ಮಕ್ಕಳು ಜೊತೆಯಲ್ಲಿಲ್ಲದೆ ಹಲವು ದಿನಗಳಿಂದ ಹಸಿವಿನಿಂದ ನರಳಿ ಪ್ರಾಣಬಿಟ್ಟ ನಿವೃತ್ತ ಮೇಜರ್ !

ಮಕ್ಕಳಿಗೆ ಅಪ್ಪನಿಗಿಂತ ಅವರ ಸ್ವಾರ್ಥವೇ ಹೆಚ್ಚಾಗಿ ಹಲವು ದಿನಗಳಿಂದ ಹಸಿವಿನಿಂದಲೇ ನರಳಿ, ನಡೆಯಲು ಆಗದೆ ಹೊರ ಹೋಗಲು ಆಗದೆ ನರಳಿ ನರಳಿ ಪ್ರಾಣಬಿಟ್ಟಿರುವ ಹೃದಯ ವಿದ್ರಾವಕ ಘಟನೆಗೆ ನಮ್ಮ ಸಮಾಜ ಸಾಕ್ಷಿಯಾಗಿದೆ.

ಘಟನೆ ಹಿನ್ನಲೆ :

ನಿವೃತ್ತ ಮೇಜರ್ ಜನರಲ್ ಒಬ್ಬರಿಗೆ ಆನಾರೋಗ್ಯ ಉಂಟಾಗಿತ್ತು, ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಓಡಾಡಲು ಸಾಧ್ಯವಾಗುತ್ತಿರಲ್ಲಿಲ್ಲ, ಈ ಹಿನ್ನಲೆಯಲ್ಲಿ ನಿವೃತ್ತ ಮೇಜರ್ ಜನರಲ್ ಅವರನ್ನು ಮನೆಯ ಒಂದು ಕೋಣೆಯಲ್ಲಿ ನೆಲದ ಹಾಸಿಗೆಯ ಮೇಲೆ ಮಕ್ಕಳು ಹಾಕಿದ್ದರು. ಮಕ್ಕಳು ವಿದೇಶ ಕೆಲಸದಲ್ಲಿದ್ದ ಕಾರಣ ಅಪ್ಪನನ್ನು ನೋಡಿಕೊಳ್ಳಲು ಸೇವಕನನ್ನು ನೇಮಿಸಿದ್ದರು.

ಮೇಜರ್‌ ಪುತ್ರರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರವರು ತಮ್ಮ ಕೆಲಸಕ್ಕೆ ಹೊರಟರು,  ಒಬ್ಬ ಮಗ ಫ್ರಾನ್ಸ್‌ಮತ್ತು ಎರಡನೆಯ ಮಗ ಲಂಡನ್‌ಗೆ, ಮತ್ತು ಮೂರನೆಯ ಮಗ ಪ್ಯಾರಿಸ್‌ಗೆ ಹೋದರು

ಹೊರಡುವ ಮುಂಚೆ ಅಪ್ಪನಿಗೆ ಏನಾದರೂ ಆರೋಗ್ಯದಲ್ಲಿ ಏರು ಪೇರು ಆದರೆ ತುರ್ತು ವಿಮಾನ ಹಿಡಿದು ಒಂದು ದಿನದಲ್ಲಿ ನಾವು ಬರುತ್ತೇವೆ ಎಂದು, ನಮ್ಮ ಮಕ್ಕಳಿಗೆ ರಜೆ ಸಿಕ್ಕಾಗ ಮತ್ತು ಕೆಲಸದ ರಜೆ ನೋಡಿಕೊಂಡು ಊರಿಗೆ ಬರುವೇವು ಎಂದು ತಿಳಿಸಿದರು ಮೂರು ತಿಂಗಳಲ್ಲಿ ಯಾರಾದರೂ ಒಬ್ಬರು ಬರುವುದಾಗಿ ಹೇಳಿದರು, ನಮ್ಮ ತಂದೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ, ಸಮಯಕ್ಕೆ ಸರಿಯಾಗಿ ಆಹಾರವನ್ನು ನೀಡಿ ಎಂದು ತಿಳಿಸಿದರು

ಈ ಮಾತಿಗೆ ಸೇವಕ ಒಪ್ಪಿಕೊಂಡನು ಮಕ್ಕಳೆಲ್ಲರೂ ಹೊರಟುಹೋದರು, ಆ ತಂದೆಯ ಪರಿಸ್ಥಿತಿ ಹೇಗಿತ್ತು ಎಂದರೆ ಮನೆಯ ಕೋಣೆಯಲ್ಲಿ  ಏಕಾಂಗಿಯಾಗಿದ್ದು ಮತ್ತು ನಡೆಯಲು ಸಾಧ್ಯವಾಗ ಸ್ಥಿತಿ ಇತ್ತು.

