ವೈರಲ್ ಆದ ರವಿತೇಜ ಜೊತೆ `ಲಿಪ್ ಲಾಕ್’ ಮಾಡಿದ ಬೆಡಗಿ ಫೋಟೊ! ಯಾರು ಈ ಸುಂದರಿ?

ತೆಲುಗಿನ ಖ್ಯಾತ ನಟ ರವಿತೇಜ(Raviteja) ಜೊತೆ ಲಿಪ್ ಲಾಕ್(Lip lock) ಮಾಡಿದ ನಟಿಯ ಫೋಟೋ(Photo) ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್(Viral) ಆಗಿದ್ದು, ಈ ಬೆಡಗಿ ಯಾರು ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಉದ್ಬವಗೊಂಡು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಲಿಪ್ ಲಾಕ್ ಎಂದರೆ ಮೊದಲು ನೆನಪಿಗೆ ಬರುವುದು ಬಾಲಿವುಡ್(Bollywood) ಮಂದಿ. ಹೌದು, ಬಾಲಿವುಡ್ ಚಿತ್ರಗಳಲ್ಲಿ ಲಿಪ್ ಲಾಕ್ ಸನ್ನಿವೇಶಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಜೊತೆಗೆ ಸಿಕ್ಕಾಪಟ್ಟೆ ವೈರಲ್(Viral) ಆಗುತ್ತೆ. ಸದ್ಯ ಅದೇ ಸಾಲಿನಲ್ಲಿ ತೆಲುಗು(Telugu) ಚಿತ್ರರಂಗದಲ್ಲೂ ಕೂಡ ಹಸಿಬಿಸಿ ದೃಶ್ಯಗಳ ಹರಿದಾಟ ಹೆಚ್ಚಾಗಿನೇ ಇದೆ. ಆದರೆ ಇಂದು ಬಾಲಿವುಡ್, ಹಾಲಿವುಡ್, ಟಾಲಿವುಡ್ ಮಾತ್ರವಲ್ಲ ಎಲ್ಲಾ ಚಿತ್ರರಂಗದಲ್ಲೂ ಲಿಪ್ ಲಾಕ್ ಸನ್ನಿವೇಶಗಳು ತೀವ್ರ ಸರ್ವೆ ಸಾಮಾನ್ಯವಾಗಿದೆ.

ಕೆಲ ನಟ-ನಟಿಯರು ಲಿಪ್ ಲಾಕ್ ಸನ್ನಿವೇಶಗಳಲ್ಲಿ ಪಾಲ್ಗೊಳ್ಳುವುದಿಲ್ಲ. ನಮಗೆ ಅಂಥ ಸೀನ್ಗಳಲ್ಲಿ ನಟಿಸಲು ಮುಜುಗರ ಎದುರಾಗುತ್ತೆ ಎಂದು ಕೆಲವರು ಹಿಂದೆ ಸರಿಯುತ್ತಾರೆ. ಟಾಲಿವುಡ್ ನಟ ರವಿತೇಜ ಈಗ ಇದೇ ಲಿಪ್ ಲಾಕ್ ಸುದ್ದಿಯಲ್ಲಿ ಭಾರಿ ವೈರಲ್ ಆಗಿದ್ದಾರೆ. ಇಷ್ಟು ವರ್ಷದ ತಮ್ಮ ಸಿನಿಮಾ ಕರಿಯರ್ ನಲ್ಲಿ ಲಿಪ್ ಲಾಕ್ ಸೀನ್ ಗಳಿಂದ ದೂರವಿದ್ದ ರವಿತೇಜ ಅವರು, ಇಂದು ಮುಲಾಜಿಲ್ಲದೆ ಕಿಸ್ಸಿಂಗ್ ಸೀನ್ ನಲ್ಲಿ ಅಭಿನಯಿಸಿದ್ದಾರೆ. ಸದ್ಯ ಈ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಇದೇ ಫೆಬ್ರವರಿ 11 ರಂದು ಬಿಡುಗಡೆಯಾಗಲಿರುವ ‘ಕಿಲಾಡಿ’ ಸಿನಿಮಾದ ಕಿಸ್ಸಿಂಗ್ ದೃಶ್ಯ ಇದಾಗಿದ್ದು, ರವಿತೇಜ ಮತ್ತು ಕಿಲಾಡಿಯ ಬೆಡಗಿ ಲಿಪ್ ಲಾಕ್ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೇವಲ ಒಂದೇ ಒಂದು ನಿಮಿಷದಲ್ಲಿ ಪೋಸ್ಟ್‌ ಆದ ಈ ಫೋಟೊ, ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಿಲಾಡಿ ಚಿತ್ರದಲ್ಲಿ ಇಬ್ಬರು ನಾಯಕಿರದ್ದು, ಡಿಂಪಲ್ ಹಯಾತಿ ಮತ್ತು ಮೀನಾಕ್ಷಿ ಚೌಧರಿ. ಈ ಇಬ್ಬರು ರವಿತೇಜ ಅವರಿಗೆ ಈ ಸಿನಿಮಾದಲ್ಲಿ ಸಾಥ್ ನೀಡಿದ್ದಾರೆ. ಆದರೆ ಅಭಿಮಾನಿಗಳು, ನೆ‌ಟ್ಟಿಗರ ಪ್ರಶ್ನೆಗೆ ಚಿತ್ರತಂಡ ಇನ್ನು ಉತ್ತರ ನೀಡಿಲ್ಲ. ಕಿಸ್ಸಿಂಗ್ ಸೀನ್ ನಲ್ಲಿ ಇರುವ ನಟಿ ಯಾರು ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇದು ನೆಟ್ಟಿಗರ ತಲೆಕಡಿಸಿದೆ ಎನ್ನಬಹುದು.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.