ಮೋದಿ ಸರ್ಕಾರ ಅಲ್ಲ ಇದು ಅದಾನಿ ಸರ್ಕಾರ ಎಂದು ಟಾಂಗ್ ನೀಡಿದ ರಾಹುಲ್ ಗಾಂಧಿ

Tirunelveli : ದೇಶದಲ್ಲಿ ಬಿರುಗಾಳಿ ಎದ್ದಿದ್ದು, ನರೇಂದ್ರ ಮೋದಿ (Narendra Modi) ಸರ್ಕಾರ ಪತನಗೊಳ್ಳಲಿದೆ. ಈಗಾಗಲೇ ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರ ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ಸಂಸದರು ಹಾಗೂ ಬಿಜೆಪಿ ಅಭ್ಯರ್ಥಿಗಳು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ ಇನ್ನು ನಿಜವಾಗಿಯೂ ಅಧಿಕಾರಕ್ಕೆ ಬಂದರೆ ಸಂವಿಧಾನ ಮಾತ್ರವಲ್ಲ ನಮ್ಮೆಲ್ಲರ ಜೀವನ ಕಷ್ಟಕರವಾಗಲಿದೆ.ಪ್ರಜಾಪ್ರಭುತ್ವ ದ ಮೇಲೆ ದಬ್ಬಾಳಿಕೆ ನಡೆಯುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಆರೋಪಿಸಿದ್ದಾರೆ.

ತಮಿಳುನಾಡಿನಲ್ಲಿ (Tamilnadu) ತನ್ನ ಮೊದಲ ಚುನಾವಣಾ ಪ್ರಚಾರ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ದೇಶದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಿಜೆಪಿ ಕೆಲ ಸಂಸದರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಬೇಕೆಂದರೆ ಕೇಂದ್ರದಲ್ಲಿ ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬರಬೇಕು , ಬಡವರು ಮಹಿಳೆಯರು ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದಿದ್ದಾರೆ.

ಇದು ಮೋದಿ ಸರ್ಕಾರ ಅಲ್ಲ. ಅದಾನಿ ಸರ್ಕಾರ. ದೇಶದ ಎಲ್ಲ ಸರ್ಕಾರಿ ಸೊತ್ತುಗಳು ಅದಾನಿ ಪಾಲಾಗುತ್ತಿವೆ. ಮುಂದೆ ನಾವೆಲ್ಲ ಅವರ ಮುಂದೆ ಕೈ ಕಟ್ಟಿ ನಿಲ್ಲಬೇಕು.ದೇಶವನ್ನೇ ಮಾರಾಟ ಮಾಡಲು ಬಿಜೆಪಿ ಸರ್ಕಾರ ಯೋಚಿಸುವುದಿಲ್ಲ.ಕಾಂಗ್ರೆಸ್‌ ಪಕ್ಷ ಸದಾ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಅದರ ಭಾಗವಾಗಿಯೇ ಭಾರತ್‌ ಜೋಡೊ ಯಾತ್ರೆಯನ್ನು (Bharath Jodo Yatra) ಕೈಗೊಂಡಿದ್ದೇವೆ . ಜನರ ಕಷ್ಟ ಸುಖಗಳ ಕುರಿತು ತಿಳಿದಿದ್ದೇವೆ.ಈ ಭಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಭಾರತದಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಸಿ ಜನರಿಗೆ ಒಳಿತನ್ನೇ ಮಾಡುತ್ತೇವೆ ಭರವಸೆ ನೀಡಿದ್ದಾರೆ.

Exit mobile version