ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸಂಬಿತ್ ಪಾತ್ರ ಆಯ್ಕೆ

ನವದೆಹಲಿ ಡಿ 2 : ಭಾರತೀಯ ಜನತಾ ಪಕ್ಷದ (BJP) ವಕ್ತಾರ ಸಂಬಿತ್ ಪಾತ್ರ (Sambit Patra)  ಅವರನ್ನು ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸಂಪುಟದ ನೇಮಕಾತಿ ಸಮಿತಿ ಬುಧವಾರ ನೇಮಕ ಮಾಡಿದೆ. ಅಧಿಕೃತ ಆದೇಶದ ಪ್ರಕಾರ, ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ (SCC) ಹುದ್ದೆಯನ್ನು ಪ್ರತ್ಯೇಕಗೊಳಿಸಿ ಐಟಿಡಿಸಿ ಅಧ್ಯಕ್ಷರು ಮತ್ತು ಐಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂದು ಮಾಡುವ ಪ್ರವಾಸೋದ್ಯಮ ಸಚಿವಾಲಯದ ಪ್ರಸ್ತಾವನೆಗೆ ಕ್ಯಾಬಿನೆಟ್ ನೇಮಕಾತಿ ಸಮಿತಿ ಒಪ್ಪಿಗೆ ಸೂಚಿಸಿದೆ. 
ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರೆ, ಐಎಎಸ್ ಅಧಿಕಾರಿ ಜಿಕೆವಿ ರಾವ್ ವ್ಯವಸ್ಥಾಪಕ ನಿರ್ದೇಶಕ (MD) ಸ್ಥಾನದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಪಾರ್ಟ್ ಟೈಮ್  ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಐಟಿಡಿಸಿ ಅಧ್ಯಕ್ಷರಾಗಿ ಡಾ. ಸಂಬಿತ್ ಪಾತ್ರಾ ಅವರ ನೇಮಕವು ಅಧಿಕಾರವಹಿಸಿಕೊಂಡ ಮೂರು ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ, ಇರಲಿದೆ. 

Exit mobile version