ಸಿನಿಪ್ರೇಕ್ಷಕರನ್ನು ಮನರಂಜಿಸಲು `ಗಾರ್ಗಿ’ಯಾಗಿ ತೆರೆಯ ಮೇಲೆ ಬಂದ ನಟಿ ಸಾಯಿಪಲ್ಲವಿ

Gargi

ನಟಿ(Actress) ಸಾಯಿಪಲ್ಲವಿ(Sai Pallavi) ಸಿನಿಮಾ ರಿಲೀಸ್ ಆಗುತ್ತಿದೆ ಎಂದಾಗ ಅಭಿಮಾನಿಗಳಲ್ಲಿ ಸಹಜವಾಗಿ ಕುತೂಹಲ ಇದ್ದೆ ಇರುತ್ತದೆ.

ಸಿನಿಮಾಗಳ ಆಯ್ಕೆ ವಿಚಾರಗಳಲ್ಲಿ ಬಹಳ ಚ್ಯೂಸಿಯಾಗಿರುವ ನಟಿ ಸಾಯಿ ಪಲ್ಲವಿ, ಸಿನಿಮಾ ಕಥೆಯಲ್ಲಿ ತನ್ನ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದರೆ ಮಾತ್ರ ಆ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇದೀಗ ನಟಿ ಸಾಯಿಪಲ್ಲವಿ ಅಂತದ್ದೇ ಒಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಹಾಜರಾಗಿದ್ದಾರೆ.

ಹೌದು, ತಮ್ಮ ‘ಗಾರ್ಗಿ’(Gargi) ಸಿನಿಮಾ ಮೂಲಕ ಸಾಯಿಪಲ್ಲವಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲಲು ಇಂದು ತೆರೆಯ ಮೇಲೆ ಹಾಜರಾಗಿದ್ದಾರೆ. ‘ಗಾರ್ಗಿ’ ಸಿನಿಮಾ ಮೂರು ಭಾಷೆಯಲ್ಲಿ ಬಿಡುಗಡೆಯಾಗಿದೆ.

ತಮಿಳು ಮೂಲ ಭಾಷೆಯಾಗಿದ್ದರೂ, ತೆಲುಗು ಹಾಗೂ ಕನ್ನಡದಲ್ಲೂ ಈ ಸಿನಿಮಾ ಬಿಡುಗಡೆಯಾಗಲಿದೆ. ಸ್ವತಃ ಸಾಯಿ ಪಲ್ಲವಿ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಡಬ್ ಮಾಡಿದ್ದಾರೆ. ಗಾರ್ಗಿ ಸಿನಿಮಾ ಸಾಯಿಪಲ್ಲವಿಯ ಬಹುನಿರೀಕ್ಷಿತ ಸಿನಿಮಾವಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಹೆಚ್ಚು ಭರವಸೆಯನ್ನು ಈ ಚಿತ್ರದ ಮೇಲೆ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಸಿನಿಮಾದಲ್ಲಿ ಸಾಯಿಪಲ್ಲವಿ ಅವರು ಗಾರ್ಗಿ ಹೆಸರಿನ ಶಿಕ್ಷಕಿಯ ಪಾತ್ರದಲ್ಲಿ ನಟಿಸಿದ್ದಾರೆ, ಗಾರ್ಗಿಯ ತಂದೆ ಸೆಕ್ಯುರಿಟಿ ಗಾರ್ಡ್ ಆಗಿರುತ್ತಾರೆ. ಗಾರ್ಗಿ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ.

ಅದು ಏಕೆ? ತಂದೆಯನ್ನು ಗಾರ್ಗಿ ಮರಳಿ ಹೇಗೆ ಮನೆಗೆ ಕರೆತರುತ್ತಾಳೆ ಎಂಬುದು ಸಿನಿಮಾದ ಕಥೆಯ ಎಳೆಯಾಗಿದೆ. ಇನ್ನು, 2017 ರಲ್ಲಿ ಬಿಡುಗಡೆಯಾದಂತಹ ರಿಚಿ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಗೌತಮ್ ರಾಮಚಂದ್ರನ್ ಅವರು ‘ಗಾರ್ಗಿ’ ಚಿತ್ರದ ಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ.

ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್ ಎಸ್ ಶಿವಾಜಿ, ಲಿವಿಂಗ್ ಸ್ಟನ್ ಸೇರಿದಂತೆ ಅದ್ಭುತ ಕಲಾವಿದರ ಬಳಗ ಈ ಚಿತ್ರದಲ್ಲಿದೆ. ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮೀ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಗೋಗಿಂದ್ ವಸಂತ್ ಸಂಗೀತ ನೀಡಿದ್ದಾರೆ.
https://vijayatimes.com/siddaramaiah-allegation-over-state-bjp/ 
ಸ್ರೈಯಂತಿ ಹಾಗೂ ಪ್ರೇಮ್ ಅಕ್ಕಟ್ಟು ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇದೇ ವರ್ಷದ ಮೇ ತಿಂಗಳಲ್ಲಿ ಸಾಯಿ ಪಲ್ಲವಿ ಅವರ 30ನೇ ಹುಟ್ಟುಹಬ್ಬದಂದು ‘ಗಾರ್ಗಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ಚಿತ್ರತಂಡ ಅಭಿಮಾನಿಗಳಲ್ಲಿ ಬಹಳ ಕುತೂಹಲವನ್ನು ಮೂಡಿಸಿತ್ತು.
ಇನ್ನು ಕನ್ನಡದಲ್ಲಿ ಈ ಸಿನಿಮಾವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ(Rakshit Shetty) ಪರಂವಾ ಸ್ಟೋಡಿಯೋಸ್(Parmvah Studios) ಬಿಡುಗಡೆ ಮಾಡಿದೆ.
Exit mobile version