ಒಂದು ದಿನ  ಸೇವಕನು ಮನೆಗೆ ಬೀಗ ಹಾಕಿದನು ಮತ್ತು ಮಾರುಕಟ್ಟೆಯಿಂದ ದಿನಸಿ ವಸ್ತುಗಳು ಮತ್ತು ತರಕಾರಿ ತರಲು ಹೋದನು, ರಸ್ತೆ ಮಧ್ಯೆ ಅವನಿಗೆ ಅಪಘಾತವಾಯಿತು, ಜನರು ಅವನನ್ನು ಆಸ್ಪತ್ರೆಗೆ ಕರೆದೊಯ್ದರು ಮತ್ತು ಅವನು ಕೋಮಾಕ್ಕೆ ಹೋದನು ಸೇವಕನು ಕೋಮಾದಿಂದ ಮರಳಿ ಪ್ರಜ್ಞೆಗೆ ಬರಲು ಸಾಧ್ಯವಾಗಲಿಲ್ಲ.

ಈ ನಡುವೆ ಪಟ್ಟಣದಲ್ಲಿ ಮನೆ ಇರುವ ಕಾರಣ ಮತ್ತು ಹತ್ತಿರ ಸಂಬಂಧಿಕರು ಇಲ್ಲದೆ ಇರುವುದರಿಂದ ಮಕ್ಕಳು ಮನೆಯ ಕೀಲಿ ಸೇವಕನಿಗೆ ಮಾತ್ರ ಕೊಟ್ಟು ಹೋಗಿದ್ದರು, ಸೇವಕ ತಂದೆ ಇರುವ ಕೊಠಡಿಯ ಕೀಲಿ ಹಾಕಿ ಹೋದ ಕಾರಣ ಅತ್ಯಾಧುನಿಕ ಕಿಟಕಿ ಬಾಗಿಲು ಗಾಳಿ ಬರದ ಹಾಗೆ ಇದ್ದು ಇದರಿಂದ ಅಕ್ಕ ಪಕ್ಕದ ಮನೆಯವರಿಗೂ ವಿಷಯ ತಿಳಿಯಲಿಲ್ಲ  ನಿವೃತ್ತ ಮೇಜರ್ ಜನರಲ್ ಕೋಣೆಗೆ ಬೀಗ ಹಾಕಿದ್ದರಿಂದ ಅವರಿಗೆ ನಡೆಯಲು ಸಹ ಸಾಧ್ಯವಾಗಲಿಲ್ಲ, ಯಾರನ್ನೂ ಸಹ ಕೂಗಿ ಕರೆಯಲು ಅವರಿಗೆ ಆಗಲಿಲ್ಲ. ಕೊನೆಗೂ ಹಲವು ದಿನಗಳು ಹಸಿವಿನಿಂದ ಬಳಲಿ ಆ ಮೇಜರ್ ಮಲಗಿದ್ದಲ್ಲೇ ಅಸ್ತಿಪಂಜರ ಆಗಿ ಹೋದರು.

ಈಗಿನ ಕಾಲದಲ್ಲಿ ಎಲ್ಲರಿಗೂ ಕೆಲಸದ, ಹಣದ ಅನಿವಾರ್ಯತೆ ಇದ್ದೇ ಇದೆ. ಹಾಗಂತ ಅಪ್ಪ – ಅಮ್ಮನನ್ನು ಲೆಕ್ಕಿಸದೆ ನಮ್ಮದೇ ಸ್ವಾರ್ಥಕ್ಕೆ ಹಿರಿಯ ಜೀವಗಳನ್ನು ಬಲಿ ಕೊಡುವುದು ಎಷ್ಟರ ಮಟ್ಟಿಗೆ ಸರಿ ?ಎತ್ತ ಸಾಗುತ್ತಿದೆ ನಮ್ಮ ಸಮಾಜ” ?

Exit mobile version