ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ; ಅಷ್ಟಕ್ಕೂ ಅಸಲಿ ಕಾರಣವೇನು?

Bengaluru : ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ(Rumors Behind Rashmika Ban) ಅವರು ಸದಾ ಒಂದಲ್ಲ ಒಂದು ವಿವಾದದಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಒಳಗಾಗಿರುತ್ತಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೇಡಿಂಗ್ ಆಗುತ್ತಿರುವ ವಿಷಯವೇನಂದ್ರೇ, ನಟಿ (Rumors Behind Rashmika Ban) ರಶ್ಮಿಕಾ ಮಂದಣ್ಣ ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ (Ban) ಆಗಿರುವ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ.

ಕಾಂತಾರ ನಟ ರಿಷಬ್ ಶೆಟ್ಟಿ (Rishab Shetty) ನಿರ್ದೇಶನದಲ್ಲಿ ಮೂಡಿಬಂದ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ ರಶ್ಮಿಕಾ, ತದನಂತರ ತೆಲುಗು ಚಿತ್ರರಂಗದಲ್ಲಿ ತನ್ನದೇ ಆದ ಹೆಸರನ್ನು ಮಾಡಿದರು.

ಇತ್ತೀಚಿಗೆ ನಡೆದ ಒಂದು ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ತಮ್ಮ ಚಿತ್ರರಂಗದ ಬಗ್ಗೆ ಹಿಂದಿ ನಿರೂಪಕಿ ಕೇಳಿದ ಪ್ರೆಶ್ನೆಗೆ,

ರಶ್ಮಿಕಾ ತಾವು ಮೊದಲು ಮಾಡಿದ ಚಿತ್ರದ ಬಗ್ಗೆ ಕೈಸನ್ನೆಯಲ್ಲಿ ಉತ್ತರ ನೀಡಿದಕ್ಕೆ ಕನ್ನಡ ಅಭಿಮಾನಿಗಳು ರಶ್ಮಿಕಾ ವಿರುದ್ಧ ತೀವ್ರ ತೀವ್ರ ಕೋಪಗೊಂಡು ಟ್ರೋಲ್ ಮಾಡಿದರು.

ಇದನ್ನೂ ಓದಿ : https://vijayatimes.com/hdk-slams-forest-department/

ಕಿರಿಕ್ ಪಾರ್ಟಿ (Kirik party) ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲಿಯು ಕೂಡ ಅಸಮಾಧಾನದ ಗಾಳಿ ಬೀಸುತ್ತಿದೆ.

ತೆಲುಗು ಚಿತ್ರರಂಗದ ಖ್ಯಾತ ಸಿನಿಮಾ ಪತ್ರಕರ್ತ, ಬರಹಗಾರ, ನಿಮಾ ವಿಮರ್ಶಕ ತೋಟಾ ಪ್ರಸಾದ್(Thota Prasad) ರಶ್ಮಿಕ ಅವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಷ್ಟೇ ಎತ್ತರಕ್ಕೆ ಬೆಳೆದರು ತಾವು ಬಳೆದು ಬಂದ ಹಾದಿಯನ್ನು ಹಾಗೂ ನಮ್ಮನ್ನು ಬೆಳೆಸಿದವರನ್ನು ಎಂದಿಗು ಮರೆಯಬಾರದು, ಯಾವುದು ಶಾಶ್ವತವಲ್ಲ!

ವರ್ಷಗಳು ಕಳೆದಂತೆ ನಾಯಕಿಯರ ಬೇಡಿಕೆ ಇಳಿಯುತ್ತದೆ, ಯಾರನ್ನೇ ಆಗಲಿ ಅವಮಾನಿಸಬಾರದು ಒಬ್ಬರ ಬಗ್ಗೆ ಅಸಮಾಧಾನ ಇರುವುದು ಸಾಮಾನ್ಯ.

