ಮಾಜಿ ಸಚಿವ ಅನಂತ್ ಕುಮಾರ್ ಮನೆಗೆ ರಾಜನಾಥ್‌ ಸಿಂಗ್‌ ಭೇಟಿ

ಬೆಂಗಳೂರು ಅ 23 : ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಬಿಜೆಪಿ ನಾಯಕರಾಗಿದ್ದ ಅನಂತ್ ಕುಮಾರ್ ಮನೆಗೆ ಇಂದು ಭೇಟಿ ನೀಡಿದರು

ತೇಜಸ್ವಿನಿ ಅನಂತ ಕುಮಾರ್ ಸೇರಿದಂತೆ ಅವರ ಮನೆಯ ಎಲ್ಲ ಸದಸ್ಯರ ಜತೆ ಸೌಹಾರ್ದಯುತ ಮಾತುಕತೆ ನಡೆಸಿದರು. ರಾಜ್ ನಾಥ್ ಸಿಂಗ್ ಭೇಟಿಗೆ ತೇಜಸ್ವಿನಿ ಅನಂತ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯದ ಹೊರತಾಗಿಯೂ ರಾಜನಾಥ್ ಸಿಂಗ್ ಇತರ ರಾಜಕೀಯ ನಾಯಕರ ಜತೆ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ.

2 ದಿನಗಳ ರಾಜ್ಯ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್ ಅವರು ಇಂದು ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಯ ರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭದ್ರತಾ ಪಡೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 3 ದಿನಗಳ ಕಾನ್ಕ್ಲೇವ್ ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ನಮ್ಮ ವಾಯುಪಡೆ ಸಿಬ್ಬಂದಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. 1971 ರ ಯುದ್ಧವು ಇತಿಹಾಸದ ಕೆಲವು ಯುದ್ಧಗಳಲ್ಲಿ ಒಂದಾಗಿದೆ, ಅದು ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಅಥವಾ ಅಧಿಕಾರವನ್ನು ಪಡೆದುಕೊಳ್ಳಲು ಹೋರಾಡಿದ್ದಲ್ಲ. ಬದಲಿಗೆ ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ರಕ್ಷಿಸುವುದು ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದರು.

Exit mobile version