ಅಂತಾರಾಷ್ಟ್ರೀಯ T20 ಕ್ರಿಕೆಟ್​ಗೆ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ ವಿದಾಯ ಹೇಳಿದ್ದೇಕೆ? ಮುಂದೇನು ?

ಐಸಿಸಿ T20 ವಿಶ್ವಕಪ್ 2024 (T20 World Cup 2024) ಟೂರ್ನಿಯ ಫೈನಲ್​ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 7 ರನ್​ಗಳ ರೋಚಕ ಗೆಲುವು ಸಾಧಿಸಿ ಎರಡನೇ ಚುಟುಕು ಟ್ರೋಫಿಯನ್ನು ಗೆದ್ದುಕೊಂಡಿದೆ. ಭಾರತ ಚಾಂಪಿಯನ್​ ಪಟ್ಟಕ್ಕೇರಿ ವಿಜಯ ಹೊಂದಿದ ಬೆನ್ನಲ್ಲೇ ನಾಯಕ ರೋಹಿತ್​ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಆದರೆ ಇಬ್ಬರು ಸಹ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದಾರೆ.

ರೋಹಿತ್ ಶರ್ಮಾ (Rohit Sharma) ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಭಾರತ ಹಲವು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಸನಿಹಕ್ಕೆ ಬಂದು ಎಡವಿತ್ತು. ಕಳೆದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋಲು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋಲು, 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಸೋಲು ರೋಹಿತ್ ಪಡೆಗೆ ನುಂಗಲಾರದ ತುತ್ತಾಗಿತ್ತು.ವಿರಾಟ್, ರೋಹಿತ್ ಅವರಿಗೆ ಇದೇ ಕೊನೆಯ ಟಿ20 ವಿಶ್ವಕಪ್ ಎನ್ನುವುದು ಗೊತ್ತಿತ್ತು. ಆಟಗಾರನಾಗಿ ಐಸಿಸಿ ಟ್ರೋಫಿ ಗೆಲ್ಲದ ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಕೋಚ್‌ ಆಗಿ ಆ ಕೊರತೆ ನೀಗಿಸಿಕೊಳ್ಳಲು ಇದು ಕೊನೆಯ ಅವಕಾಶವಾಗಿತ್ತು. ಕೊನೆಗೂ ಕೋಟ್ಯಂತರ ಭಾರತೀಯರ ಹಾರೈಕೆ, ಆಟಗಾರರ ಛಲ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟಿದೆ.

ಟಿ20 ಕ್ರಿಕೆಟ್‌ನಲ್ಲಿ ಇಬ್ಬರು ದಿಗ್ಗಜರ ವೃತ್ತಿಜೀವನ ಯುಗಾಂತ್ಯವಾಗಿದೆ. ಆದರೆ ಇಬ್ಬರೂ ಇನ್ನೂ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಇದೆ. ಭಾರತ ತಂಡದ ಜೆರ್ಸಿಯಲ್ಲಿ ಇಬ್ಬರನ್ನು ನೋಡಲು ಆಗದೇ ಇದ್ದರು, ಐಪಿಎಲ್‌ನಲ್ಲಿ (IPL) ಇಬ್ಬರನ್ನು ಇನ್ನೊಮ್ಮೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ. ಇನ್ನು ವಿಶ್ವಕಪ್ ಗೆದ್ದ ಖುಷಿಗೆ ಇಬ್ಬರು ದಿಗ್ಗಜರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಬಿಸಿಸಿಐ (BCCI)ಇಬ್ಬರಿಗೂ ಖಡಕ್ ಸೂಚನೆ ನೀಡಿತ್ತು. ಈ ಬಾರಿಯೇ ಈ ಬಾರಿಯ ಟಿ20 ವಿಶ್ವಕಪ್​ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡುವ ಉದ್ದೇಶ ಬಿಸಿಸಿಐಗೆ ಇರಲಿಲ್ಲ.

ಹೀಗಾಗಿಯೇ ಕಳೆದ ಒಂದು ವರ್ಷದಿಂದ ಏಕದಿನ ವಿಶ್ವಕಪ್​ ಕಾರಣವನ್ನು ಮುಂದಿಟ್ಟು ಇಬ್ಬರು ಹಿರಿಯ ಆಟಗಾರರನ್ನು ಟಿ20 ತಂಡದಿಂದ ಹೊರಗಿಡಲಾಗಿತ್ತು. ಅನಿವಾರ್ಯವಾಗಿ ಬಿಸಿಸಿಐ ಇವರನ್ನು ಈ ಸಲ ಆಡಿಸಬೇಕಾಗಿ ಬಂದಿತ್ತು.ಆದರೆ ಈ ಆಯ್ಕೆಗೂ ಮುನ್ನವೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಇದುವೇ ಕೊನೆಯ ಟಿ20 ವಿಶ್ವಕಪ್ ಎಂಬ ಸೂಚನೆ ನೀಡಿದ್ದರು. ಅಲ್ಲದೆ 2026ರ ಟಿ20 ವಿಶ್ವಕಪ್​ ಮುಂದಿಟ್ಟುಕೊಂಡು ಹೊಸ ತಂಡವನ್ನು ರೂಪಿಸಲಿದ್ದೇವೆ.

ಹಿರಿಯ ಆಟಗಾರರನ್ನು ಟಿ20 ತಂಡದಿಂದ ಕೈ ಬಿಡಲಾಗುತ್ತದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ (Virat Kohli)ಗೆ ತಿಳಿಸಿದ್ದರು.ಅತ್ತ ಬಿಸಿಸಿಐ ಸೂಚನೆ, ಇತ್ತ ನೂತನ ಕೋಚ್ ಗೌತಮ್ ಗಂಭೀರ್ ಬೇಡಿಕೆಯಂತೆ ಇವರಿಬ್ಬರೂ T20 ಮ್ಯಾಚ್ಗೆ (Match) ವಿದಾಯ ಹೇಳಿದ್ದಾರೆ.

Exit mobile version