ನಿಮ್ಮ ತಟಸ್ಥ ಧೋರಣೆ ಯುದ್ದ ನಿಲ್ಲಿಸಲು ಸಹಾಯ ಮಾಡುವುದಿಲ್ಲ : ಉಕ್ರೇನ್!

ukraine

ರಷ್ಯಾ-ಉಕ್ರೇನ್(Russia-Ukraine) ನಡುವೆ ಯುದ್ದ(War) ಪ್ರಾರಂಭವಾಗಿ ಎರಡು ತಿಂಗಳು ಕಳೆದಿವೆ. ಇಲ್ಲಿಯವರೆಗೂ ಜಗತ್ತಿನ ಯಾವ ಪ್ರಬಲ ರಾಷ್ಟ್ರವೂ ಯುದ್ದವನ್ನು ನಿಲ್ಲಿಸುವ ನಿಟ್ಟಿನಲ್ಲಿ ನಮಗೆ ಬೆಂಬಲ ನೀಡುತ್ತಿಲ್ಲ.

ಇಡೀ ಉಕ್ರೇನ್ ಅಕ್ಷರಶಃ ನರಕಯಾತನೆಯಲ್ಲಿ ಮುಳುಗಿದೆ. ಹೀಗಾಗಿ ಭಾರತದಂತ ರಾಷ್ಟ್ರ ತನ್ನ ತಟಸ್ಥ ಧೋರಣೆಯನ್ನು ಕೈಬಿಟ್ಟು ಉಕ್ರೇನ್‍ಗೆ ಬೆಂಬಲ ನೀಡಬೇಕೆಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಮನವಿ ಮಾಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ದದಲ್ಲಿ ಭಾರತ ಯಾವುದೇ ರಾಷ್ಟ್ರಕ್ಕೂ ಬೆಂಬಲ ನೀಡದೇ ತಟಸ್ಥವಾಗಿದೆ. ಅನೇಕ ಬಾರಿ ಯುದ್ದ ನಿಲ್ಲಿಸುವಂತೆ ರಷ್ಯಾಕ್ಕೆ ಮನವಿ ಮಾಡಿದೆ. ಆದರೆ ಭಾರತ ಅನುಸರಿಸುತ್ತಿರುವ ತಟಸ್ಥ ನಿಲುವು ಯುದ್ದವನ್ನು ನಿಲ್ಲಿಸಲು ಸಹಾಯ ಮಾಡುವುದಿಲ್ಲ.

ಭಾರತದ ಸಹಾನೂಭೂತಿ ಹಾಗೂ ಯುದ್ದವನ್ನು ನಿಲ್ಲಿಸಬೇಕೆಂದು ಅವರ ನಿಲುವನ್ನು ಪ್ರಶಂಸಿಸುತ್ತೇವೆ. ಆದರೆ ಈ ಧೋರಣೆಯಿಂದ ಯುದ್ದವನ್ನು ಕೊನೆಗಾಣಿಸಲು ಸಾಧ್ಯವಿಲ್ಲ. ಸದ್ಯ ಯುದ್ದವನ್ನು ನಿಲ್ಲಿಸಲು ಉತ್ತಮ ಮಾರ್ಗವೆಂದರೆ ಉಕ್ರೇನ್ ದೇಶವನ್ನು ಭಾರತ ಬೆಂಬಲಿಸಬೇಕು. ಅದೇ ರೀತಿ ಯುದ್ದವನ್ನು ಗೆಲ್ಲುತ್ತೇವೆ ಎಂದು ಭ್ರಮೆಯಲ್ಲಿರುವ ರಷ್ಯಾದ ಕೈ ಬೀಡುವುದು. ಇನ್ನು ಇಡೀ ಯುದ್ದದಲ್ಲಿ ಅಪರಾಧಿ ಮತ್ತು ಬಲಿಪಶು ಯಾರು ಎಂಬುದು ಜಗತ್ತಿಗೆ ಸ್ಪಷ್ಟವಾಗಿ ತಿಳಿದಿದೆ.

ಹೀಗಾಗಿ ಬಲಿಪಶುವಿನ ಪರವಾಗಿರುವುದು ನೈತಿಕ ಕರ್ತವ್ಯ. ರಾಜಕೀಯವಾಗಿ ಬುದ್ದಿವಂತರು ಕೂಡಾ ಬಲಿಪಶುಗಳನ್ನೇ ಬೆಂಬಲಿಸಬೇಕು ಎಂದು ಸಚಿವ ಡಿಮಿಟ್ರೋ ಕುಲೆಬಾ ಮನವಿ ಮಾಡಿದ್ದಾರೆ. ಇನ್ನು ಉಕ್ರೇನ್ ವಿದೇಶಾಂಗ ಸಚಿವರ ಈ ಹೇಳಿಕೆಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯುದ್ದವನ್ನು ನಿಲ್ಲಿಸಲು ನಾವು ಮನವಿ ಮಾಡುತ್ತೇವೆ. ಶಾಂತಿ ಸ್ಥಾಪಿಸುವ ನಮ್ಮ ಪ್ರಯತ್ನಗಳು ಕೊನೆಗೊಳ್ಳುವುದಿಲ್ಲ. ಯುದ್ದವನ್ನು ಭಾರತ ಎಂದಿಗೂ ಬೆಂಬಲಿಸುವುದಿಲ್ಲ.

ಎರಡು ದೇಶಗಳು ಮಾತುಕತೆಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಈ ಹಿಂದೆಯೆ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಈ ಹಿಂದೆ ಭಾರತ-ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ದದ ಸಮಯದಲ್ಲಿ ಉಕ್ರೇನ್ ದೇಶ ಪಾಕಿಸ್ತಾನವನ್ನು ಬೆಂಬಲಿಸಿತ್ತು.

Exit mobile version