ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುತ್ತಿದ್ದೀರಾ? ಇನ್ಮುಂದೆ ಪಾಸ್​ಪೋರ್ಟ್ ಮಾದರಿ ವೆರಿಫಿಕೇಶನ್ ಪ್ರಕ್ರಿಯೆ ಇರಲಿದೆ.

New Delhi: 18 ವರ್ಷ ಮೇಲ್ಪಟ್ಟ ವಯಸ್ಸಿನವರು ಮೊದಲ ಬಾರಿಗೆ ಆಧಾರ್ ಕಾರ್ಡ್ (Rules for new aadhaar card) ಮಾಡಿಸುತ್ತಿದ್ದರೆ ಇನ್ಮುಂದೆ ಪಾಸ್​ಪೋರ್ಟ್ ಮಾದರಿಯಲ್ಲಿ ವೆರಿಫಿಕೇಶನ್

ಪ್ರಕ್ರಿಯೆ ಇದ್ದು, ಆಧಾರ್ ಕಾರ್ಡ್​ಗೆ ಮನವಿ ಸಲ್ಲಿಸಿದ ಬಳಿಕ ಡಾಟಾ ಕ್ವಾಲಿಟಿ (Data Quality) ಪರಿಶೀಲನೆಯಾಗಿ ನಂತರ ಸರ್ವಿಸ್ ಪೋರ್ಟಲ್​ನಲ್ಲಿ (Service Portal) ವೆರಿಫಿಕೇಶನ್ ಆಗುತ್ತದೆ.

ಆಧಾರ್​ಗೆ ಅರ್ಜಿ ಸಲ್ಲಿಸಿದ 180 ದಿನದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು ಆಧಾರ್ ಕಾರ್ಡ್ ಕೈ ಸೇರುತ್ತದೆ. ಅದಕ್ಕಾಗಿ ನೋಡಲ್ ಅಧಿಕಾರಿಗಳನ್ನು (Nodal Officer) ನಿಯೋಜಿಸಲಾಗುತ್ತದೆ. 18 ವರ್ಷ

ಮೇಲ್ಪಟ್ಟ ವಯಸ್ಸಿನವರು ಮೊದಲ ಬಾರಿಗೆ ಆಧಾರ್ ಮಾಡಿಸಬೇಕೆಂದರೆ ಪಾಸ್​ಪೊರ್ಟ್ ರೀತಿ ವೆರಿಫಿಕೇಶನ್ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ,’ ಎಂದು ಯುಐಡಿಎಐ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ

ನೀಡಿದ್ದಾಗಿ ಐಎಎನ್​ಎಸ್ (IANS) ಸುದ್ದಿಸಂಸ್ಥೆ (Rules for new aadhaar card) ವರದಿ ಮಾಡಿದೆ.

ಈ ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಇರುತ್ತದೆ. ಆಧಾರ್ ವೆರಿಫಿಕೇಶನ್​ಗಾಗಿ (Aadhaar Verification) ಜಿಲ್ಲಾ ಹಾಗೂ ಉಪ ವಿಭಾಗೀಯ ಮಟ್ಟಗಳಲ್ಲಿ ನೋಡಲ್ ಅಧಿಕಾರಿಗಳು,

ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರ್​ಗಳನ್ನು (District Magistrate) ರಾಜ್ಯ ಸರ್ಕಾರಗಳೇ ನೇಮಕ ಮಾಡಲಿವೆ.

ಆಧಾರ್ ವೆರಿಫಿಕೇಶನ್ ಪ್ರಕ್ರಿಯೆ ಹೇಗಿರುತ್ತೆ?
18 ವರ್ಷ ಮೇಲ್ಪಟ್ಟವರು ಮೊದಲ ಬಾರಿಗೆ ಆಧಾರ್ ಮಾಡಿಸುತ್ತಿದ್ದರೆ, ಅವರಿಗೆಂದೇ ನಿರ್ದಿಷ್ಟವಾಗಿರುವ ಕಚೇರಿಗಳಿರುತ್ತವೆ. ಯುಐಡಿಎಐ (UIDAI) ನಿರ್ದಿಷ್ಟಪಡಿಸಿದ ಇಂಥ ಕೇಂದ್ರಗಳಲ್ಲಿ ಈ ವರ್ಗದ

ಜನರು ಆಧಾರ್ ಮಾಡಿಸಬೇಕಾಗುತ್ತದೆ. ಆಧಾರ್​ಗೆಂದು ಈ ವರ್ಗದ ಜನರು ಸಲ್ಲಿಸುವ ಅರ್ಜಿಯ ಡಾಟಾ ಕ್ವಾಲಿಟಿ ಪರಿಶೀಲನೆ ಆಗುತ್ತದೆ.

ಸರ್ವಿಸ್ ಪೋರ್ಟಲ್​ನಲ್ಲಿ ವೆರಿಫಿಕೇಶನ್ ಪ್ರಕ್ರಿಯೆ ನಡೆಯುತ್ತದೆ. ಈ ಸರ್ವಿಸ್ ಪೋರ್ಟಲ್​ನಲ್ಲಿ ಎಲ್ಲಾ ಆಧಾರ್ ಮನವಿಗಳ ವೆರಿಫಿಕೇಶನ್ ಪ್ರಕ್ರಿಯೆ ನಡೆದು 180 ದಿನದೊಳಗೆ ಕ್ಲಿಯರೆನ್ಸ್ ಜನರೇಟ್

(Generate Clearance) ಆಗುತ್ತದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟರ್​ಗಳು ಈ ಪ್ರಕ್ರಿಯೆ ನಿಗದಿತ ದಿನದೊಳಗೆ ಮುಗಿಯುವುದನ್ನು ಖಾತ್ರಿಪಡಿಸಬೇಕು.

ಈ ರೀತಿಯ ವೆರಿಫಿಕೇಶನ್ ಪ್ರಕ್ರಿಯೆ ಮೊದಲ ಬಾರಿಗೆ ಆಧಾರ್ ಮಾಡಿಸುತ್ತಿರುವ 18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಅನ್ವಯ ಆಗುತ್ತದೆ. ಒಮ್ಮೆ ಈ ಪ್ರಕ್ರಿಯೆ ಮೂಲಕ ಆಧಾರ್ ಕಾರ್ಡ್

ಮಾಡಿಸಿದ ಬಳಿಕ ಅವರು ಆಧಾರ್ ಅಪ್​ಡೇಟ್ (Aadhar Update) ಇತ್ಯಾದಿ ಕಾರ್ಯಗಳನ್ನು ಮಾಮೂಲಿಯಾಗಿಯೇ ಮಾಡಬಹುದು.

ಇದನ್ನು ಓದಿ: ಈ ಲಕ್ಷಣಗಳಿದ್ದರೆ ಹೊಟ್ಟೆಯ ಕ್ಯಾನ್ಸರ್ ಇರಬಹುದು ಎಚ್ಚರ..!

Exit mobile version