ಸೆಲೆಬ್ರಿಟಿ ಅಂದ ಮೇಲೆ ಎಲ್ಲ ಜನರು ತಮ್ಮನ್ನು ನೋಡುತ್ತಾರೆ ಎಂಬ ಕನಿಷ್ಟ ಅರಿವಿರಬೇಕು, ಹಿಂದಿ ಚಾನೆಲ್ನಲ್ಲಿ ನಡೆದ ಸಂದರ್ಶನದಲ್ಲಿ ತಾನು ಸಿನಿಮಾರಂಗಕ್ಕೆ ಬರಲು ಕಾರಣವಾದ ಕನ್ನಡದ ಕಿರಿಕ್ ಪಾರ್ಟಿಯ ಪ್ರೊಡಕ್ಷನ್ ಹೌಸ ಹೆಸರು ಹೇಳದೆ,

ತನ್ನ ಕೈಗಳ ಮೂಲಕ ಸನ್ನೆ ಮಾಡುವ ಮೂಲಕ ಒಂದು ಪ್ರೊಡಕ್ಷನ್ ಹೌಸ್ ಗೆ ಬಂದೆ ಎಂದು ಹೇಳಿದರು.

https://fb.watch/haDlmUAJ_-/ ಮೈಸೂರು : ಕಳಪೆ ಕಾಮಗಾರಿ ವಿರುದ್ಧ ಧ್ವನಿ ಎತ್ತಬೇಕು

ರಕ್ಷಿತ್ ಶೆಟ್ಟಿ (Rakshith Shetty) ಹೆಸರು ಹೇಳಲು ಅಸಮಾಧಾನವಿದ್ದಿದ್ದರೆ, ಪ್ರೊಡಕ್ಷನ್ ಹೌಸ್ ನ ಹೆಸರು ಹೇಳಬಹುದಿತ್ತು ಎಂದು ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ ಹೇಳಿದ್ದಾರೆ.

ರಶ್ಮಿಕಾ ಒಂದಲ್ಲ ಒಂದು ವಿಚಾರದಲ್ಲಿ ವಿವಾದವನ್ನು ಹುಟ್ಟುಹಾಕಿ ಟ್ರೋಲಿಗರ ಕಣ್ಣಿಗೆ ಗುರಿಯಾಗ್ತಾ ಇದ್ದಾರೆ.

ಇದನ್ನೂ ಓದಿ : https://vijayatimes.com/swift-modified-to-lamborghini/

ಇವರು ಕನ್ನಡಕ್ಕೆ ಒಂದರ ಮೇಲೊಂದುಬ ಎಂಬಂತೆ ಮಾಡಿರುವ ಅವಮಾನದಿಂದ ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗ್ತಿದ್ದಾರೆ.

ಈ ಕಾರಣವನ್ನು ಮುಂದಿಟ್ಟುಕೊಂಡು ಇವರನ್ನು ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕನ್ನಡಿಗರಿಂದ ಕೇಳಿಬರುತ್ತಿದೆ.

ಚಿತ್ರರಂಗದಲ್ಲಿ ಇರುವ ಯಾವುದೇ ನಾಯಕಿಯರನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಮತ್ತು ಆ ರೀತಿ ಯಾರನ್ನು ಬ್ಯಾನ್ ಆಡಲು ಆಗುವುದಿಲ್ಲ ಎಂದು ಕನ್ನಡ ಫಿಲಂ ಚೇಂಬರ್ ಅಧ್ಯಕ್ಷರಾದ ಭಾಮಾ ಹರೀಶ್ (Bhama Harish) ತಿಳಿಸಿದ್ದಾರೆ.

ಇನ್ನಾದರು ರಶ್ಮಿಕ ಮಂದಣ್ಣ ರವರಿಗೆ ಕನ್ನಡಿಗರ ಬಗ್ಗೆ, ಕನ್ನಡ ಭಾಷೆ, ಕನ್ನಡ ಸಿನಿಮಾ ಬಗ್ಗೆ ಗೌರವ ಬರಲಿ ಎಂದು ಕನ್ನಡಿಗರು ಅಭಿಪ್ರಾಯಿಸಿದ್ದಾರೆ.

Exit mobile version