ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ನಿಯಮಗಳನ್ನು ಅನುಸರಿಸದ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ 29ರಿಂದ ಪೇಟಿಎಂ (Paytm) ಪಾವತಿಗಳ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದೆ. ಈ ನಿರ್ಬಂಧಗಳು ಪ್ಲಾಟ್ಫಾರ್ಮ್ಗಳಲ್ಲಿ ಹೊಸ ಠೇವಣಿ ಮತ್ತು ಕ್ರೆಡಿಟ್ ವಹಿವಾಟುಗಳ ಮೇಲೆ ಪರಿಣಾಮ ಬೀರಲಿವೆ ಹಾಗೂ ಹೊಸ ನಿಯಮದಿಂದಾಗಿ ಹೊಸ ಬಳಕೆದಾರರಿಗೆ ಪೇಟಿಎಂ ಪ್ಲಾಟ್ಫಾರ್ಮ್ನಲ್ಲಿ ಖಾತೆಯನ್ನು ರಚಿಸಲು ಸಾದ್ಯವಾಗುವುದಿಲ್ಲ.
ಇದಕ್ಕೂ ಮುನ್ನ ಫೆಬ್ರವರಿ (February) 1ರಂದು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಪ್ರತಿಕ್ರಿಯಿಸಿ, PPBL ಆರ್ಬಿಐ ನಿರ್ದೇಶನಗಳನ್ನು ಅನುಸರಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಈ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ಆರ್ಬಿಐ (RBI) ಜೊತೆ ಮಾತಾಡಿ ಪರಿಹರಿಸಿ ಕೊಳ್ಳುವುದಾಗಿ ಹೇಳಿಕೆ ನೀಡಿದೆ.
ಹೆಚ್ಚುವರಿಯಾಗಿ, ಪೇಟಿಎಂನ ಮೂಲ ಕಂಪನಿ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ ( One 97 Communication Limited ) ಇನ್ನೂ ಮುಂದೆ ಇತರ ಬ್ಯಾಂಕ್ಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಮತ್ತು ಪೇಟಿಎಂ ಪಾವತಿಗಳ ಬ್ಯಾಂಕ್ನೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಪೇಟಿಎಂ ಘೋಷಣೆ ಮಾಡಿದೆ. ಈ ಕುರಿತು ಆದೇಶ ಹೊರಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ (Paytm Payment Bank Limited) ವಿರುದ್ಧ ರಿಸರ್ವ್ ಬ್ಯಾಂಕ್ ಸಮಗ್ರ ವ್ಯವಸ್ಥೆಯ ಲೆಕ್ಕಪರಿಶೋಧಕರ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧಕರ ಮೌಲ್ಯಮಾಪನಾ ವರದಿಯನ್ನು ಆದರಿಸಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.
ಹಾಗಾಗಿ ಫೆ.29 ರ ನಂತರ ಹೊಸ ಠೇವಣಿ, ಕ್ರೆಡಿಟ್ ವ್ಯವಹಾರ ಅಥವಾ ಟಾಪ್ ಅಪ್ಗಳನ್ನು ಯಾವುದೇ ಗ್ರಾಹಕ ಖಾತೆಗಳಿಂದ ಸ್ವೀಕರಿಸುವಂತಿಲ್ಲ. ಜತೆಗೆ ಪ್ರಿಪೇಯ್ಡ್, ವಾಲೆಟ್, ಪಾಸ್ಟ್ಟ್ಯಾಗ್ (Prepaid, Wallet, Fast Tag) ಎನ್ಸಿಎಮ್ಸಿ ಕಾರ್ಡ್ಗಳನ್ನೂ ನೀಡುವಂತಿಲ್ಲ. ಇದನ್ನು ಹೊರತುಪಡಿಸಿ ಬಡ್ಡಿ ಹಣ, ಮರುಪಾವತಿಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಮಾಡಬಹುದು ಎಂದು ಹೇಳಿದೆ.
ಉಳಿತಾಯ ಖಾತೆ, ಚಾಲ್ತಿ ಖಾತೆ, ಪ್ರೀಪೇಯ್ಡ್ ಪಾವತಿ, ಫಾಸ್ಟ್ಟ್ಯಾಗ್, ಎನ್ಸಿಎಮ್ಸಿ ಮೂಲಕ ಹಣ ತೆಗೆಯಲು ಯಾವುದೇ ನಿರ್ಬಂಧ ಇರುವುದಿಲ್ಲ. ಗ್ರಾಹಕರು ಪೇಟಿಎಂ ಮೂಲಕ UPI ಪಾವತಿಗಳನ್ನು ಮಾಡಬಹುದು. ಆದರೆ, ಪೇಟಿಎಂ ಪಾವತಿಗಳನ್ನು ಬಳಸಲು ಗ್ರಾಹಕರಿಗೆ ಇನ್ನೂ ಸಾಧ್ಯವಿಲ್ಲ.
ಅಕ್ಷತಾ ಹೆಗ್ಡೆ