ಬಿಜೆಪಿ, RSSಗೆ ‘ಜೈ ಸಿಯಾ ರಾಮ್’ ಕುರಿತು ಪಾಠ ಮಾಡಿದ ರಾಹುಲ್ ಗಾಂಧಿ!

Bhopal : ಬಿಜೆಪಿ (Rahul Speaks About RSS), ಆರೆಸ್ಸೆಸ್ “ಜೈ ಸಿಯಾ ರಾಮ್” ಅಥವಾ “ಜೈ ಸೀತಾ ರಾಮ್” ಎಂದು ಘೋಷಣೆ ಮಾಡುವುದಿಲ್ಲ,

ಏಕೆಂದರೆ ಅವರ ಸಂಘಟನೆಯಲ್ಲಿ ಒಬ್ಬ ಮಹಿಳೆಯೂ ಇಲ್ಲ ಎಂದು ರಾಹುಲ್ ಗಾಂಧಿ (Rahul Gandhi) ಲೇವಡಿ ಮಾಡಿದ್ದಾರೆ.

ಮಧ್ಯಪ್ರದೇಶದ (Madhya Pradesh) ಅಗರ್ ಮಾಲ್ವಾ ಪ್ರದೇಶದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಪಂಡಿತರೊಬ್ಬರು ನನ್ನ ಬಳಿಗೆ ಬಂದು ಹೇಳಿದರು,

‘ರಾಹುಲ್ಜೀ ಭಗವಾನ್ ರಾಮನು ತಪಸ್ವಿಯಾಗಿದ್ದನು, ಅವನು ತನ್ನ ಇಡೀ ಜೀವನವನ್ನು (Rahul Speaks About RSS) ತಪಸ್ಸಿನಲ್ಲಿ ಇಟ್ಟನು.

ಹೀಗಾಗಿ ಗಾಂಧೀಜಿಯವರು ‘ಹೇ ರಾಮ್’ ಎನ್ನುತ್ತಿದ್ದರು. ಅದು ಅವರ ಘೋಷಣೆಯಾಗಿತ್ತು. ಜೈ ಸಿಯಾ ರಾಮ್ ಅಥವಾ ಜೈ ಸೀತಾ ರಾಮ್ ಎಂಬ ಘೋಷಣೆಯು ಸೀತೆ ಮತ್ತು ರಾಮ ಒಂದೇ ಎಂಬ ಸಂದೇಶವನ್ನ ನೀಡುತ್ತದೆ.

ಅದಕ್ಕಾಗಿಯೇ ಜೈ ಸಿಯಾ ರಾಮ್ ಅಥವಾ ಜೈ ಸೀತಾ ರಾಮ್ ಎಂಬ ಘೋಷಣೆಯನ್ನು ಅನೇಕರು ಬಳಸುತ್ತಾರೆ.

ಇದನ್ನೂ ಓದಿ : https://vijayatimes.com/padmabhushan-to-google-ceo/

ಇನ್ನು ಮೂರನೆಯ ಘೋಷಣೆ ಜೈ ಶ್ರೀ ರಾಮ್, ಅಲ್ಲಿ ನಾವು ಭಗವಾನ್ ರಾಮನನ್ನು ಸ್ತುತಿಸುತ್ತೇವೆ. ಆದರೆ, ಬಿಜೆಪಿಯು ʼಜೈ ಶ್ರೀರಾಮ್ʼ ಎಂದು ಮಾತ್ರ ಏಕೆ ಹೇಳುತ್ತದೆ ಎಂಬುದನ್ನು ನಿಮ್ಮ ಭಾಷಣದಲ್ಲಿ ನೀವು ಕೇಳಬೇಕು.

ಅವರು ಯಾಕೆ ಎಂದಿಗೂ ಜೈ ಸಿಯಾ ರಾಮ್, ಹೇ ರಾಮ್ ಎಂದು ಹೇಳುವುದಿಲ್ಲ ಎಂಬುದನ್ನು ವಿವರಿಸಬೇಕೆಂದು ನನ್ನಲ್ಲಿ ವಿನಂತಿಸಿಕೊಂಡರು ಎಂದು ರಾಹುಲ್‌ ಹೇಳಿದರು.

ಇನ್ನು ಬಿಜೆಪಿ-ಆರ್‌ಎಸ್‌ಎಸ್‌ನ (BJP-RSS) ಜನರು ಭಗವಾನ್ ರಾಮನು ತನ್ನ ಜೀವನವನ್ನು ನಡೆಸಿದ ಭಾವನೆಯೊಂದಿಗೆ ತಮ್ಮ ಜೀವನವನ್ನು ನಡೆಸುವುದಿಲ್ಲ. ಯಾಕೆಂದರೆ ಶ್ರೀರಾಮ ಯಾರಿಗೂ ಅನ್ಯಾಯ ಮಾಡಿಲ್ಲ.

ರಾಮನು ಸಮಾಜವನ್ನು ಒಗ್ಗೂಡಿಸಲು ಕೆಲಸ ಮಾಡಿದರು, ಅವರು ಎಲ್ಲರಿಗೂ ಗೌರವವನ್ನು ನೀಡಿದರು ಮತ್ತು ಅವರು ಎಲ್ಲರಿಗೂ ಸಹಾಯ ಮಾಡಿದರು.

Rahul Gandhi

ಬಿಜೆಪಿ-ಆರ್‌ಎಸ್‌ಎಸ್‌ನ ಜನರು ಈ ಭಾವನೆ, ಈ ಜೀವನ ವಿಧಾನವನ್ನು ಅಳವಡಿಸಿಕೊಳ್ಳುವುದಿಲ್ಲ. ನಾನು ನಮ್ಮ ಆರ್‌ಎಸ್‌ಎಸ್ ಸ್ನೇಹಿತರಿಗೆ ಹೇಳಲು ಬಯಸುತ್ತೇನೆ, ಅವರು ಜೈ ಶ್ರೀರಾಮ್ ಎಂದು ಹೇಳಬೇಕು.

ಆದರೆ ಅವರು ಜೈ ಸಿಯಾ ರಾಮ್ ಮತ್ತು ಹೇ ರಾಮ್ ಎಂಬ ಘೋಷಣೆಯನ್ನು ಕೂಡಾ ಹೇಳಬೇಕು ಎಂದು ರಾಹುಲ್‌ ಗಾಂಧಿ ಹೇಳಿದರು. 

https://fb.watch/haDlmUAJ_-/ ಮೈಸೂರು : ಕಳಪೆ ಕಾಮಗಾರಿ ವಿರುದ್ಧ ಧ್ವನಿ ಎತ್ತಬೇಕು

ಇನ್ನೊಂದೆಡೆ ಭಾರತ್ ಜೋಡೋ ಯಾತ್ರೆಯು ಪ್ರಸ್ತುತ ಮಧ್ಯಪ್ರದೇಶದಲ್ಲಿ ಸಾಗುತ್ತಿದೆ. ಡಿಸೆಂಬರ್ 4 ರಂದು ರಾಜಸ್ಥಾನವನ್ನು ಪ್ರವೇಶಿಸಲಿದೆ.
Exit mobile version