ಶಶಿಕಲಾ‌ ಸೆರೆವಾಸ ಅಂತ್ಯ: ಜೈಲಿನಿಂದ ಬಿಡುಗಡೆಯಾದ ಜಯಲಲಿತಾ ಆಪ್ತೆ

ಬೆಂಗಳೂರು, ಜ. 27: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ ವಿ.ಕೆ ಶಶಿಕಲಾ ಇಂದು ಬಿಡುಗಡೆಯಾಗಿದ್ದಾರೆ.

ವಿ.ಕೆ.ಶಶಿಕಲಾ ಅವರನ್ನು ಕೇಂದ್ರ ಜೈಲಿನ ಪರಪ್ಪನ ಅಗ್ರಹಾರದಿಂದ ಬುಧವಾರ ಬಿಡುಗಡೆ ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿ.ಕೆ.ಶಶಿಕಲಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆಯೂ ಅವರನ್ನು ಇದೀಗ ಜೈಲಿನಿಂದ ರಿಲೀಸ್ ಮಾಡಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿ.ಕೆ ಶಶಿಕಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಬುಧವಾರ ಅವರ ಬಿಡುಗಡೆಗೆ ಬೇಕಾದ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.

ಶಶಿಕಲಾ ಬಿಡುಗಡೆ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಸಂಭ್ರಮ ಮನೆ ಮಾಡಿದೆ. ತಮ್ಮ ನೆಚ್ಚಿನ ನಾಯಕಿಯ ಸ್ವಾಗತಕ್ಕೆ ಎಐಡಿಎಂಕೆ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾಯಸಿದ್ದಾರೆ.

Exit mobile version