21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

Tamilnadu : ತಮ್ಮ ನೆಚ್ಚಿನ ಸೂಪರ್‌ಸ್ಟಾರ್‌ ತಮಿಳು ಚಿತ್ರರಂಗದ ತಲೈವಾ (Thalaivaa), ರಜನಿಕಾಂತ್‌ (Rajinikanth) ಅವರನ್ನು 21 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕ್ರಿಕೆಟಿಗ ಸಂಜು ಸ್ಯಾಮ್ಸನ್ (Sanju Samson) ಭೇಟಿ ಮಾಡಿರುವುದಾಗಿ ಇದೀಗ (Rajinikanth and SanjuSamson meet) ಹೇಳಿಕೊಂಡಿದ್ದಾರೆ.


ಸೂಪರ್‌ಸ್ಟಾರ್‌ (Superstar) ರಜನಿಕಾಂತ್ ಅವರನ್ನು ಭೇಟಿಯಾದ ಬಗ್ಗೆ ಅವರೊಟ್ಟಿಗೆ ತೆಗೆಸಿಕೊಂಡ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದ ಟ್ಚಿಟರ್‌ (Tweet) ಖಾತೆಯಲ್ಲಿ ಪೋಸ್ಟ್‌ ಮಾಡುವ ಮುಖೇನ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಟ್ವಿಟರ್‌ ನಲ್ಲಿ ಈ ಫೋಟೋ ಪೋಸ್ಟ್‌ ಆಗುತ್ತಿದ್ದಂತೆ, ನೆಟ್ಟಿಗರು ನೀವು ರಜನಿಕಾಂತ್‌ ಅವರ ಮಗಳು ಐಶ್ವರ್ಯಾ ಅವರ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ತಮ್ಮ ನೆಚ್ಚಿನ ನಟ, ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರೊಟ್ಟಿಗೆ ತೆಗೆಸಿಕೊಂಡ ಫೋಟೊವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ಸಂಜು ಸ್ಯಾಮ್ಸನ್‌,

ನಾನು ಅವರನ್ನು ಭೇಟಿಯಾಗಲು ೨೧ ವರ್ಷದಿಂದ ಕಾದಿದ್ದೆ. ಇಂದು 21 ವರ್ಷಗಳ ನನ್ನ ಕನಸು ನನಸಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/eshwarappa-statement-on-azan/

ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಸೋಮವಾರ ಟ್ವಿಟರ್‌ನಲ್ಲಿ ತಮ್ಮ ಬಾಲ್ಯದ ಕನಸು ಹೇಗೆ ನನಸಾಯಿತು (Rajinikanth and SanjuSamson meet) ಎಂಬುದನ್ನು ಹಂಚಿಕೊಳ್ಳಲು,

ತಲೈವಾ ನಟ ರಜನಿಕಾಂತ್ ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ನಾನು ನನ್ನ 7 ನೇ ವಯಸ್ಸಿನಲ್ಲೇ ಸೂಪರ್ಸ್ಟಾರ್ ರಜನಿಕಾಂತ್‌ ಅವರ ಅಭಿಮಾನಿಯಾಗಿದ್ದೇನೆ, ನಾನು ನನ್ನ ಪೋಷಕರಿಗೆ ಹೇಳಿದ್ದೆ.

ಒಂದು ದಿನ ನಾನು ಹೋಗಿ ರಜನಿ ಸರ್ ಅವರನ್ನು ಅವರ ಮನೆಗೆ ಹೋಗಿ ಭೇಟಿ ಮಾಡುತ್ತೇನೆ ಎಂದು.

ಇದು 21 ವರ್ಷಗಳ ನಂತರ ಈಡೇರಿದ ಕನಸು ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಟ್ವೀಟರ್‌ ಬಳಕೆದಾರರೊಬ್ಬರು, ರಜನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ಅವರ ಚಿತ್ರದಲ್ಲಿ ಸ್ಯಾಮ್ಸನ್ ಅತಿಥಿ ಪಾತ್ರದಲ್ಲಿ ನಟಿಸುವುದನ್ನು ನೋಡಲು ಸಂತೋಷವಾಗುತ್ತದೆ ಎಂದು ಕಮೆಂಟ್‌ ಮಾಡಿದ್ದಾರೆ.

ಇದೇ ರೀತಿ ಹಲವರು ಹಲವು ರೀತಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Rajinikanth and SanjuSamson meet

ಸದ್ಯ ತಲೈವಾ ನಟ ರಜನಿಕಾಂತ್ ಅವರು ತಮ್ಮ ಮುಂಬರುವ ಚಿತ್ರ ಜೈಲರ್ ಬಿಡುಗಡೆಗೆ ಕಾಯುತ್ತಿದ್ದಾರೆ.

ಈ ಚಿತ್ರದಲ್ಲಿ ಜೈಲರ್ ಪಾತ್ರವನ್ನು ಸಂಪೂರ್ಣವಾಗಿ ಜೈಲಿನೊಳಗೆ ಚಿತ್ರೀಕರಿಸಲಾಗಿದೆ.

ಜೈಲರ್ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್, ಸಂಜಯ್ ದತ್, ಮೋಹನ್ ಲಾಲ್, ರಮ್ಯಾ ಕೃಷ್ಣನ್ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version