ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಜೈಲಿನಲ್ಲಿಯೇ ಮರಣ

Masco: ಜೈಲಿನಲ್ಲಿರುವ ರಷ್ಯಾದ (Russia) ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ (Alexei Navalny) ಅವರು ಸಾವನ್ನಪ್ಪಿದ್ದು, ಯಮಲೋ-ನೆನೆಟ್ಸ್ (Yamalo-Nenets) ಪ್ರದೇಶದ ಜೈಲು ಅಧಿಕಾರಿಗಳು ತಿಳಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇವರು ವಾಕ್ ಮಾಡಿದ ನಂತರ ಕುಸಿದುಬಿದ್ದು, ತಕ್ಷಣ ಪ್ರಜ್ಞೆ ಕಳೆದುಕೊಂಡರು. ಕೂಡಲೇ ವೈದ್ಯಕೀಯ ಸಿಬ್ಬಂದಿ ತಕ್ಷಣ ಆಗಮಿಸಿದರು. ಆಂಬ್ಯುಲೆನ್ಸ್ (Ambulance) ತಂಡವನ್ನು ಕರೆಯಲಾಗಿದ್ದು, ಅವರ ಪ್ರಾಣ ಉಳಿಸಲು ಪ್ರಯತ್ನಿಸಲಾಯಿತು ಎಂದು ಅರೆವೈದ್ಯರು ಅಪರಾಧಿಯ ಸಾವನ್ನು ದೃಢಪಡಿಸಿದ್ದಾರೆ. ಸಾವಿನ ಕಾರಣಗಳು ಏನು ಎಂಬುದರ ಬಗ್ಗೆ ಖಚಿತ ವರದಿಗಾಗಿ ಕಾಯಲಾಗುತ್ತಿದೆ ಎಂದು ಜೈಲಿನ ಹೇಳಿಕೆ ತಿಳಿಸಿದೆ.

ಅಲೆಕ್ಸಿ ನವಲ್ನಿಯವರ ಸಾವಿನ ಬಗ್ಗೆ ಅವರ ತಂಡದಿಂದ ಯಾವುದೇ ದೃಢೀಕರಣವಿಲ್ಲ ಎಂದು ಅವರ ಸಹಾಯಕರಾದ ಕಿರಾ ಯರ್ಮಿಶ್ (Kira Yarvish), “ಅಲೆಕ್ಸಿಯ ವಕೀಲರು ಖಾರ್ಪ್‌ಗೆ ಹೋಗುತ್ತಿದ್ದಾರೆ. ನಮಗೆ ಯಾವುದೇ ಮಾಹಿತಿ ದೊರೆತ ತಕ್ಷಣ ನಾವು ತಿಳಿಸುತ್ತೇವೆ ಎಂದಿದ್ದಾರೆ, ಏತನ್ಮಧ್ಯೆ, ಅಲೆಕ್ಸಿ ನವಲ್ನಿ ಅವರ ಪತ್ರಿಕಾ ಕಾರ್ಯದರ್ಶಿ ಅವರ ಸಾವಿನ ಬಗ್ಗೆ ಯಾವುದೇ ದೃಢೀಕರಣವಿಲ್ಲ ಎಂದು ಹೇಳಿದರು.

ಬೇರೆ ಜೈಲಿಗೆ ಸ್ಥಳಾಂತರಿಸಿದ್ದೇಕೆ?
ಡಿಸೆಂಬರ್‌ನಲ್ಲಿ (December) ಮಧ್ಯ ರಷ್ಯಾದ ವ್ಲಾಡಿಮಿರ್ ಪ್ರದೇಶದ ಜೈಲಿನಿಂದ ಮಾಸ್ಕೋದಿಂದ ಈಶಾನ್ಯಕ್ಕೆ 1,900 ಕಿಲೋಮೀಟರ್ ದೂರದಲ್ಲಿರುವ ಖಾರ್ಪ್ ಪಟ್ಟಣದ ಪೋಲಾರ್ ವುಲ್ಫ್” ಎಂಬ ಅಡ್ಡಹೆಸರಿರುವ “ವಿಶೇಷ ಆಡಳಿತ” ಪೆನಾಲ್ ಕಾಲನಿ- IK-3ಗೆ ಸ್ಥಳಾಂತರಿಸಲಾಯಿತು. ಅಲೆಕ್ಸಿ ನವಲ್ನಿ ಉಗ್ರವಾದದ ಆರೋಪದ ಮೇಲೆ 19 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಇದು ರಷ್ಯಾದಲ್ಲಿ ಅತ್ಯಂತ ಕಠಿಣವಾದ ಜೈಲು (Jail) ಎಂದು ಪರಿಗಣಿಸಲಾಗಿದೆ, ಅಲ್ಲಿ ಹೆಚ್ಚಿನ ಬಂಧಿತರು ಗಂಭೀರ ಅಪರಾಧಗಳಿಗೆ ಶಿಕ್ಷೆಗೊಳಗಾದವರು.

Exit mobile version