ರಾಮಮಂದಿರ ಕಾರ್ಯಕ್ರಮದಿಂದ ಶಂಕರಾಚಾರ್ಯರ 4 ಪೀಠಗಳು ದೂರ ಉಳಿಯಲು ಕಾರಣವೇನು?

ಜನವರಿ 22ರಂದು ನಡೆಯಲಿರುವ ರಾಮ ಪ್ರಾಣ ಪ್ರತಿಷ್ಠಾಪನಾ (Rama Prana Pratishtapana) ಕಾರ್ಯಕ್ರಮದಿಂದ ಶಂಕರಾಚಾರ್ಯರ (Shankaracharya) 4 ಪೀಠಗಳು ದೂರ ಉಳಿದಿದ್ದು, ಈ ಬೆಳವಣಿಗೆ ಭಾರೀ ಕುತೂಹಲ ಕೆರಳಿಸಿದೆ. ದೇಶದ ಎರಡು ಪ್ರಮುಖ ಶಂಕರಾಚಾರ್ಯ ಸ್ಥಾಪಿತ ಮಠಾಧೀಶರು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ವಿಧಿ ವಿಧಾನವನ್ನೇ ಪ್ರಶ್ನಿಸಿದ್ದಾರೆ.

ವಿಶೇಷವಾಗಿ ದೇವಾಲಯದ ನಿರ್ಮಾಣವು ಅಪೂರ್ಣವಾಗಿರುವುದರಿಂದ ಈ ಸಮಾರಂಭವನ್ನು “ಶಾಸ್ತ್ರಗಳ ವಿರುದ್ಧ” (“Against the Scriptures”) ಅಥವಾ ಪವಿತ್ರ ಹಿಂದೂ ಧರ್ಮಗ್ರಂಥಗಳಿಗೆ (Sacred Hindu Scriptures) ವಿರುದ್ಧವಾಗಿ ನಡೆಸಲಾಗುತ್ತಿದೆ ಎಂದು ಅವರು ಮಂಗಳವಾರ ತಮ್ಮ ಅಧಿಕೃತ ಹ್ಯಾಂಡಲ್‌ನಲ್ಲಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಹೇಳಿದ್ದಾರೆ.

ಶಂಕರಾಚಾರ್ಯರು (Shankaracharya) ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಮಠಗಳನ್ನು ಸ್ಥಾಪಿಸಿದ್ದು, ಈ ಪೈಕಿ ಉತ್ತರಾಖಂಡ ರಾಜ್ಯದ ಬದರಿನಾಥದ ಜ್ಯೋತಿರ್ಮಠ ಹಾಗೂ ಪುರಿಯ ಗೋವರ್ಧನ ಪೀಠದ ಶ್ರೀಗಳು ರಾಮ ಮಂದಿರ (Shri Rama Mandir) ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರು ಹಾಜರಾಗೋದಾಗಿ ಹೇಳಿದ್ದಾರೆ.

ಇನ್ನು ಕರ್ನಾಟಕದ ಶೃಂಗೇರಿ (Sringeri in Karnataka) ಶಾರದಾ ಪೀಠ ಹಾಗೂ ದ್ವಾರಕಾ ಶಾರದಾ ಪೀಠದ ಶಂಕರಾಚಾರಯರು ಈ ವಿವಾದದಿಂದ ದೂರ ಸರಿದಿದ್ದಾರೆ. ತಮ್ಮ ಹೆಸರಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದು, ಬದರಿನಾಥ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹಾಗೂ ಪುರಿಯ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿಗಳು ಮಾತ್ರ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ವಿಧಿ ವಿಧಾನಗಳನ್ನು ಪ್ರಶ್ನಿಸಿದ್ದಾರೆ.

ಈ ಕಾರ್ಯಕ್ರಮದಿಂದ ದೂರ ಉಳಿದಿರುವುದಕ್ಕೆ ಸ್ಪಷ್ಟನೆ ನೀಡಿದ್ದು, ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮುನ್ನವೇ (Before completion) ಗರ್ಭ ಗೃಹದಲ್ಲಿ(womb house) ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಇದು ನಿಯಮಗಳಿಗೆ ವಿರುದ್ಧವಾದದ್ದು ಎಂದು ಎರಡೂ ಮಠಗಳು ಹೇಳಿದ್ದಾವೆ. ಹಾಗಾಗಿ ನಾವು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಲು ಇದೇ ಕಾರಣ ಎಂದಿದ್ಧಾರೆ.

ಧರ್ಮ ಪಾಲನೆ (Religion) ಆಗುವಂತೆ ನೋಡಿಕೊಳ್ಳೋದೇ ಶಂಕರಾಚಾರ್ಯರ ಕರ್ತವ್ಯ. ಆದರೆ ಮಂದಿರ ಉದ್ಘಾಟನೆ ವೇಳೆ ಸನಾತನ ಧರ್ಮದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ ನಾವು ಮೌನವಾಗಿ ಇರೋದಕ್ಕೆ ಸಾಧ್ಯ ಆಗ್ತಿಲ್ಲ ಎಂದಿರುವ ಸ್ವಾಮೀಜಿಗಳು, ತಾವು ಮೋದಿ ವಿರೋಧಿ ಅಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದು, ಧರ್ಮ ಶಾಸ್ತ್ರದ ವಿರುದ್ಧವಾಗಿ ನಡೆಯೋದಿಲ್ಲ ಎಂದು ಹೇಳಿದ್ದಾರೆ.

ಭವ್ಯಶ್ರೀ ಆರ್ ಜೆ

Exit mobile version