download app

FOLLOW US ON >

Monday, August 8, 2022
Breaking News
ಸಿದ್ದರಾಮಯ್ಯ-ಖರ್ಗೆಗೆ ಅಂಬೇಡ್ಕರ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ : ನಟ ಚೇತನ್ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ನಾಯಕರೆಂದರೆ ನಕಲಿ ಗಾಂಧಿ ಕುಟುಂಬದ ಸದಸ್ಯರು ಮಾತ್ರ  : ಬಿಜೆಪಿನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್
English English Kannada Kannada

ಸರಳ ಈದ್‌ ಮಿಲಾದ್‌: ಗಣ್ಯರಿಂದ ಶುಭಾಶಯ

ಬೆಂಗಳೂರು: ಇಂದು ಮುಸ್ಲೀಮರಿಗೆಈದ್‌ ಮಿಲಾದ್‌ ಹಬ್ಬದ ಸಂಭ್ರಮ. ಪ್ರವಾದಿ ಮಹಮ್ಮದ್‌ ಪೈಂಗಂಬರ್‌ ಅವರ ಜನ್ಮದಿನವನ್ನು ಮುಸ್ಲೀಮರು ಈದ್‌ ಮಿಲಾದ್‌ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಕೊರೊನಾ ಆರ್ಭಟ ಯಾವುದೇ ಹಬ್ಬಗಳನ್ನು ಆಚರಿಸಲು ಅಡ್ಡಿ ತಂದಿದೆ. ಅದೇ ರೀತಿ ಈದ್‌ ಮಿಲಾದ್‌ ಹಬ್ಬಗಳನ್ನು ಹಬ್ಬವನ್ನೂ ಸರಳವಾಗಿ ಆಚರಿಸುವಂತೆ ಆದೇಶಿಸಲಾಗಿದೆ. ಆದ್ದರಿಂದ ಎಂದಿನಂತೆ ಸಹಜವಾಗಿ ಮಸೀದಿಗಳಲ್ಲಿ ಸರಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ರಾಜ್ಯ ವಕ್ಫ್ ಇಲಾಖೆ ಈಗಾಗಲೇ ಎಲ್ಲಾ ಮಸೀದಿಗಳಿಗೆ ಈ ಅಧಿ ಸೂಚನೆಯನ್ನು ಹೊರಡಿಸಿದ್ದು, ಯಾವುದೇ ಸಭೆ, ಸಮಾರಂಭ ಹಾಗೂ ಮೆರವಣಿಗೆಗಳನ್ನು ನಡೆಸದಂತೆ ತಿಳಿಸಿದೆ. ಹಾಗೂ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡುವಂತೆ ತಿಳಿಸಲಾಗಿದೆ ಎಂಬುದು ತಿಳಿದು ಬಂದಿದೆ.


ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ ಗಣ್ಯರು:

ದೇಶದ ಮುಸ್ಲಿಂ ಜನತೆಗೆ ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಟ್ವೀಟ್‌ ಮೂಲಕ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ, ಈ ಹಬ್ಬದ ದಿನದಂದು ಸಹೋರತ್ವ ಮತ್ತು ಸಹಾನುಭೂತಿಯನ್ನು ಹೆಚ್ಚಿಸಲಿ. ಅದೇ ರೀತಿ ಎಲ್ಲರೂ ಸಂತೋಷ ಹಾಗೂ ಆರೋಗ್ಯವಾಗಿರಿ ಎಂದು ಆಶಿಸಿದರು.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ಈದ್ ಮಿಲಾದ್ ಹಬ್ಬದ ಶುಭಾಶಯಗಳು. ಪ್ರವಾದಿ ಮೊಹಮ್ಮದ್ ಅವರ ಸಂದೇಶಗಳು ಸಮಾಜದಲ್ಲಿ ಸೋದರತ್ವ, ಸೌಹಾರ್ದತೆಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿ ಈದ್ ಮಿಲಾದ್ ಹಬ್ಬಕ್ಕೆ ಸಿಎಂ ಬಿಎಸ್‌ ಯಡಿಯೂರಪ್ಪ ಶುಭಕೋರಿದ್ದಾರೆ.

ಪ್ರವಾದಿ ಮಹಮ್ಮದ್ ಪೈಗಂಬರರ ಬೋಧನೆ ಮತ್ತು ಸಾಧನೆ ಸಮಾನತೆ-ಸೌಹಾರ್ದತೆಯ ಸಮಾಜವನ್ನು ಕಟ್ಟುವ ನಮ್ಮ ಕೈಗಳಿಗೆ ಇನ್ನಷ್ಟು ಬಲ ತಂದು ಕೊಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಭಕೋರಿದ್ದಾರೆ.

ಮುಸ್ಲಿಂ ಬಾಂದವರಿಗೆ ಶುಭಕೋರಿದ ಮಾಜಿ ಮುಖ್ಯಂತ್ರಿ ಕುಮಾರಸ್ವಾಮಿ, ಮಾನವ ಕುಲಕ್ಕೆ ಶಾಂತಿ ಸಂದೇಶ ಸಾರಿದ ಮಹಮ್ಮದ್‌ ಪೈಗಂಬರರಿಗೆ ನಮನಗಳನ್ನು ಸಲ್ಲಿಸುತ್ತಾ, ನಾಡಿನೆಲ್ಲೆಡೆ ಶಾಂತಿ, ಸೌಹಾರ್ದತೆ ನೆಲೆಸಲಿ ಎಂದು ಟ್ವೀಟ್‌ ಮಾಡಿದ್ದಾರೆ.

ಶುಭ ಕೋರಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಸಮಸ್ತ ಮುಸಲ್ಮಾನ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು. ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನದಂದು ಅವರು ಸಾರಿದ ಸಂದೇಶಗಳಾದ ಶಾಂತಿ, ಸೌಹಾರ್ದತೆ, ಭ್ರಾತೃತ್ವವನ್ನು ಎತ್ತಿಹಿಡಿದು ನಾಡು ಕಟ್ಟೋಣ  ಎಂದು ಟ್ವೀಟ್‌ ಮಾಡಿದ್ದಾರೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article