‘ಚಡ್ಡಿಗಳನ್ನು ಸುಡುತ್ತೇವೆ’ ಎಂದ ಸಿದ್ದು ; ಕರ್ನಾಟಕ ಕಾಂಗ್ರೆಸ್‌ ಕಛೇರಿಗೆ ಚಡ್ಡಿ ಕಳುಹಿಸಿದ ಆರ್‌ಎಸ್‌ಎಸ್!

Siddaramaiah

ಹಿಂದಿನ ದಿನಗಳಲ್ಲಿ ನಮ್ಮ ರಾಜಕಾರಣಿಗಳು(Politicians) ಕಲ್ಯಾಣ ಯೋಜನೆಗಳು, ನೀತಿ ಮತ್ತು ನ್ಯಾಯದಂತಹ ವಿಷಯಗಳ ಬಗ್ಗೆ ಹಾಗೋ ಹೀಗೋ ಚರ್ಚೆ ನಡೆಸುತ್ತಿದ್ದರು.

ಆದರೆ ಈಗ ಅದೆಲ್ಲವೂ ಮಂಗಮಾಯವಾಗಿದೆ! ಸದ್ಯ ಈಗ ಚಡ್ಡಿ ಗಲಭೆ ಉಂಟಾಗಿದ್ದು, ಚಡ್ಡಿ ಸುಡುವ ಪ್ರತಿಭಟನೆ ತೀವ್ರ ಸದ್ದು ಮಾಡಿದೆ. ಸೋಮವಾರ, ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ‘ಚಡ್ಡಿ’ಗಳನ್ನು ಸುಡಲಾಗುವುದು ಎಂದು ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಕೊಟ್ಟ ಹೇಳಿಕೆಯ ಬೆನ್ನಲ್ಲೇ, ಆರ್‌ಎಸ್‌ಎಸ್, ಕಾಂಗ್ರೆಸ್ ಕಚೇರಿಗೆ ಚಡ್ಡಿಗಳನ್ನು ಸಂಗ್ರಹಿಸಿ ಕಳಿಸಲು ಪ್ರಾರಂಭಿಸಿದೆ.

ಕಳೆದ ವಾರ, ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ(NSUI) ಕೆಲವು ಸದಸ್ಯರು ರಾಜ್ಯದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ಅವರ ಮನೆಯ ಹೊರಗೆ ಒಂದು ಜೋಡಿ ಖಾಕಿ ಶಾರ್ಟ್ಸ್‌ಗೆ ಬೆಂಕಿ ಹಚ್ಚಿದರು. ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಕೇಸರಿಕರಣದ ವಿರುದ್ಧ ಪ್ರತಿಭಟಿಸಿ ಈ ರೀತಿ ಮಾಡಲಾಗಿತ್ತು. ಇದರ ಬೆನ್ನಲ್ಲೇ, ಭಾನುವಾರ ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, “ಎನ್‌ಎಸ್‌ಯುಐ ಸದಸ್ಯರು ಪೊಲೀಸರ ಸಮ್ಮುಖದಲ್ಲಿ ಚಡ್ಡಿಯನ್ನು ಸುಟ್ಟರು. ಏನೀಗ?

ಆರ್‌ಎಸ್‌ಎಸ್ ವಿರುದ್ಧ ಪ್ರತಿಭಟಿಸಲು ನಾವು ಎಲ್ಲೆಡೆ ಚಡ್ಡಿಗಳನ್ನು ಸುಡುತ್ತೇವೆ. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಚಾಡಿ ಈಗಾಗಲೇ ಸಡಿಲವಾಗಿದೆ. ಹೀಗಾಗಿ ಚಡ್ಡಿ ಸುಡಲು ಮುಂದಾಗಿದ್ದಾರೆ. ಅವರ ಚಡ್ಡಿ ಯುಪಿಯಲ್ಲಿ ಕಳೆದುಹೋಯಿತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚಡ್ಡಿ, ಲುಂಗಿ ಕಳೆದುಕೊಂಡಿದ್ದಾರೆ. ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಅವರು, ”ಸಿದ್ದರಾಮಯ್ಯನಿಗೆ ಚಡ್ಡಿ ಸುಡುವುದಾದರೆ ಅವರ ಮನೆಯೊಳಗೆ ಸುಡಲಿ. ಎಸ್‌ಸಿ ಮೋರ್ಚಾದ ಎಲ್ಲಾ ಜಿಲ್ಲಾಧ್ಯಕ್ಷರು ಸಿದ್ದರಾಮಯ್ಯ ಅವರಿಗೆ ತಮ್ಮ ಚಡ್ಡಿಗಳನ್ನು ಕಳುಹಿಸಿ ಸಹಾಯ ಮಾಡುವಂತೆ ಹೇಳಿದ್ದೇನೆ.

ಮೊದಲನೆಯದಾಗಿ, ಚಡ್ಡಿಗಳನ್ನು ಸುಡುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ ಎಂಬ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯುವಂತೆ ನಾನು ಸಿದ್ದರಾಮಯ್ಯ ಅವರನ್ನು ಕೇಳುತ್ತೇನೆ. ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಇದೀಗ ಮಂಡ್ಯ ಜಿಲ್ಲೆಯ ಆರ್‌ಎಸ್‌ಎಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಕಚೇರಿಗೆ ಚಡ್ಡಿಗಳನ್ನು ಸಂಗ್ರಹಿಸಿ ರವಾನಿಸುವ ಮುಖೇನ ತಮ್ಮ ಪ್ರತಿಭಟನೆಯನ್ನು ನಡೆಸಿದ್ದಾರೆ.

Exit mobile version