ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ರೋಸೆನ್‌ಬೌರ್ ಫೈರ್‌ ಫೈಟಿಂಗ್ ಸಿಮ್ಯುಲೇಟರ್’ ಅಳವಡಿಕೆ

 ಬೆಂಗಳೂರು ನ 24 : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರೋಸೆನ್‌ಬೌರ್ ಫೈರ್ ಫೈಟಿಂಗ್ ಸಿಮ್ಯುಲೇಟರ್ (Rosenbauer firefighting simulator) ನಿಯೋಜನೆ ಮಾಡಲಾಗಿದ್ದು, ಈ ಮೂಲಕ ವಿಮಾನ ನಿಲ್ದಾಣ ಮತ್ತೊಂದು ಅಂತಾರಾಷ್ಟ್ರೀಯ ಹಿರಿಮೆಗೆ ಪಾತ್ರವಾಗಿದೆ.

ರೋಸೆನ್‌ಬೌರ್ ಫೈರ್ ಫೈಟಿಂಗ್ ಸಿಮ್ಯುಲೇಟರ್  ವ್ಯವಸ್ಥೆ ಹೊಂದಿದ ದಕ್ಷಿಣ ಏಷ್ಯಾದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.

ವಿಮಾನಿಲ್ದಾಣದಲ್ಲಿ ಸಂಭವಿಸುವ ಅಗ್ನಿ ಅವಘಡವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಇದೇ ಮೊದಲ ಬಾರಿಗೆ “ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್” ಅನ್ನು ಪರಿಚಯಿಸಲಾಗಿದೆ.

ಇದೊಂದು ಅತ್ಯಾಧುನಿಕ ಅಗ್ನಿಶಾಮಕ ತಂತ್ರಜ್ಞಾನವಾಗಿದ್ದು,  ಯಾವುದೇ ರೀತಿಯ ಅಗ್ನಿ ಅವಘಡ ಸಂಭವಿಸಿದರೂ ತಕ್ಷಣ ಅದನ್ನು ಆರಿಸುವ ಕೆಲಸದಲ್ಲಿ ನಿಪುಣತೆ ಹೊಂದಿದೆ. ವಿಮಾನ ನಿಲ್ದಾಣ ಅಥವಾ ವಿಮಾನಗಳ ಅಪಘಾತದ ಸಂದರ್ಭದಲ್ಲಿ ಹೊತ್ತಿಕೊಳ್ಳುವ ಅಗ್ನಿ ಅವಘಡವನ್ನು ತುರ್ತಾಗಿ ಆರಿಸುವಲ್ಲಿ ಈ ಅತ್ಯಾಧುನಿಕ ಸಿಮ್ಯುಲೇಟರ್ ಕೆಲಸ ಮಾಡಲಿದೆ.

ಈ ಅತ್ಯಾಧುನಿಕ ತಂತ್ರಜ್ಞಾನದ ಅಗ್ನಿಶಾಮಕವನ್ನು ಭಾರತದ ಯಾವುದೇ ವಿಮಾನ ನಿಲ್ದಾಣ ತಂಡ ಇಲ್ಲಿಗೆ ಆಗಮಿಸಿ ಇದರ ತರಬೇತಿ ಪಡೆಯಲು ಸಹ ಮುಕ್ತ ಅವಕಾಶವನ್ನು ಒದಗಿಸಿಕೊಡಲಾಗಿದೆ.

ರೋಸನ್‌ಬೌರ್ ಸಿಮ್ಯುಲೇಟರ್‌ನ ಎರಡು ಫ್ಯಾಂಥರ್‌ನಲ್ಲಿ 6 ಟ್ರಕ್‌ಗಳು, ಹಾಗೂ 8 ಟ್ರಕ್‌ಗಳನ್ನು ಇರಿಸಲಾಗಿದೆ. ಈ ಟ್ರಕ್‌ಗಳು ಎರಡು ಹೈರೀಚ್ ಎಕ್ಸ್ಟೆಂಡೆಬಲ್ ಟರೆಟ್ಸ್ (ಎಚ್‌ಆರ್‌ಇಟಿ)ಯನ್ನು ಒಳಗೊಂಡಿದೆ.

ಸಿಮ್ಯುಲೇಟರ್ ಬಗ್ಗೆ ಮಾತನಾಡಿದ ಬಿಐಎಎಲ್  ಸಿಇಒ ಜಯರಾಜ್  ಷಣ್ಮುಗಂ, ಬೆಂಗಳೂರು ವಿಮಾನ ನಿಲ್ದಾಣದ ಸುರಕ್ಷತೆಯ ದೃಷ್ಟಿಯಿಂದ ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ರೋಸೆನ್‌ಬೌ‌ ಫೈರ್‌ಫೈಟಿಂಗ್ ಸಿಮ್ಯುಲೇಟರ್ ಪರಿಚಯಿಸಲಾಗುತ್ತಿದೆ. ಇದು ಯಾವುದೇ ರೀತಿಯ ಅಗ್ನಿ ಅವಘಡವನ್ನು ತಡೆಯುವ ಕೆಲಸದಲ್ಲಿ ನೈಪುಣ್ಯ ಹೊಂದಿದೆ. ದೇಶದ ಯಾವುದೇ ನಿಲ್ದಾಣದ ತಂಡ ಈ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ತರಬೇತಿ ಪಡೆಯಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

Exit mobile version