ಲಖನೌದಲ್ಲಿ ₹ 1,710 ಕೋಟಿ ಮೌಲ್ಯದ 180 ಅಭಿವೃದ್ಧಿ ಯೋಜನೆಗಳಿಗೆ ರಾಜನಾಥ್ ಸಿಂಗ್ ಚಾಲನೆ

ಲಖನೌ ಆ 31 : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ಲಖನೌನಲ್ಲಿ ₹1,710 ಕೋಟಿಗೂ ಅಧಿಕ ಮೌಲ್ಯದ 180 ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಚಾಲನೆ ನೀಡಿದರು.

ಲಖನೌಗೆ ಬೆಳಿಗ್ಗೆ ಆಗಮಿಸಿದ ರಾಜನಾಥ್‌ ಸಿಂಗ್‌ ಅವರು ಇಲ್ಲಿ ನಡೆದ ಸಮಾರಂಭದಲ್ಲಿ 90 ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 90 ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದರು.

ಇದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ), ವೈದ್ಯಕೀಯ ಮತ್ತು ಆರೋಗ್ಯ, ನೀರಾವರಿ, ಲಖನೌ ಮಹಾನಗರ ಪಾಲಿಕೆ, ಲಖನೌ ಅಭಿವೃದ್ಧಿ ಪ್ರಾಧಿಕಾರ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ಒಂಬತ್ತು ಇಲಾಖೆಗಳ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿದೆ.

ಈ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪ ಮುಖ್ಯಮಂತ್ರಿಗಳಾದ ದಿನೇಶ್‌ ಶರ್ಮಾ ಮತ್ತು ಕೇಶವ್‌ ಪ್ರಸಾದ್‌ ಮೌರ್ಯ ಸೇರಿದಂತೆ ಇತರೆ ಸಚಿವರು ಉಪಸ್ಥಿತರಿದ್ದರು.

Exit mobile version