ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ “ಕೆಜಿಎಫ್-2” ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರ ನಡುವೆಯೇ ನಟ ಯಶ್ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾಗಿರುವ ಚಿತ್ರತಂಡ, ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆ ಮಾಡಲು ಮುಂದಾಗಿದೆ.
ಜನವರಿ 8ರಂದು ನಟ ಯಶ್ ಅವರ ಜನ್ಮದಿನವಾಗಿದ್ದು, ಈ ವಿಶೇಷ ದಿನದಂದು ಬೆಳಗ್ಗೆ 10:18 ನಿಮಿಷಕ್ಕೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ಅನೌನ್ಸ್ಮೆಂಟ್ ಪೋಸ್ಟರ್ ಹೊರತರಲಾಗಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ KGF Chapter 2 ಚಿತ್ರ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿಯೇ ಮೂಡಿ ಬಂದಿದ್ದು, ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಮುಂತಾದ ತಾರಾಗಣ ಹೊಂದಿದೆ. ಚಿತ್ರಕ್ಕೆ ಭುವನ್ ಗೌಡ ಅವರ ಛಾಯಾಗ್ರಹಣ, ರವಿ ಬಸರೂರ್ ಅವರ ಸಂಗೀತವಿದೆ.
ಜನವರಿ 8ರಂದು ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನ್ನೆಲ್ನಲ್ಲಿ 10 :18ಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡಲಾಗುತ್ತದೆ.