ಸಚಿವ ಸಂಪುಟ ವಿಸ್ತರಣೆ: ಎಂ.ಪಿ. ರೇಣುಕಾಚಾರ್ಯ ಅಸಮಾಧಾನ

ಬೆಂಗಳೂರು, ಜ. 14: ‌ಸಂಪುಟ ವಿಸ್ತರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ, ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಾತಿ ರಾಜಕೀಯ ಮಾಡಿ ನನಗೆ ಅಭ್ಯಾಸವಿಲ್ಲ. ಸೋತವರಿಗೆ ಸಚಿವ ಸ್ಥಾನ ನೀಡಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಸರ್ವ ಜನಾಂಗದ ಮತದಾರರಿಗೆ ಮಾಡಿದ ಅಪಮಾನ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಯೆ ನನ್ನ ಧ್ಯೇಯ.

ಕರ್ನಾಟಕ ಸರ್ಕಾರ ಕೇವಲ 2 ಜಿಲ್ಲೆಗೆ ಮಾತ್ರ ಸೀಮಿತವಾಗಬಾರದು. ನಾಯಕತ್ವ ಮತ್ತು ಸಂಘಟನೆ ನನಗೆ ಎಲ್ಲಾ ಸ್ಥಾನಮಾನ ನೀಡಿದೆ. ಸೋತವರಿಗೆ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಪಕ್ಷದ ವರಿಷ್ಠರ ಜೊತೆ ಮತ್ತೆ ಕೂಲಂಕುಷವಾಗಿ ಚರ್ಚಿಸುತ್ತೇನೆ ಎಂದಿದ್ದಾರೆ.

ಸಚಿವ ಸ್ಥಾನ ಸಿಗಲಿಲ್ಲವೆಂದು ಸಹಜವಾಗಿ ಅಘಾತವಾಗಿದೆ. ನಾಯಕತ್ವ ಮತ್ತು ಪಕ್ಷದ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದಿನಿ ಮಂದೆಯು ಇಡುತ್ತೇನೆ. ನನ್ನ ಹೋರಾಟ ಪಕ್ಷ ಮತ್ತು ನಾಯಕತ್ವದ ವಿರುದ್ಧವಲ್ಲ. ಈಗ ಸರ್ಕಾರದಲ್ಲಾಗಿರುವ ತಪ್ಪು ವ್ಯವಸ್ಥೆ ವಿರುದ್ಧ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗೆದ್ದ ಶಾಸಕರಿಗೆ ಮತದಾನ ಮಾಡಿದ ಮತದಾರರಿಗೆ ಮಾಡಿದ ಅವಮಾನವಿದು ಎಂದಿದ್ದಾರೆ.

Exit mobile version