾರಿಗೆ ಹಾಜರಾಗಲಿದ್ದಾರೆ. ಸೋಮವಾರ ನಡೆದ 10 ಗಂಟೆಗಳ ಸುದೀರ್ಘ ವಿಚಾರಣೆಯಲ್ಲಿ ಕೆಲವು ಪ್ರಶ್ನೆಗಳನ್ನು ಒಳಗೊಂಡಿಲ್ಲದ ಕಾರಣ ರಾಹುಲ್ ಗಾಂಧಿ ಅವರನ್ನು ಮತ್ತೆ ಕರೆಸಲಾಗಿದೆ ಎಂದು ಇ.ಡಿ ಹೇಳಿದೆ.

Exit mobile version