Visit Channel

ಸ್ಯಾಂಡಲ್ ವುಡ್ ನಲ್ಲಿ ಆಟ ಶುರುಮಾಡಲು ರೆಡಿಯಾಗಿದೆ ವರ್ಣಪಟಲ ಸಿನಿಮಾ

WhatsApp Image 2020-12-11 at 6.14.25 PM

ವರ್ಣಪಟಲ… ಸಾಯಿ ಗಣೇಶ್ ಪೊಡಕ್ಷನ್ ಬ್ಯಾನರ್ ಅಡಿ ರೆಡಿಯಾಗಿರೋ ಸ್ಯಾಂಡಲ್ ವುಡ್ ನನಿರೀಕ್ಷೆಯ ಚಿತ್ರ ..ನ್ಯಾಷನಲ್ ಅವಾರ್ಡ್ ವಿನ್ನರ್ ಚೇತನ್ ಮುಂಡಾಡಿ ಆಕ್ಷನ್ ಕಟ್ ಹೇಳಿರೋ ಸಿನಿಮಾವಿದು.. ಕವಿತಾ ಸಂತೋಷ್ ಡಾ. ಸರಸ್ವತಿ ಹೊಸದುರ್ಗಾ ನಿಮರ್ಮಾಣ ರಿಯಲ್ ಸ್ಟೋರಿಯಿದು ..ವರ್ಣಪಟಲ.. ಆನ್ ಅನ್ ಟೋಲ್ಡ್ ಸ್ಟೋರಿ .. ರಿಯಲ್ ಸ್ಟೋರಿಯನ್ನು ಇಟಕ್ಒಂಡು ರೆಡಿಯಾಗಿರೋ ವರ್ಣಪಟಲ ಚಿತ್ರದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು ಚಿತ್ರದ ಮೇಲೆ ಇದೀಗ ನಿರೀಕ್ಷೆ ಇನ್ನಷ್ಟು ಹಿಮ್ಮಡಿಯಾಗಿದೆ .. ಎಲ್ಲರ ಅಮ್ಮಂದಿರ ತರ ನಾನು ಅಮ್ಮ ಅಲ್ಲ.. ಎಲ್ಲರ ಮಕ್ಕಳಂತೆ ನನ್ನ ಮಗಳಲ್ಲ .. ಟ್ರೈಲರ್ ನಲ್ಲಿ ಹೊರಬಿದ್ದಿರೋ ಈ ಡೈಲಾಗ್ ಇದೀಗ ಸಿನಿಮಾದ ಬಗ್ಗೆ ಕುತೂಹಲ ಹಾಗೂ ಪ್ರೇಕ್ಷಕರನ್ನು ಹಿಡಿದು ಟ್ರೈಲರ್ ನೋಡುವಂತೆ ಮಾಡಿದೆ ..ಅಂದಹಾಗೆ ನಿತ್ಯಾಅನ್ನೋ ಪಾತ್ರ ಚಿತ್ರದ ಮೈನ್ ಹೈಲೆಟ್ .. ಈಕೆ ತಾನು ಪ್ರೀತಿಸಿದ ಹುಡುಗ ಮೈಕಲ್ ನನ್ನು ಮದುವೆಯಗ್ತಾಳೆ . ಮದುವೆಯ ಬಳಿಕ ಹೆಣ್ಣು ಮಗುವಿಗೆ ನಿತ್ಯ ತಾಯಿ ಆಗ್ತಾಳೆ .. ಆ ಮಗುವೇ ಮೈನಾ.

ಆದ್ರೆ ಎಲ್ಲಾ ಸರಿಯಿದ್ದ ನಿತ್ಯಾಳ ಬದುಕಲ್ಲಿ ಮೈನಾ ಅನ್ನೋ ಮಗಳಿಂದ ಜೀವನ ವೇ ಬದಲಾಗಿ ಹೋಗುತ್ತೆ.. ಮೈನಾ ಆಟಿಸಂ ಅನ್ನೋ ಡಿಸ ಆರ್ಡರ್ ನಿಂದ ಬಳಲುತ್ತಿರುತ್ತಾಳೆ ಇದರಿಂದ ನಿತ್ಯಾ ಸಾಕಷ್ಟು ತೊಂದರೆ ಅನುಭವಿಸುತ್ತಾಳೆ .ಅದು ಯಾವ ರೀತಿ ಅನ್ನೋದಕ್ಕೆ ಚಿತ್ರತೆರೆಮೇಲೆ ಬರೋವರೆಗು ಕಾಯಲೇಬೇಕು . ಚಿತ್ರದ ಎರಡು ಲಿರಿಕಲ್ ಹಾಡು ಬಿಡುಗಡೆಯಾಗಿದ್ದು ಹಾಡುಪ್ರೀಯರನ್ನು ಮೋಡಿ ಮಾಡ್ತಿದೆ ಸೋಲನನ್ನೆ ಹೊತ್ತು ಹೆತ್ತವಳು ನಾನಲ್ಲ ಹಾಡು ಅದೆಷ್ಟೋ ತಾಯಂದಿರಿಗೆ ಇಷ್ಟವಾಗಿದ್ದು ಈ ಹಾಡನ್ನು ಅರ್ಚನಾ ಉಡುಪ ಹಾಡಿದ್ದು ಕಾರ್ತಿಕ್ ಸರಗೂರ್ ಸಾಹಿತ್ಯದ ಟಚ್ ಕೊಟ್ಟಿದ್ದಾರೆ .. ಈ ಹಾಡಿಗೆ ಹರ್ಷವರ್ದನ್ ರಾಜ್ ಮ್ಯೂಸಿಕ್ ಕಂಪೊಸ್ ಮಾಡಿದ್ದಾರೆ .ಅಂದರಂತೆ ಮಕ್ಕಳಿಗಾಗಿ ಮಕ್ಕಳೇ ಹಾಡಿರೋ ಮೈನಾ ಹಕ್ಕಿ ಹಾಡಂತು ಮನಸೂರೆಗೊಳಿಸುತ್ತಿದ್ದು ಬೇಬಿ ಶ್ರೀಯಾ ಹಾಡಿಗೆ ಕಂಠ ನೀಡಿದ್ದಾರೆ.

