ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಾಗೆ ಗುಪ್ತಾಂಗದ ಫೋಟೋ ಕಳುಹಿಸಿ ದರ್ಶನ್​ಗಿಂತ ನಾನೇನು ಕಡಿಮೆ ಬಾ ಎಂದಿದ್ದ ರೇಣುಕಾಸ್ವಾಮಿ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case)ದಲ್ಲಿ ದರ್ಶನ್ ಮೇಲೆ ಆರೋಪ ಬಂದಿದ್ದು, ರೇಣುಕಾಸ್ವಾಮಿಯನ್ನು ಅವರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪವಿತ್ರಾ ಗೌಡ, ದರ್ಶನ್ ಸೇರಿ 13 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ದರ್ಶನ್ (Darshan) ಅವರನ್ನು ಟ್ರಿಗರ್ ಮಾಡಿದ ವಿಚಾರ ಬೇರೆಯೇ ಇದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಹೀಗಿದೆ.

Darshan

ಈ ಕೊಲೆ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು, ಪವಿತ್ರಾ ಗೌಡಗೆ (Pavitra Gowda) ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ. ಇದನ್ನು ದರ್ಶನ್ ಸಹಿಸಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ದರ್ಶನ್ ಅವರು ಕೊಲೆ ಮಾಡಿದರು ಎನ್ನುವ ಆರೋಪ ಎದುರಾಗಿದೆ. ದರ್ಶನ್​ಗೆ ಸಹಾಯ ಮಾಡಿದ ಎಲ್ಲರೂ ಈಗ ಜೈಲು ಸೇರಿದ್ದಾರೆ. ಅಷ್ಟಕ್ಕೂ ರೇಣುಕಾ ಸ್ವಾಮಿ ಕಳುಹಿಸಿದ ಮೆಸೇಜ್ನಲ್ಲಿ ಏನಿದೆ ಎನ್ನುವ ವಿವರಣೆ ಇಲ್ಲಿದೆ.

ಒಂದಲ್ಲ ಒಂದು ವಿಚಾರದಲ್ಲಿ ನಟ ದರ್ಶನ್ ಅವರು ಚರ್ಚೆಯಲ್ಲಿರುವ ಸುದ್ದಿ ಎಲ್ಲರಿಗು ಗೊತ್ತಿರುವ ವಿಚಾರ. ಆದರೆ ದರ್ಶನ್ ಹಾಗೂ ವಿಜಯಲಕ್ಷ್ಮಿ (Vijayalakshmi) ದಾಂಪತ್ಯದಲ್ಲಿ ಪವಿತ್ರಾ ಗೌಡ ಎಂಟ್ರಿ ಆಗಿದ್ದಾರೆ ಎನ್ನುವ ಮಾತಿದೆ. ಈ ವಿಚಾರದಲ್ಲಿ ಪವಿತ್ರಾ ಹಾಗೂ ವಿಜಯಲಕ್ಷ್ಮಿ ಮಧ್ಯೆ ಕಿರಿಕ್ ಆಗಿತ್ತು. ಸೋಶಿಯಲ್ ಮೀಡಿಯಾ (Social Media)ದಲ್ಲಿ ಇವರು ಓಪನ್ ಆಗಿ ಕಿತ್ತಾಡಿಕೊಂಡಿದ್ದರು. ದರ್ಶನ್ ಹಾಗೂ ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರಬೇಕು ಎಂದು ಬಯಸಿದ ರೇಣುಕಾಸ್ವಾಮಿ ಅವರು ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು.

ಕೊಲೆಯಾದ ರೇಣುಕ ಸ್ವಾಮಿ ಫೆಬ್ರವರಿ (February) 27ರಿಂದ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡೋಕೆ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ (Account Block) ಮಾಡಿದರೂ ಹೊಸ ಅಕೌಂಟ್ ಓಪನ್ ಮಾಡಿ ಅಶ್ಲೀಲವಾಗಿ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಇದರಿಂದ ಪವಿತ್ರಾ ಸಾಕಷ್ಟು ಚಿಂತೆಗೆ ಒಳಗಾಗಿದ್ದರು.

ದರ್ಶನ್​ಗೆ ತಿಳಿದಿದ್ದು ಹೇಗೆ?
ರೇಣುಕಾ ಸ್ವಾಮಿಯ ವಿಕೃತಿಯನ್ನು ಮನೆಗೆಲಸದವನಾದ ಪವನ್​ಗೆ ಪವಿತ್ರಾ ಗೌಡ ಹೇಳಿದ್ದರು. ‘ಯಾವುದೇ ಕಾರಣಕ್ಕೂ ದರ್ಶನ್​ಗೆ ಹೇಳಬೇಡ. ಅವನು ಏನಾದ್ರು ಮಾಡಿಬಿಡ್ತಾನೆ’ ಎಂದು ಪವನ್​ಗೆ ಕಿವಿಮಾತು ಕೂಡ ಹೇಳಿದ್ದರು. ಆದರೆ, ಪವನ್ ಬಾಯಲ್ಲಿ ಹೆಚ್ಚು ಹೊತ್ತು ಈ ಗುಟ್ಟು ನಿಲ್ಲಲಿಲ್ಲ. ಅವನು ದರ್ಶನ್​ಗೆ ವಿಚಾರ ತಿಳಿಸಿದ್ದ. ಆಮೇಲೆ ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ (Kidnap) ಮಾಡಿದರು. ಆ ಬಳಿಕ ಹಲ್ಲೆ ನಡೆಸಿ, ಕೊಲೆ ಮಾಡಲಾಯಿತು ಎನ್ನಲಾಗಿದೆ.

Exit mobile version