ಮತ್ತೊಮ್ಮೆ ಟ್ರೋಲ್‍ಗೆ `ಕ್ರಶ್’ ಆದ ನಟಿ ರಶ್ಮಿಕಾ ಮಂದಣ್ಣ.! ಅಷ್ಟಕ್ಕೂ ರಶ್ಮಿಕಾ ಮಾಡಿದ್ದೇನು ಗೊತ್ತಾ.?

ಕನ್ನಡ ಚಿತ್ರರಂಗದಿಂದ ಗುರುತಿಸಿಕೊಂಡು ಇಂದು ತಮಿಳು, ತೆಲುಗು ಸೇರಿದಂತೆ ಎಲ್ಲಾ ಭಾಷೆಯಲ್ಲೂ ನಟಿಸುವಷ್ಟು ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ ಎನ್ನಬಹುದು. ಇತ್ತೀಚಿಗಷ್ಟೇ ತೆಲುಗಿನಲ್ಲಿ ಬಿಡುಗಡೆಗೊಂಡ ಪುಷ್ಪ ಸಿನಿಮಾ ಬ್ಲಾಕ್‍ಬಸ್ಟರ್ ಹಿಟ್ ಆದ ಬಳಿಕವೇ ರಶ್ಮಿಕಾ ಮಂದಣ್ಣ ಮೇಲುಗೈ ಮತ್ತೊಮ್ಮೆ ದಾಟಿದೆ.

ಈ ಖುಷಿಯಲ್ಲೇ ತೇಲುತ್ತಿದ್ದ ರಶ್ಮಿಕಾ ಮಂದಣ್ಣ, ಸದ್ಯ ತಮ್ಮ ಖುಷಿಗೆ ತಾವೇ ಬ್ರೇಕ್ ಹಾಕಿಕೊಂಡಿದ್ದಾರೆ. ಹೌದು, ಪುಷ್ಪ ಸಿನಿಮಾ ಗೆದ್ದ ಬಳಿಕ ಹಲವು ಸಂದರ್ಶನಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿರುವ ರಶ್ಮಿಕಾ ತುಂಬ ಬಿಝಿಯಾಗಿ ಓಡಾಡುತ್ತಿದ್ದು, ಮುಂಬೈನ ಒಂದು ಸೆಟ್ನಿಂದ ಹೊರಬರಬೇಕಾದರೆ ಮಕ್ಕಳೊಂದಿಗೆ ನಡೆದುಕೊಂಡ ರೀತಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಆಕೆ ನಡೆದುಕೊಂಡ ರೀತಿ ಟ್ರೋಲ್ ಅವರಿಗೆ ಆಹಾರವಾಗಿರುವುದು ಮತ್ತೊಂದು ಸಂಗತಿಯಾಗಿದೆ. ಅಷ್ಟಕ್ಕೂ ರಶ್ಮಿಕಾ ಮಾಡಿದ ತಪ್ಪೇನು.? ಮುಂದೆ ಓದಿ.

ರಶ್ಮಿಕಾ ಮಂದಣ್ಣ ಬಂದಿದ್ದಾರೆ ಅವರನ್ನು ನೋಡಬಹುದು ಎಂದು ಸ್ಥಳಕ್ಕೆ ಓಡೋಡಿ ಬಂದ ಮಕ್ಕಳಿಗೆ ಆಗಿದ್ದು ಬೇಸರ.! ಹೌದು, ಮಕ್ಕಳೊಂದಿಗೆ ರಶ್ಮಿಕಾ ನಡೆದುಕೊಂಡ ರೀತಿ ಕ್ಯಾಮೆರಾ ಕಣ್ಣಿನಲ್ಲಿ ಸರೆಯಾಗಿದ್ದು, ಇದು ಜನರ ಕಣ್ಣಿನ ಕ್ಯಾಮೆರಾದಲ್ಲೂ ಕೂಡ ಕುಳಿತಿದೆ. ಸದಾ ನೆಟ್ಟಿಗರ ಕಣ್ಣಿಗೆ ಗುರಿಯಾಗುವ ರಶ್ಮಿಕಾ, ಈ ಬಾರಿ ಕೂಡ ತಮ್ಮ ನಡೆಯಿಂದ ವೇಗವಾಗಿ ಗುರಿಯಾಗಿದ್ದಾರೆ. ಈ ಕುರಿತು ರಶ್ಮಿಕಾ ಮಂದಣ್ಣ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ.

ರಶ್ಮಿಕಾ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರನ್ನು ಭೇಟಿ ಮಾಡಿಕೊಂಡು ಹೊರಬಂದಾಗ ಮಕ್ಕಳು ಕಾಯುತ್ತಿದ್ದರು. ಮಕ್ಕಳು ರಶ್ಮಿಕಾ ಹೊರಬರುತ್ತಿದ್ದಂತೆ ಮಕ್ಕಳು ಓಡಿಹೋಗಿ ರಶ್ಮಿಕಾ ಅವರನ್ನು ಮುಟ್ಟಿ ಮಾತನಾಡಿಸಿದ್ದಾರೆ. ಆದರೆ ರಶ್ಮಿಕಾ ಮಕ್ಕಳನ್ನು ನಿಂತು ಮಾತನಾಡಿಸದೇ, ಮಕ್ಕಳನ್ನು ಪಕ್ಕಕ್ಕೆ ತಳ್ಳಿ ಕಾರಿನೊಳಗೆ ಹೋಗಿ ಕುಳಿತ್ತಿದ್ದು ಎಲ್ಲರಿಗೂ ತಪ್ಪಾಗಿ ಕಂಡಿದೆ.!

https://www.instagram.com/reel/CZHXWSkovmm/?utm_source=ig_web_button_share_sheet

ಮಕ್ಕಳು ರಶ್ಮಿಕಾ ಬಳಿ ನಿಂತು ಹೊಟ್ಟೆ ಹಸಿದಿದೆ, ಊಟ ಕೊಡಿಸಿ ಎಂದು ಕೇಳಿದ್ದಾರೆ. ಇದಕ್ಕೂ ಸ್ಪಂದಿಸದೆ ರಶ್ಮಿಕಾ ಕಾರಿನೊಳಗೆ ಹೋಗಿ ಕುಳಿತ್ತಿದ್ದು ಅಕ್ಷರಶಃ ತಪ್ಪು ಎಂಬುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ ಜೊತೆಗೆ ಟ್ರೋಲ್ ಪುಟಗಳಲ್ಲಿಯೂ ಸಹ ಹರಿದಾಡುತ್ತಿದೆ.

Exit mobile version