ಕನ್ನಡದ ಖ್ಯಾತ ನಿರೂಪಕಿ(Anchor) ಅನುಶ್ರೀಯವರ(Anushree) ಆಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್ ನಲ್ಲಿ ರವಿಚಂದ್ರನ್(V Ravichandran) ಮತ್ತು ರಕ್ಷಿತ್ ಶೆಟ್ಟಿ(Rakshit Shetty) ಅಪೂರ್ವ ಸಂಗಮ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಎಂದಿನಂತೆಯೇ ತಮ್ಮ ಮಾಸದ ಮುಗುಳ್ನಗೆಯ ಜೊತೆ ಕೆಲವು ಇಂಟೆರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಿಂಪಲ್ ಸ್ಟಾರ್-ಕ್ರೇಜಿಸ್ಟಾರ್ ನಡುವಿನ ಈ ವಿಶೇಷ ಸಂದರ್ಶನಕ್ಕೆ(Interview) ಮತ್ತಷ್ಟು ಮೆರುಗು ತಂದಿರುವುದು ಅನುಶ್ರೀಯವರ ಆಕರ್ಷಕ ಮಾತುಗಾರಿಕೆ ಎಂದರೂ ತಪ್ಪಿಲ್ಲ. ಪ್ರಶ್ನಾವಳಿಗಳ ನಡುವೆ ರವಿಚಂದ್ರನ್ ಅವರು, ತಮ್ಮ ಕಾಲದಲ್ಲಿ ಸಿನಿಮಾ ಮಾಡುವಾಗ ಎದುರಾಗುತ್ತಿದ್ದ ತೊಂದರೆಗಳ ಬಗ್ಗೆ ಹೇಳುತ್ತಿದ್ದರೆ, ಅನುಶ್ರೀ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರೂ ಆಶ್ಚರ್ಯಚಕಿತರಾದರು.
ಇದೇ ರೀತಿಯ ಹಲವಾರು ಆಸಕ್ತಿಕರ ವಿಷಯಗಳನ್ನು ಇಬ್ಬರೂ ನಟರು ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರು ತಮ್ಮ ಎಂದಿನ ಶೈಲಿಯಲ್ಲಿ ರಕ್ಷಿತ್ ಗೆ ನೇರವಾಗಿ, “ನಿನಗೆ ಲವ್ ಫೇಲ್ಯೂರ್ ಆಗಿದೆ, ಅದಕ್ಕೆ ನೀನು ಸಕ್ಸಸ್ ಆಗಿದ್ದೀಯ” ಎನ್ನುತ್ತಾರೆ. ಇದನ್ನು ಕೇಳಿದ ರಕ್ಷಿತ್ ಒಂದು ಕ್ಷಣ ಗಲಿಬಿಲಿಗೊಂಡು ಮುಗಳು ನಗುತ ಕೊಟ್ಟ ಉತ್ತರ ಹೀಗಿದೆ, “ನನ್ನ ಪ್ರಕಾರ ನನಗೆ ಲವ್ ಫೇಲ್ಯೂರ್ ಆಗಿಲ್ಲ, ಆದರೆ ಇಡೀ ಜಗತ್ತು ನನಗೆ ಲವ್ ಫೇಲ್ಯೂರ್ ಆಗಿದೆ ಎಂದು ಹೇಳುತ್ತಿದೆ” ಎಂದು ಹಾಸ್ಯವಾಗಿಯೇ ಉತ್ತರಿಸಿದ್ದಾರೆ.
ಇನ್ನು ಕನ್ನಡ ಚಿತ್ರರಂಗದಲ್ಲಿ ಯಾವ ಹೀರೋಯಿನ್ ಇಷ್ಟ ಎಂದು ರಕ್ಷಿತ್ ಅವರನ್ನು ಕೇಳಿದ್ದಕ್ಕೆ ರಕ್ಷಿತ್, “ರಮ್ಯಾ” ಎಂದು ಹೇಳಿದ್ದಾರೆ. ಈ ಜನರೇಷನ್ನ ನಿಮ್ಮ ಫೇವರೇಟ್ ನಟ ಯಾರು ಎಂಬ ಪ್ರಶ್ನೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇವರಿಬ್ಬರ ನಡುವೆ ನಡೆದ ಇನ್ನೊಂದು ಇಂಟೆರೆಸ್ಟಿಂಗ್ ಮಾತುಕತೆ ಹೀಗಿದೆ ನೋಡಿ. ರಕ್ಷಿತ್ ರವಿಚಂದ್ರನ್ ಅವರಿಗೆ, ಅವರ ಚಿತ್ರಗಳನ್ನು ಈಗಿನ ಯಾವ ಹೀರೋ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಪ್ರಶ್ನೆ ಕೇಳಿದರು. ರವಿಚಂದ್ರನ್ ಅವರು ಒಂದೊಂದು ಚಿತ್ರಕ್ಕೂ ಹೋಲಿಕೆಯಾಗಬಲ್ಲ ನಟರ ಹೆಸರನ್ನು ಒಂದೊಂದಾಗಿ ಹೇಳಿದ್ದಾರೆ.
ಶಾಂತಿ-ಕ್ರಾಂತಿ ಚಿತ್ರವನ್ನು ಯಾರು ಮಾಡಬಹುದು ಎಂದು ಕೇಳಿದ್ದಕ್ಕೆ ಸುದೀಪ್ ಎಂದಿದ್ದು, ರಣಧೀರ ಚಿತ್ರವನ್ನು ತಮ್ಮ ಮಗ ಮನೋರಂಜನ್ ಮಾಡಬಹುದು ಎಂದಿದ್ದಾರೆ. ಎಲ್ಲರ ನೆಚ್ಚಿನ ಎವರಗ್ರೀನ್ ಫಿಲ್ಮ್ ಪ್ರೇಮಲೋಕ ಚಿತ್ರವನ್ನು ಯಾರು ಮಾಡಬಹುದು ಎಂದು ಕೇಳಿದ್ದಕ್ಕೆ, ಅದನ್ನು ಮಾತ್ರ ಯಾರಿಗೂ ಬಿಟ್ಟುಕೊಡುವುದಿಲ್ಲ, ಪ್ರೇಮಲೋಕಕ್ಕೆ ಒಬ್ಬನೇ ರವಿಚಂದ್ರನ್, ಅದನ್ನು ನಾನೇ ಮಾಡ್ತೀನಿ ಎಂದಿದ್ದಾರೆ.
ಒಟ್ಟಾರೆಯಾಗಿ ಇವರಿಬ್ಬರ ಈ ಜುಗಲ್ ಬಂಧಿ ಅದ್ಭುತವಾಗಿ ಮೂಡಿಬಂದಿದ್ದು, ಇಬ್ಬರೂ ಹಲವಾರು ವಿಷಯಗಳನ್ನು ಮನಬಿಚ್ಚಿ ಹೇಳಿಕೊಂಡಿದ್ದಾರೆ.