ಕಾಂಗ್ರೆಸ್ ಪಕ್ಷ ಸೇರಿದ ಖ್ಯಾತ ನಟಿ ಶಕೀಲಾ

ತಮಿಳುನಾಡು, ಮಾ. 27: ಶೀಘ್ರದಲ್ಲೇ ಆರಂಭವಾಗಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಬೆನ್ನಲ್ಲಿ ಖ್ಯಾತ ನಟಿ ಶಕೀಲಾ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಈ ಮೂಲಕ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ತಮಿಳುನಾಡು ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಅವರು ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಮಾನವ ಹಕ್ಕು ವಿಭಾಗದಲ್ಲೂ ಅವರು ಮುಖ್ಯ ಸ್ಥಾನ ವಹಿಸಲಿದ್ದಾರೆ.

ಜನಸೇವೆ ಮಾಡುವ ಉದ್ದೇಶದಿಂದ ರಾಜಕೀಯ ಸೇರುತ್ತಿದ್ದೇನೆ. ಅಧಿಕಾರವು ಜನರ ಸೇವೆಗಾಗಿ ಬಳಕೆಯಾಗಬೇಕು. ನನ್ನ ಈ ಯೋಚನೆಯು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮೂಲಕ ನನಸಾಗಲಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಶಕೀಲಾ ತಿಳಿಸಿದ್ದಾರೆ.

90ರ ದಶಕದಲ್ಲಿ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಶಕೀಲಾ ಜನಜನಿತ ನಟಿಯಾಗಿದ್ದರು. ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾದಲ್ಲೂ ಅವರು ನಟಿಸಿದ್ದರು. ಇತ್ತೀಚೆಗೆ ಕಿರುತೆರೆಯಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದರು. ಕುಕ್ ವಿತ್ ಕೋಮಲಿ ಎಂಬ ರಿಯಾಲಿಟಿ ಶೋ ಒಂದರಲ್ಲಿ ಶಕೀಲಾ ಕಾಣಿಸಿಕೊಂಡಿದ್ದರು.

Exit mobile version