ಕಾರ್ತಿಕ್ ಸರಗೂರವರ ಸಾಹಿತ್ಯ ಈ ಹಾಡಿಗೆ ಇದ್ದು ಹರ್ಷವರ್ಧನ್ ರಾಜ್ ಮ್ಯೂಸಿಕ್ ಕಂಪೊಸ್ ಮಾಡಿದ್ದಾರೆ .ಈಗಾಗಲೇ ಮದಿಪು ಚಿತ್ರವನ್ನು ನಿರ್ಧೇಶನ ಮಾಡಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಗಿಟ್ಟಿಸಿರೋ ಚೇತನ್ ಮುಂಡಾಡಿ ವರ್ಣಪಟಲ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಕಥೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಜನರ ಮುಂದೆ ತೆರೆದಿಡಲು ರೆಡಿಯಾಗಿದ್ದಾರೆ .ಚಿತ್ರದಲ್ಲಿ ಜ್ಯೋತಿ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದು ನಾಯಕನ ಪಾತ್ರದಲ್ಲಿ ಅನೂಪ್ ಸಾಗರ್ ಮಿಂಚಿದ್ದಾರೆ .ಇನ್ನುಳಿದಂತೆ ಇಂದ್ರಾಣಿ ನಾಯರ್ , ಶ್ರೀಕಾಂತ್ ಹೆಬ್ಲಿಕರ್ , ಸುಜಾತ, ಅರವಿಂದ್ ರಾವ್ , ಗುರು ಹೆಗ್ಡೆ, ಚೇತನ್ ರೈ ಮಾಣಿ , ಉಮಾ ಹಾಗೂ ಮಕ್ಕಳ ಪಾತ್ರದಲ್ಲಿ ಬೇಬಿ ಅನ್ಸಿಕಾ, ಬೇಬಿ ಧನಿಕಾ, ಬೇಬಿ ಹನ್ಸಿಕಾ ಕಾಣಿಸಕೊಂಡಿದ್ದಾರೆ ..ಒಟ್ಟಾರೆ ದ ಕನ್ನಡ ಬೆಂಗಳೂರು ಮಡಿಕೇರಿ ಸುತ್ತ ಮತ್ತ ವರ್ಣಪಟಲ ಚಿತ್ರದ ಚಿತ್ರೀಕರಣ ಮುಗಿದಿದ್ದು ಫೆಬ್ರವ ರಿಯಲ್ಲಿ ಚಿತ್ರ ಗತೆರೆಮೇಲೆ ಬರಲು ರೆಡಿಯಾಗಿದೆ.

ಈಗಾಗಲೇ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿರೋ ಚೇತನ್ ಮುಂಡಾಡಿ ವರ್ಣಪಟಲ ಚಿತ್ರದ ಮೂಲಕ ಮತ್ತೊಮ್ಮೆ ಪ್ರಶಸ್ತಿಯನ್ನು ಬಾಚಿಕೊಳ್ಳೋದರಲ್ಲಿ ನೋ ಡೌಟ್.

  • ದೀಪಿಕಾ

Latest News

Lorry driver
ಪ್ರಮುಖ ಸುದ್ದಿ

ಕುಡಿದು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ ಪೊಲೀಸರು ; ಕೇಸ್ ದಾಖಲಿಸಿಕೊಳ್ಳದೆ ಕಾನೂನು ಉಲ್ಲಂಘನೆ!

ಕುಡಿದ ಆಮಲಿನಲ್ಲಿದ್ದ ಮೂವರು ಪೊಲೀಸರು, “ನೀನು ಯಾವ ಸೀಮೆ ಡ್ರೈವರ್ ___*****” ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಚಾಲಕನ ಕೈ, ಕಾಲು ಸೇರಿದಂತೆ ಗುಪ್ತಾಂಗದ ಜಾಗಕ್ಕೆ ಒದ್ದು, ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.