‘ಬಡವರ ಮಕ್ಕಳು ಬೆಳಿಬೇಕು’ ; ರಿಷಬ್ ಶೆಟ್ಟಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು

Bengaluru : ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಅವರ ಕಾಂತಾರ(Rishab Shetty Trolled) ಸಿನಿಮಾವು ಕನ್ನಡ ಚಿತ್ರರಂಗ ಮಾತ್ರವಲ್ಲದೇ, ಬಾಲಿವುಡ್, ಟಾಲಿವುಡ್ ಅಂಗಳಗಳಲ್ಲಿಯೂ ಸಹ ಮಿಂಚಿ ರಾರಾಜಿಸುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ನಿರಂತರವಾಗಿ ಸದ್ದು ಮಾಡುತ್ತಿದ್ದು, ನಮ್ಮ ಕನ್ನಡ ಭಾಷೆಯಲ್ಲಿ ನೂರೈವತ್ತಕ್ಕೂ ಅಧಿಕ ಕೋಟಿ ಮೊತ್ತ ಕಬಳಿಸಿದೆ ಎಂದು ಅಂದಾಜಿಸಲಾಗಿದೆ.

ಹಾಗೆ ಇತರ ಭಾಷೆಗಳಲ್ಲೂ ಕಾಂತಾರ ಸಿನಿಮಾವು ನೂರಾರು ಕೋಟಿ ಬಾಚಿಕೊಂಡಿದೆ. ಸದ್ಯ ಎಲ್ಲೆಡೆಯು ಈಗ ಕನ್ನಡ ಸಿನಿಮಾದ್ದೆ ಮಾತು, ಕನ್ನಡ ಚಿತ್ರರಂಗದೇ ಹವಾ.

ಇದರ ನಡುವೆ ನಟ ರಿಷಬ್ ಶೆಟ್ಟಿ(Rishab Shetty) ಅವರು ಖಾಸಗಿ ವಿಮಾನ ಖರೀದಿಸಿದ್ದಾರಾ? ಅನ್ನುವ ಮಾತು ಕೂಡ ಕೇಳಿಬರುತ್ತಿದೆ.

ಇದಕ್ಕೆ ಕಾರಣ, ಖಾಸಗಿ ವಿಮಾನ ಒಂದರಲ್ಲಿ ರಿಷಬ್ ಶೆಟ್ಟಿಯವರು ಪ್ರೈವೆಟ್ ವಿಮಾನವೊಂದರಲ್ಲಿ ಓಡಾಡುತ್ತಿರುವ ಪೋಟೋವನ್ನು ಹೊಂಬಾಳೆ ಫಿಲ್ಮ್ಸ್(Hombale Films) ಸಂಸ್ಥೆಯು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಹಾಗೆ ಇತ್ತೀಚಿಗಷ್ಟೆ ರಿಷಬ್ ಅವರು ಆಡಿ ಕಾರೊಂದನ್ನು ತೆಗೆದುಕೊಂಡಿರುವ ಪೋಟೋ ಕೂಡ ಸಖತ್ ವೈರಲ್ ಆಗಿತ್ತು.

https://youtu.be/kY6kuAgq0Cg ಸಾಲು-ಸಾಲು ಸಮಸ್ಯೆಗಳ ಊರು!

ಸದ್ಯ `ಬಡವರ ಮಕ್ಕಳು ಬೆಳಿಬೇಕು ‘ಅನ್ನುವ ಡೈಲಾಗ್ ಡಾಲಿ ಧನಂಜಯ್(Dolly Dhananjaya) ಅವರ ಸಿನಿಮಾದ್ದು, ಕಳೆದ ವಾರ ಧನಂಜಯ ಅವರ ಹೆಡ್ ಬುಷ್(Head Bush) ಚಿತ್ರ ವಿವಾದಕ್ಕೆ ಸಿಲುಕಿ, ಟ್ರೋಲ್ ಆಗಿತ್ತು.

ಟ್ರೋಲ್ ಸುರಿಮಳೆ ಆರಂಭಿಸಿದ ನೆಟ್ಟಿಗರು ಧನಂಜಯ ಅವರ ಡೈಲಾಗ್ ಬಳಸಿ ಅವರನ್ನು ಟ್ರೋಲ್ ಮಾಡಿದ್ದರು.

ಅದೇ ರೀತಿ ಟ್ರೋಲರ್ಸ್ ರಿಷಬ್ ಶೆಟ್ಟಿ ಅವರನ್ನು ಕೂಡ ಟ್ರೋಲ್(Troll) ಮಾಡುತ್ತಿದ್ದಾರೆ. ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ರಿಷಬ್ ಶೆಟ್ಟಿ ಫೋಟೋಗೆ ಧನಂಜಯ ಅವರ “ಬಡವರ ಮಕ್ಕಳು ಬೆಳಿಬೇಕು” ಎಂಬ ಡೈಲಾಗ್ ಸೇರಿಸಿ ಟ್ರೋಲ್ ಮಾಡುಲಾಗುತ್ತಿದೆ.

ಈ ಟ್ರೋಲ್ ಅನ್ನು ಬಹಳಷ್ಟು ಜನರು ಹಂಚಿಕೊಂಡಿದ್ದಾರೆ.

ದಾಖಲೆಗಳೆಲ್ಲಾ ಧೂಳಿಪಟವಾಗಿರುವ ಕಾಂತಾರ ಕನ್ನಡವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿ ಟಾಪ್ ಟ್ರೆಂಡಿಂಗ್ನಲ್ಲಿರುವ ಸಿನಿಮಾವಾಗಿದೆ.

ಅಷ್ಟೇ ಅಲ್ಲದೆ ಐಎಂಡಿಬಿ, ಬುಕ್ ಮೈ ಶೋ ರೇಟಿಂಗ್ ಮೂಲಕ ಬಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿರುವ ಚಿತ್ರ.

ಕರ್ನಾಟಕದಲ್ಲಿ ಅತೀ ಹೆಚ್ಚು ವೀಕ್ಷಣೆಗೆ ಒಳಪಟ್ಟ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ.

ಈ ದಾಖಲೆಯ ಚಿತ್ರಗಳನ್ನು ನಿರ್ಮಿಸಿ, ಜಗತ್ತಿನಾದ್ಯಂತ ಸಿನಿರಸಿಕರಿಗೆ ಉಣಬಡಿಸುತ್ತಿರುವ ಹೆಗ್ಗಳಿಕೆಗೆ ಹೊಂಬಾಳೆ ಫಿಲ್ಮ್ಸ್ ಪಾತ್ರವಾಗಿದೆ.

ಇದನ್ನೂ ಓದಿ : https://vijayatimes.com/pocso-overrides-personal-law/


ಕಾಂತಾರ ಸೃಷ್ಟಿಸಿದ ಅಬ್ಬರಕ್ಕೆ ನಟ ರಿಷಬ್ ಶೆಟ್ಟಿ ಈಗ ಭಾರತದಾದ್ಯಂತ ಸುತ್ತುವಂತಾಗಿದೆ. ದೇಶದ ನಾನಾ ಭಾಗಕ್ಕೆ ಓಡಾಡಲು ಸಮಯದ ಅಭಾವ ಇರುವ ಕಾರಣ,

ಹೊಂಬಾಳೆ ಸಂಸ್ಥೆಯು ಬಾಡಿಗೆಗೆ ಖಾಸಗಿ ವಿಮಾನ ಬುಕ್ ಮಾಡಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದೆ.

Exit mobile version