ಹಿಂಸೆ ಹೆಚ್ಚುತ್ತಿರುವ ಸಮಾಜವು ಹೆಚ್ಚು ದಿನ ಉಳಿಯುವುದಿಲ್ಲ : ಮೋಹನ್ ಭಾಗವತ್!

RSS Leader

ಹಿಂಸೆ(Torture) ಹೆಚ್ಚಾಗುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಹಿಂಸೆ ಹೆಚ್ಚುತ್ತಿರುವ ಸಮಾಜವು(Society) ತನ್ನ ಅಸ್ತಿತ್ವವನ್ನು ಕಳೆದುಕೊಂಡು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದು ಆರ್‍ಎಸ್‍ಎಸ್(RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagavath) ಅಭಿಪ್ರಾಯಪಟ್ಟಿದ್ದಾರೆ.


ಮುಂಬೈನಲ್ಲಿ(Mumbai) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಮುದಾಯಗಳ ನಡುಗೆ ಸಂಘರ್ಷ(Conflict) ಹೆಚ್ಚಾಗುತ್ತಿದೆ. ಹಿಂಸೆ ಮತ್ತು ಸಂಘರ್ಷದಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಎಲ್ಲ ಸಮುದಾಯಗಳು ಸಹಬಾಳ್ವೆಯಿಂದ ಮತ್ತು ಸಾಮರಸ್ಯದಿಂದ ಬದುಕಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ಮತ್ತು ಮಾನವೀಯತೆಯನ್ನು ಪರಿಪಾಲಿಸುವ ಕೆಲಸಗಳಾಗಬೇಕಿದೆ ಎಂದರು.


ಇನ್ನು ನಾವು ಎಂದಿಗೂ ಶಾಂತಿ ಪ್ರಿಯರಾಗಿರಬೇಕು. ಅಹಿಂಸಾತ್ಮಕ ಮಾರ್ಗದಲ್ಲೇ ಸಾಗಬೇಕು. ಎಲ್ಲ ಸಮುದಾಯಗಳು ಶಾಂತಿ ಮತ್ತು ಸಾಮರಸ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮುದಾಯಗಳ ನಡುವೆ ಶಾಂತಿ ಕಾಪಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಹಿಂಸೆಯನ್ನು ಪ್ರಚೋದಿಸುವ ಸಮಾಜವು ತನ್ನ ಕೊನೆಯ ದಿನಗಳನ್ನು ಎಣಿಸುತ್ತದೆ. ಹೀಗಾಗಿ ಎಲ್ಲರೂ ಅಹಿಂಸೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸಿಂಧಿ ಭಾಷೆಯ ಕುರಿತು ಮಾತನಾಡಿ, ಭಾರತದಲ್ಲಿ ಸಿಂಧಿ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ‘ಸಿಂಧಿ ವಿಶ್ವವಿದ್ಯಾಲಯ’ ಸ್ಥಾಪಿಸುವ ಅಗತ್ಯವಿದೆ.

ಭಾರತ ಬಹುಭಾಷಾ ದೇಶವಾಗಿದ್ದು, ಎಲ್ಲ ಭಾಷೆಗೂ ಅದರದೇ ಆದ ಪ್ರಾಮುಖ್ಯತೆ ಇದೆ. ಪ್ರತಿ ಭಾಷೆಯೊಳಗೂ ಒಂದು ವಿಭಿನ್ನವಾದ ಸಂಸ್ಕೃತಿ ಇದೆ. ಹೀಗೆ ಸಿಂಧಿ ಭಾಷೆಯ ಕೆಲವರು ತಮ್ಮ ಭೂಮಿಯನ್ನು ರಕ್ಷಿಸಲು ಪಾಕಿಸ್ತಾನದಲ್ಲೇ ಉಳಿದರು. ಇನ್ನು ಕೆಲವರು ತಮ್ಮ ಧರ್ಮ ರಕ್ಷಿಸಲು ಭಾರತಕ್ಕೆ ಬಂದರು ಎಂದು ಅಭಿಪ್ರಾಯಪಟ್ಟರು.

Exit mobile version