ಚುನಾವಣಾ ಪ್ರಚಾರದ ಭರದಲ್ಲಿ ಶಾಲೆಗಳಿಗೆ ಬಿಸಿಯೂಟ ನೀಡುವ ಬಗ್ಗೆ ಗಮನವಿಲ್ಲವೆ?

ಬೆಂಗಳೂರು ಅ 21 : ಇಗಾಗಲೇ 1 ರಿಂದ 5ನೇ ತರಗತಿವರೆಗೂ ಶಾಲೆ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು ಈ ಹಿನ್ನಲೆಯಲ್ಲಿ  ಶಾಲೆಗಳು (School) ಮುಂಚಿನಂತೆಯೆ ಪೂರ್ಣಾವಧಿಯಲ್ಲಿ ಕಾರ್ಯ ನಿರ್ವಹಿಸಲಿದೆ.  ಕೊರೊನಾ ಬಳಿಕ ಸ್ಥಗಿತಗೊಂಡಿದ್ದ ಶಾಲಾ ಮಕ್ಕಳ  ಅಕ್ಟೋಬರ್ 21ರಿಂದ ಪುನಾರಂಭಿಸಲಾಗುವುದು ಎಂದು ರಾಜ್ಯ ಸರಕಾರ ಹೇಳಿದರೂ ಯಾವುದೇ ಸಿದ್ಧತೆ ಇಲ್ಲದ ಕಾರಣ ಬಹಳಷ್ಟು ಶಾಲೆಗಳಲ್ಲಿ ಗುರುವಾರದಿಂದಲೇ ಬಿಸಿಯೂಟ ಆರಂಭವಾಗುವ ಸಾಧ್ಯತೆ ಬಹಳ ಕಡಿಮೆ

10 ದಿನಗಳ ದಸರಾ ರಜೆ ಬಳಿಕ 6 ರಿಂದ 10ನೇ ತರಗತಿವರೆಗಿನ ರಾಜ್ಯದೆಲ್ಲೆಡೆಯ ಶಾಲೆಗಳು ಗುರುವಾರದಿಂದ ಪುನಾರಂಭಗೊಳ್ಳುತ್ತಿವೆ. ಸರಕಾರ ಮೊದಲ ದಿನದಿಂದಲೇ ಬಿಸಿಯೂಟ ನೀಡುವಂತೆ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದೆ. ಆದರೆ, ಯಾವುದೇ ಪದಾರ್ಥ ಇಲ್ಲದೆ ಮಕ್ಕಳಿಗೆ ಬಿಸಿಯೂಟ ಕೊಡುವುದಾದರೂ ಹೇಗೆ ಎಂಬ ಚಿಂತೆ ಶಿಕ್ಷಕರಿಗೆ ಎದುರಾಗಿದೆ.

 2020ನೇ ಫೆಬ್ರವರಿಯಲ್ಲಿ ಕೊರೊನಾ ಲಾಕ್‌ಡೌನ್‌ ಜಾರಿ ಬಳಿಕ ಬಿಸಿಯೂಟವನ್ನು ನಿಲ್ಲಿಸಲಾಗಿತ್ತು. ಶಾಲೆಗಳಲ್ಲಿ ಮಧ್ಯಾಹ್ನದ ಊಟ ನಿಲ್ಲಿಸಿದರೂ ಮಕ್ಕಳಿಗೆ ಅಕ್ಕಿ ಮತ್ತು ಬೇಳೆಯನ್ನು ವಿತರಣೆ ಮಾಡಲಾಗಿದೆ. ಹೀಗಾಗಿ ಶಾಲೆಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಸೇರಿದಂತೆ ಯಾವುದೇ ಸಾಮಗ್ರಿ ಪೂರೈಕೆಯಾಗಿಲ್ಲ. ಬಹಳಷ್ಟು ಶಾಲೆಗಳಲ್ಲಿ ಅಡುಗೆ ಅನಿಲ ಸಹ ಖಾಲಿಯಾಗಿದೆ. ಬಿಸಿಯೂಟ ನಿಲ್ಲಿಸಿ ಒಂದೂವರೆ ವರ್ಷ ಆಗಿರುವುದರಿಂದ ಶಾಲೆಗಳಲ್ಲಿ ಬಿಸಿಯೂಟದ ಯಾವುದೇ ಸಾಮಗ್ರಿ ದಾಸ್ತಾನು ಉಳಿದಿಲ್ಲ. ಉಳಿದಿದ್ದರೂ ಅವು ಮುಗ್ಗಲು ಹಿಡಿದಿರುತ್ತವೆ. ಹೀಗಾಗಿ ಯಾವುದೇ ಸಿದ್ಧತೆ ಇಲ್ಲದೆ ಬಿಸಿಯೂಟ ಕೊಡುವಂತೆ ಆದೇಶವಾಗಿರುವುದು ಮತ್ತು ಬಿಸಿಯೂಟ ನೌಕರರಿಗೆ ತಲೆನೋವಾಗಿ ಪರಿಣಮಿಸಿದೆ.

ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಆದಷ್ಡು ಬೇಗ ಶಾಲೆಗಳಲ್ಲಿ ಬಿಸಿಊಟ ನೀಡುವತ್ತ ಗಮನ ಹರಿಸಬೇಕಾಗಿದೆ.

Exit mobile version