ಬಿಜೆಪಿ ನಾಯಕರೇ ತಮ್ಮ ಆಡಳಿತದಲ್ಲಿ ಹೆಚ್ಚಿದ ಅಕ್ರಮಗಳ ಬಗ್ಗೆ ತುಟಿ ಬಿಚ್ಚದಿರುವುದೇಕೆ? : ಕಾಂಗ್ರೆಸ್

Karnataka : ರಾಜ್ಯ ರಾಜಕೀಯ ರಣರಂಗದಲ್ಲಿ ಕಾಂಗ್ರೆಸ್, ಬಿಜೆಪಿ ಆರೋಪ-ಪ್ರತ್ಯಾರೋಪವೆಂಬ ಅಸ್ತ್ರಗಳನ್ನು ಬಳಸಿ ಯುದ್ದವನ್ನು ಸಾರುತ್ತಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ(rahul gandhi questiond bjp), ಸಿದ್ದರಾಮಯ್ಯ,

ಡಿ.ಕೆ ಶಿವಕುಮಾರ್(rahul gandhi questiond bjp) ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಪಹಾಸ್ಯ ಮಾಡುತ್ತಾರೆ.

ಅದರಲ್ಲೂ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ (Kanyakumari) ಕಾಶ್ಮೀರದವರೆಗೆ (Kashmir) ಆರಂಭಿಸಿದ ಮೊದಲ ದಿನದಿಂದಲೂ ಕಾಂಗ್ರೆಸ್ ಪಕ್ಷವನ್ನು ಒಂದಲ್ಲ ಒಂದು ರೀತಿ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಇದೇ ರೀತಿ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಹಗರಣಗಳನ್ನು ಉಲ್ಲೇಖಿಸಿ 40% ಸರ್ಕಾರ, ಪೇ ಸಿಎಂ, ಪಿಎಸ್ಐ ಹಗರಣ,

ಇದನ್ನೂ ಓದಿ : https://vijayatimes.com/siddaramaih-tweet-bjp/

ಗುತ್ತಿಗೆದಾರ ಸಂತೋಷ್ ಸಾವು, ವೋಟರ್ ಲಿಸ್ಟ್ ಹಗರಣ ಸೇರಿದಂತೆ ಒಂದು ಪಟ್ಟಿಯನ್ನೇ ಮಾಡಿ ಬಿಜೆಪಿ ನಾಯಕರನ್ನು ಹಂತ ಹಂತವಾಗಿ ಪ್ರಶ್ನಿಸುವ ಮುಖೇನ ಬಿಜೆಪಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಅಪಹಾಸ್ಯ ಮಾಡುವಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ.

ಸದ್ಯ ಇದೇ ರೀತಿ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಮಧ್ಯೆ ಇದೀಗ ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಾಜ್ಯ ಬಿಜೆಪಿ ( BJP) ಸರ್ಕಾರದ ಹಗರಣದ ಅಂಕಣವನ್ನು ಮುಂದಿಟ್ಟು ಪ್ರಶ್ನಿಸಿದೆ.

ರಾಜ್ಯ ಕಾಂಗ್ರೆಸ್ ಮಾಡಿರುವ ಟ್ವೀಟ್ ಹೀಗಿದೆ, “ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಕಾತಿ ಹಗರಣದ ಬೆನ್ನಿಗೆ ನಕಲಿ ಮಾರ್ಕ್ಸ್ ಕಾರ್ಡ್ ಅಕ್ರಮ ಬೆಳಕಿಗೆ ಬಂದಿದೆ.

ಇದನ್ನೂ ನೋಡಿ : https://fb.watch/hkdrFJokDj/ COVER STORY | ಬದುಕಲು ಬಿಡಿ !ಅಂತ ಬೇಡಿ ಬೇಡಿ ಕೇಳುತ್ತಿದ್ದಾರೆ ಕರುನಾಡಿನ ಆದಿವಾಸಿಗಳು.

ದಿನಕ್ಕೊಂದು ಅಕ್ರಮ ಹೊರಬರುತ್ತಿದ್ದರೂ ರಾಜ್ಯ ಬಿಜೆಪಿ ನಾಯಕರು ತಮ್ಮ ಆಡಳಿತದಲ್ಲಿ ಹೆಚ್ಚಿದ ಅಕ್ರಮಗಳ ಬಗ್ಗೆ ತುಟಿ ಬಿಚ್ಚದಿರುವುದೇಕೆ? ಈ ಎಲ್ಲಾ ಅಕ್ರಮಗಳಿಗೂ ಸರ್ಕಾರದ ಸಹಕಾರವಿದೆಯೇ ಸಚಿವ ಅಶ್ವಥ್ ನಾರಾಯಣ್ (Ashwath Narayan) ಅವರೇ?” ಎಂದು ಪ್ರಶ್ನಿಸುವ ಮುಖೇನ ಬಿಜೆಪಿ ನಾಯಕರು, ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ.
Exit mobile version