ಹಿರಿಯ ನಟ ಅನುಪಮ್ ಶ್ಯಾಮ್ ಇನ್ನಿಲ್ಲ

ಮುಂಬೈ, ಆ. 09: ನಟ ಅನುಪಮ್‌ ಶ್ಯಾಂ (63) ಅವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಕಳೆದ ವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ ಎಂದು ಶ್ಯಾಂ ಅವರ ಸ್ನೇಹಿತ ನಟ ಯಶ್‌ಪಾಲ್‌ ಶರ್ಮ ತಿಳಿಸಿದ್ದಾರೆ.

ಅನುಪಮ್‌ ಶ್ಯಾಂ ಅವರು ಜನಪ್ರಿಯ ಟಿವಿ ಶೋ ʻಮನ್‌ ಕಿ ಅವಾಸ್‌ ಪ್ರತಿಗ್ಯಾʼ ನಡೆಸಿಕೊಡುತ್ತಿದ್ದರು. ʻಸ್ಲಂಡಾಗ್‌ ಮಿಲಿನಿಯರ್‌ʼ, ʻಬಂದಿತ್‌ ಕ್ವೀನ್‌ʼ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.

Exit mobile version