ಆರ್.ಎಲ್. ಡಿ- ಬಿಜೆಪಿ ಮೈತ್ರಿ ; ಯುಪಿಯ 4 ಲೋಕಸಭಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಲೋಕದಳ ಸ್ಪರ್ಧೆ

New Delhi : ಉತ್ತರಪ್ರದೇಶದ (Uttar Pradesh) ಪ್ರಾದೇಶಿಕ ಪಕ್ಷ ಆರ್ಎಲ್ಡಿಯೊಂದಿಗೆ (RLD BJP alliance in UP) ಬಿಜೆಪಿ (BJP) ಮೈತ್ರಿ ಮಾಡಿಕೊಂಡಿದ್ದು, ಯುಪಿಯ

(UPA) ನಾಲ್ಕು ಕ್ಷೇತ್ರಗಳಲ್ಲಿ ಆರ್ಎಲ್ಡಿ ಸ್ಪರ್ಧಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆರ್ಎಲ್ಡಿ ಪಕ್ಷದ ವರಿಷ್ಠ ಜಯಂತ್ ಚೌಧರಿ ಅವರು ಮಂಗಳವಾರ ದೆಹಲಿಯಲ್ಲಿ ಬಿಜೆಪಿಯ ಹಿರಿಯ

ನಾಯಕರನ್ನು ಭೇಟಿಯಾಗಿ ಈ ಕುರಿತು ಚರ್ಚೆ (RLD BJP alliance in UP) ನಡೆಸಿದ್ದಾರೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ನಾಯಕ ಜಯಂತ್ ಚೌಧರಿ (Jayant Chaudharya) ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha

elections) ಸಂಭವನೀಯ ಮೈತ್ರಿಗಾಗಿ ಬಿಜೆಪಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿಯು ಉತ್ತರ ಪ್ರದೇಶದ ನಾಲ್ಕು ಲೋಕಸಭಾ ಸ್ಥಾನಗಳಾದ ಕೈರಾನಾ, ಬಾಗ್ಪತ್,

ಮಥುರಾ ಮತ್ತು ಅಮ್ರೋಹಾ ಲೋಕಸಭಾ ಕ್ಷೇತ್ರಗಳನ್ನು ಆರ್ಎಲ್ಡಿಗೆ ನೀಡಿದೆ ಎನ್ನಲಾಗಿದೆ.

ಇಂಡಿಯಾ ಮೈತ್ರಿಕೂಟದ (India alliance) ಭಾಗವಾಗಿದ್ದ ಆರ್ಎಲ್ಡಿ ಸದ್ದಿಲ್ಲದೇ ಮೈತ್ರಿಕೂಟದಿಂದ ದೂರ ಸರಿದಿದ್ದು, ಇದೀಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಇತ್ತೀಚೆಗೆ ಉತ್ತರ ಪ್ರದೇಶದ (Uttar Pradesh )ಛಪ್ರೌಲಿಯಲ್ಲಿ ರ್ಯಾಲಿಯನ್ನು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ನಾಯಕ ಜಯಂತ್ ಚೌಧರಿ ಅವರು ಮುಂದೂಡಿದರು.

ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಆರ್ಎಲ್ಡಿ (BJP &RLD) ನಡುವೆ ಒಪ್ಪಂದ ಏರ್ಪಟ್ಟರೆ ಪ್ರಧಾನಿ ನರೇಂದ್ರ ಮೋದಿ (Modi) ಅವರು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು

ಎಂಬ ಚರ್ಚೆ ಕೂಡ ಇದೆ. ಇತ್ತೀಚಿನ ದಿನಗಳಲ್ಲಿ ಚೌಧರಿ ಅವರು ಸಂಸತ್ತಿಗೆ ಗೈರು ಹಾಜರಾಗಿರುವುದು ಆಡಳಿತ ಪಕ್ಷದೊಂದಿಗೆ ಕೈಜೋಡಿಸುವ ಅವರ ಒಲವಿನ ಸಂಕೇತ ಎಂದು

ವ್ಯಾಖ್ಯಾನಿಸಲಾಗುತ್ತಿದೆ.

ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಿಗೆ ಕಾಂಗ್ರೆಸ್ (Congress) ಮತ್ತು ಎಸ್ಪಿ (SP) ತಮ್ಮದೇ ಆದ ಸೀಟು ಹಂಚಿಕೆ ಚರ್ಚೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಈ ರಾಜಕೀಯ

ತಂತ್ರಗಾರಿಕೆ ನಡೆದಿದೆ. ಎಸ್ಪಿ 16 ಸ್ಥಾನಗಳಿಗೆ (SP for 16 seats) ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್ಗೆ 11 ಸ್ಥಾನಗಳನ್ನು (11 seats for Congress) ಪ್ರಸ್ತಾಪಿಸಿದೆ. 2019 ರ

ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಒಂದೇ ಸ್ಥಾನವನ್ನು ಪಡೆದುಕೊಂಡಿತು. ಆದರೆ ಮಾಯಾವತಿಯವರ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಎಸ್ಪಿ ಐದು

ಸ್ಥಾನಗಳನ್ನು ಗೆದ್ದಿತು. ಎಸ್ಪಿ ಈಗ 65 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದೆ.

Exit mobile version