ರಾಹುಲ್ ಗಾಂಧಿಗೆ ಇ.ಡಿ ವಿಚಾರಣೆ : 3ನೇ ದಿನ ; ಕಾಂಗ್ರೆಸ್ ನಡೆ ಮುಂದೇನು??

ರಾಹುಲ್ ಗಾಂಧಿ(Rahul Gandhi) ವಿರುದ್ಧ ಇ.ಡಿ(ED) ಕ್ರಮಕ್ಕೆ ಕಾಂಗ್ರೆಸ್(Congress) ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಅಶೋಕ್ ಗೆಹ್ಲೋಟ್, ಭೂಪೇಶ್ ಬಾಘೇಲ್, ಮಲ್ಲಿಕಾರ್ಜುನ ಖರ್ಗೆ ಮತ್ತು ರಣದೀಪ್ ಸುರ್ಜೆವಾಲಾ, ರಾಹುಲ್ ಗಾಂಧಿ ವಿರುದ್ಧ ಇ.ಡಿ ತೆಗೆದುಕೊಂಡಿರುವ ಕ್ರಮದಿಂದ ಆಡಳಿತ ವ್ಯವಸ್ಥೆಗೆ ಹೆಚ್ಚು ನಷ್ಟವಾಗಲಿದೆ ಎಂದು ಹೇಳಿದ್ದಾರೆ.

ಸತತ ಮೂರನೇ ದಿನವೂ ಇ.ಡಿ ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಕರೆದಿದ್ದು, ಎಂದಿನಂತೆ ವಿಚಾರಣೆಯನ್ನು ಮುಂದುವರೆಸಿದೆ. ಇ.ಡಿ ವಿಚಾರಣೆಗೆ ಮೂರನೇ ದಿನವೂ ಹಾಜರಾದ ರಾಹುಲ್ ಗಾಂಧಿ ಅವರ ಪರವಾಗಿ ಕಾಂಗ್ರೆಸ್ ನಾಯಕರು ಸೇರಿದಂತೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು(Delhi Police) ಎಐಸಿಸಿ ಕಚೇರಿಯ ಒಳಗೆ ಮತ್ತು ಹೊರಗೆ ಪ್ರವೇಶಿಸುವುದನ್ನು ನಿರ್ಬಂಧಿಸುವ ಕುರಿತು ಮಾತನಾಡುತ್ತಾ, ಬಾಘೇಲ್, “ನಾವು ಈಗ ನಮ್ಮ ಸ್ವಂತ ಸಿಬ್ಬಂದಿಯನ್ನು ಎಐಸಿಸಿ ಕಚೇರಿಗೆ ಕರೆತರಲು ಸಾಧ್ಯವಿಲ್ಲ!

ಕೇವಲ 2 ಮುಖ್ಯಮಂತ್ರಿಗಳು ಇಲ್ಲಿಗೆ ಬರಬಹುದು ಮತ್ತು ಬೇರೆಯವರ ಅನುಮತಿ ಇಲ್ಲ ಎಂದು ನಮಗೆ ತಿಳಿಸಲಾಗಿದೆ. ತಾನು ಗೃಹಬಂಧನದಲ್ಲಿದ್ದೇನೆ ಎಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಹೇಳಿಕೊಂಡಿದ್ದಾರೆ. ದೆಹಲಿಯ ಟಾಲ್ಕಟೋರಾದಲ್ಲಿರುವ ತಮ್ಮ ಮನೆಯಿಂದ ಹೊರಗೆ ಕಾಲಿಡಲು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಅವರ ಕಚೇರಿ ಹೇಳಿಕೆ ನೀಡಿದೆ. ಅವರ ಮನೆಯ ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಹೆಚ್ಕ್ಯುಗೆ ತೆರಳಲು ಅವರಿಗೆ ಅವಕಾಶ ನೀಡುತ್ತಿಲ್ಲ.

ನ್ಯಾಷನಲ್ ಹೆರಾಲ್ಡ್(National Herald Case) ಮನಿ ಲಾಂಡರಿಂಗ್(Money Laundering) ಪ್ರಕರಣದಲ್ಲಿ ಕಾಣಿಸಿಕೊಂಡ ಎರಡನೇ ದಿನವಾದ ಮಂಗಳವಾರ ರಾಹುಲ್ ಗಾಂಧಿ ಅವರನ್ನು 10 ಗಂಟೆಗಳ ಕಾಲ ಇಡಿ ಪ್ರಶ್ನಿಸಿದೆ. ಅವರು ಇಂದು ಜೂನ್ 15 ರಂದು ಮತ್ತೊಮ್ಮೆ ಫೆಡರಲ್ ತನಿಖಾ ಸಂಸ್ಥೆಯ ಮುಂದೆ ಹಾಜರಾಗಿದ್ದಾರೆ. ದೆಹಲಿಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ(Sonia Gandhi) ಸಮನ್ಸ್(Summons) ನೀಡಿರುವುದನ್ನು ವಿರೋಧಿಸಿ ಹಲವಾರು ಹಿರಿಯ ನಾಯಕರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಈ ಕುರಿತು ಕಾಂಗ್ರೆಸ್ ನಾಯಕರು ಇದೊಂದು ಸುಳ್ಳು ಪ್ರಕರಣ, ಆಡಳಿತರೂಢ ಈ ಕೆಲಸ ಮಾಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

Exit mobile version