Visit Channel

ಸದ್ದಾಗಿದೆ `ಗುಡ್ ಗುಡ್ಡರ್ ಗುಡ್ಡೆಸ್ಟ್’ ಟೀಸರ್

WhatsApp Image 2020-12-24 at 4.15.13 PM

ಹೊಸ ಚಿತ್ರವೊಂದು ತಯಾರಾಗುತ್ತಿದೆ. ಚಿತ್ರದ ಹೆಸರು ಗುಡ್ ಗುಡ್ಡರ್ ಗುಡ್ಡೆಸ್ಟ್. ಚಿತ್ರದ ನಿರ್ದೇಶಕ ಯುವಧೀರ ಕೂಡ ಹೊಸಬರು. ಆದರೆ ಕಳೆದ ಹದಿನೈದು ವರ್ಷಗಳಿಂದ ಸಿನಿಮಾ, ಕಿರುತೆರೆಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿರುವ ವ್ಯಕ್ತಿ ಇವರು. ಅಂದಹಾಗೆ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಲೆಂದೇ ಒಂದು ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ಮೂಲಕ ಶೀರ್ಷಿಕೆ ಅನಾವರಣಗೊಳಿಸುತ್ತಿರುವುದು ಕನ್ನಡದ ಮಟ್ಟಿಗೆ ಇದೇ ಪ್ರಥಮ ಎನ್ನುವುದು ನಿರ್ದೇಶಕರ ಮಾತು.

ಟೀಸರ್ ನೋಡಿದವರೆಲ್ಲ ಮೇಕಿಂಗ್ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಅಂದಹಾಗೆ ಈ ಟೀಸರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರಾದ ತೇಜಸ್ವಿ ಸೂರ್ಯ ಬಿಡುಗಡೆಗೊಳಿಸಿದ್ದಾರೆ. ಶೀರ್ಷಿಕೆಯ ವಿಚಾರ ಬಂದರೆ ಆಂಗ್ಲ ವ್ಯಾಕರಣದಲ್ಲಿ ಕಂಪೇರೀಶನ್ ಡಿಗ್ರಿಯ ಪ್ರಕಾರ ನೋಡುವುದಾದರೆ ಗುಡ್ ಗುಡ್ಡರ್ ಗುಡ್ಡೆಸ್ಟ್‌ ಎನ್ನುವುದು ತಪ್ಪಾಗುತ್ತದೆ. ಗುಡ್, ಬೆಟರ್, ಬೆಸ್ಟ್ ಎಂದು ಆಗಬೇಕಾಗಿರುತ್ತದೆ. ಆದರೆ ಕತೆಯಲ್ಲಿ ಬೇಕೆಂದೇ ಈ ರೀತಿ ಬಳಸಲಾಗಿದೆ ಎನ್ನುವುದು ನಿರ್ದೇಶಕರ ಸಮರ್ಥನೆ. ಸಾಮಾನ್ಯವಾಗಿ ಒಂದು ಸಿನಿಮಾ ಯಾವುದಾದರೂ ಒಂದು ಅಥವಾ ಎರಡು `ಜನರ್‌’ಗೆ ಮಾತ್ರ ಮೀಸಲಾಗಿರುತ್ತದೆ. ಆದರೆ ನಮ್ಮ ಸಿನಿಮಾದಲ್ಲಿ ಡಾರ್ಕ್ ಹ್ಯೂಮರ್, ಸೆಟೈರ್ ಕಾಮಿಡಿ, ರೊಮಾನ್ಸ್, ಥ್ರಿಲ್ಲರ್, ಡ್ರಾಮ, ಆಕ್ಷನ್, ಸ್ಲ್ಯಾಪ್ಸ್‌ಸ್ಟಿಕ್, ನಿಯೊ ನಾಯ್ರ್ ಹೀಗೆ ಹಲವು ಜನರ್‌ಗಳಲ್ಲಿ ಸಂಚರಿಸುತ್ತದೆ ಎನ್ನುವುದು ಕೂಡ ಚಿತ್ರದ ವಿಶೇಷತೆ ಎಂದು ಯುವಧೀರ ನಿರೀಕ್ಷೆಮೂಡಿಸುತ್ತಾರೆ.

ಚಿತ್ರಕ್ಕೆ ನಾಯಕ ಮತ್ತು ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಆದರೆ ತಂತ್ರಜ್ಞರ ವಿಭಾಗ ತಯಾರಾಗಿದ್ದು, ಶಶಾಮಕ್ ಶೇಷಗಿರಿ ಸಂಗೀತ, ಮರಿಸ್ವಾಮಿ ಸಂಕಲನ, ಕೆಜಿಎಫ್ ಕ್ಯಾಮೆರಾ ಮನ್ ಭುವನ್ ಗೌಡರ ಸಹಾಯಕ ಕುಮಾರ್ ಈ ಚಿತ್ರಕ್ಕೆ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಚಿತ್ರವನ್ನು ಬಿಲ್ಡರ್ ಹಾಗೂ ಬಿಜೆಪಿ ಪಕ್ಷದ ಮುಖಂಡರಾದ ಸುರೇಶ್ ಬಿಯವರು ತಮ್ಮ `ಶ್ರೀನಿಧಿ ಪಿಕ್ಚರ್ಸ್’ ಬ್ಯಾನರ್‌ನ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.