ಬಾಂಗ್ಲಾದೇಶ : ದಾಖಲೆಯ ಜಯದೊಂದಿಗೆ 5ನೇ ಬಾರಿ ಪ್ರಧಾನಿ ಹುದ್ದೆಗೇರಿದ ಶೇಖ್ ಹಸೀನಾ

Dhaka: ಬಾಂಗ್ಲಾದೇಶದ #Bangkladesh ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ವಿಜಯವನ್ನು ದಾಖಲಿಸುವ ಮೂಲಕ, ಸತತ 5ನೇ ಬಾರಿಗೆ ಪ್ರಧಾನಿ ಹುದ್ದೆಗೆ ಮರು ಆಯ್ಕೆಯಾಗಿದ್ದಾರೆ. ಆದರೆ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (Bangladesh Nationalist Party) ಮತ್ತು ಅದರ ಮಿತ್ರಪಕ್ಷಗಳು ಮತದಾನವನ್ನು ಬಹಿಷ್ಕರಿಸಿವೆ.

ಮತದಾನಕ್ಕೂ ಮುನ್ನ ಅಲ್ಲಲ್ಲಿ ಹಿಂಸಾಚಾರ ನಡೆದಿದ್ದು, ಅನೇಕ ಕಡೆಗಳಲ್ಲಿ ಮತಗಟ್ಟೆಗಳಿಗೆ, ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದೆಲ್ಲದರ ಮಧ್ಯೆಯೇ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಗೆಲುವಿನೊಂದಿಗೆ, ಬಾಂಗ್ಲಾದೇಶದ ಸ್ವಾತಂತ್ರ್ಯದ ನಂತರ ಶೇಖ್ ಹಸೀನಾ #Sheikh Hasina ಅವರು ಬಾಂಗ್ಲಾದೇಶದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವು 300 ಸ್ಥಾನಗಳ ಬಾಂಗ್ಲಾದೇಶ ಸಂಸತ್ತಿನಲ್ಲಿ 224 ಸ್ಥಾನಗಳನ್ನು ಗೆದ್ದಿದೆ. ಎರಡು ಸ್ಥಾನಗಳ ಮತ ಎಣಿಕೆ ಇನ್ನೂ ನಡೆಯುತ್ತಿದೆ. ಇದುವರೆಗೆ 298 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಅವಾಮಿ ಲೀಗ್ ಪಕ್ಷವು 224 ಸ್ಥಾನಗಳನ್ನು ಗೆದ್ದಿದೆ, 62 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮತ್ತು ಜಾತಿಯೋ ಪಕ್ಷವು ನಾಲ್ಕು ಸ್ಥಾನಗಳನ್ನು ಗೆದ್ದಿದೆ.

ಶೇಖ್ ಹಸೀನಾ ಅವರು 1986ರಿಂದ ಎಂಟನೇ ಬಾರಿಗೆ ಗೋಪಾಲ್ಗಂಜ್ ಕ್ಷೇತ್ರದಿಂದ ಜಯಶಾಲಿಯಾಗಿದ್ದಾರೆ. ಅವರು 2,49,965 ಮತಗಳನ್ನು ಪಡೆದಿದ್ದರೆ, ಬಾಂಗ್ಲಾದೇಶದ ಸುಪ್ರೀಂ ಪಾರ್ಟಿಯ ಅವರ ಸಮೀಪದ ಪ್ರತಿಸ್ಪರ್ಧಿ ಎಂ ನಿಜಾಮ್ ಉದ್ದೀನ್ ಲಷ್ಕರ್ (M Nizam Uddin Lashkar) ಕೇವಲ 469 ಮತಗಳನ್ನು ಪಡೆದಿದ್ದಾರೆ. 2009ರಿಂದ ವ್ಯೂಹಾತ್ಮಕವಾಗಿ ನೆಲೆಗೊಂಡಿರುವ ದಕ್ಷಿಣ ಏಷ್ಯಾ ರಾಷ್ಟ್ರವನ್ನು ಆಳುತ್ತಿರುವ ಶೇಖ್ ಹಸೀನಾ ಅವರು ಚುನಾವಣೆಯಲ್ಲಿ ದಾಖಲೆಯ ನಾಲ್ಕನೇ ಅವಧಿ ಮತ್ತು ಒಟ್ಟಾರೆ ಐದನೇ ಅವಧಿಗೆ ಪ್ರಧಾನಿಯಾಗಿದ್ದಾರೆ.

ಈ ಮಧ್ಯೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ (Khaleda Zia) ನೇತೃತ್ವದ ಬಿಎನ್ಪಿ ಪಕ್ಷವು ಶಾಂತಿಯುತ ಸಾರ್ವಜನಿಕ ಕಾರ್ಯಕ್ರಮದ ಮೂಲಕ ತನ್ನ ಸರ್ಕಾರಿ ವಿರೋಧಿ ಆಂದೋಲನವನ್ನು ತೀವ್ರಗೊಳಿಸಲು ಯೋಜಿಸಿದೆ. ಅದು ಚುನಾವಣೆಗಳನ್ನು “ನಕಲಿ” ಎಂದು ಕರೆದಿದೆ. ಇನ್ನು BNP 2014 ರ ಚುನಾವಣೆಯನ್ನೂ ಬಹಿಷ್ಕರಿಸಿತು, ಆದರೆ ಈ ಬಾರಿ, BNP ಜೊತೆಗೆ, ಇತರ 15 ರಾಜಕೀಯ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದವು.

ತಮ್ಮ ಬಹಿಷ್ಕಾರ ಚಳವಳಿ ಯಶಸ್ವಿಯಾಗಿದೆ ಎಂಬುದಕ್ಕೆ ಕಡಿಮೆ ಮತದಾನವಾಗಿರುವುದು ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ಶಾಂತಿಯುತ ಪ್ರಜಾಸತ್ತಾತ್ಮಕ ಪ್ರತಿಭಟನೆ ಕಾರ್ಯಕ್ರಮಗಳನ್ನು ಚುರುಕುಗೊಳಿಸಲಾಗುವುದು ಮತ್ತು ಈ ಕಾರ್ಯಕ್ರಮದ ಮೂಲಕ ಜನರ ಮತದಾನದ ಹಕ್ಕನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

Exit mobile version