ವಿಮಾನಯಾನ: ಶಿವಮೊಗ್ಗ- ಬೆಂಗಳೂರು ನಡುವೆ ವಿಮಾನಯಾನ ಪ್ರಾರಂಭ! ದೇಶದ ನಾಲ್ಕು ನಗರಗಳಿಗೆ ಕನೆಕ್ಟಿಂಗ್‌ ಫ್ಲೈಟ್ ಸೌಲಭ್ಯ!

Shimoga: ಶಿವಮೊಗ್ಗ- ಬೆಂಗಳೂರು ನಡುವೆ ವಿಮಾನಯಾನ ಪ್ರಾರಂಭವಾಗಿದ್ದು, ಈ ನಿಲ್ದಾಣದಿಂದ (Shimoga – Bangalore Flight started) ಒಂದೇ ವಿಮಾನ ಸಂಚರಿಸುತ್ತಿದ್ದರೂ ಹಲವು

ಮಹಾನಗರಗಳಿಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ. ಬೆಂಗಳೂರು ಮಾತ್ರವಲ್ಲದೇ ಈಗಾಗಲೇ ಶಿವಮೊಗ್ಗದಿಂದ ನಾಲ್ಕು ಮಾರ್ಗಗಳಿಗೆ ಈ ಸೌಲಭ್ಯ ನೀಡಿರುವುದರಿಂದ ಬೇರೆಯ

ಕಡೆಗೆ ಪ್ರಯಾಣ ಮಾಡುವವರು ಶಿವಮೊಗ್ಗ ವಿಮಾನ ನಿಲ್ದಾಣದ ಪ್ರಯೋಜನ (Shimoga – Bangalore Flight started) ಪಡೆಯಲು ಅವಕಾಶವಿದೆ.

ಇದರಿಂದ ಹಣ ಕಡಿಮೆ ಖರ್ಚಾಗುವುದಲ್ಲದೇ ಬೇಗ ತಮ್ಮ ತಮ್ಮ ಸ್ಥಳಕ್ಕೆ ತಲುಪುವ ಅವಕಾಶವೂ ಇದ್ದು, ಈಗ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸಂಚರಿಸುವ ವಿಮಾನವು, ದೇಶದ ನಾಲ್ಕು ಪ್ರಮುಖ

ನಗರಗಳಾದ ಹೈದರಾಬಾದ್, ಚೆನ್ನೈ, (Chennai) ಅಹಮದಾಬಾದ್ ಹಾಗೂ ದೆಹಲಿಗೆ (New Delhi) ಕನೆಕ್ಟಿಂಗ್ ಫ್ಲೈಟ್ ಆಗಿ ಕಾರ್ಯನಿರ್ವಹಿಸಲಿದೆ. ಇದು ಚಿಕ್ಕಮಗಳೂರು, ದಾವಣಗೆರೆ,

ಚಿತ್ರದುರ್ಗ (Chitradurga) ಜಿಲ್ಲೆಗಳವರಿಗೂ ನೆರವಾಗಲಿದೆ.

ಮೈಸೂರು ದಸರಾ: ಸೆ.5 ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗಳಿಗೆ ಭರ್ಜರಿ ಸ್ವಾಗತ

ಹೊರ ರಾಜ್ಯಗಳಿಗೆ ವಿಮಾನ ಯಾನ ಮಾಡಬೇಕಾದರೆ ಶಿವಮೊಗ್ಗದ ನೆರೆಯ ಜಿಲ್ಲೆಗಳಾದ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳವರು ಬೆಂಗಳೂರು ಅಥವಾ ಹುಬ್ಬಳ್ಳಿಗೆ ತೆರಳಬೇಕಿತ್ತು

ಮತ್ತು ಅಲ್ಲಿಂದ ವಿಮಾನ ಪ್ರಯಾಣ ಬೆಳೆಸಬೇಕಿತ್ತು ಆದರೆ ಈಗ ಈ ಸಮಸ್ಯೆ ಅರ್ಧರ ಮಟ್ಟಿಗೆ ಇಲ್ಲದಂತಾಗಿದ್ದು, ಹೈದರಾಬಾದ್‌, ಚೆನ್ನೆ ಹಾಗೂ ಅಹಮದಾಬಾದ್‌ ಮತ್ತು ದಿಲ್ಲಿಗೆ ಕನೆಕ್ಟಿಂಗ್‌

ಫ್ಲೈಟ್ ಸೌಲಭ್ಯ ನೀಡಿರುವುದರಿಂದ ಅದರ ಪ್ರಯೋಜನ ಪಡೆಯಬಹುದಾಗಿದೆ.

ಇನ್ನು ಶಿವಮೊಗ್ಗದಿಂದ ಬೆಂಗಳೂರು ಮತ್ತು ಅಲ್ಲಿಂದ ಬೇರೆಡೆಗೆ ತೆರಳುವುದಕ್ಕಿಂತ ಇಲ್ಲಿಂದಲೇ ನೇರವಾಗಿ ಈ ನಾಲ್ಕು ಸ್ಥಳಗಳಿಗೆ ಟಿಕೆಟ್‌ ಕಾಯ್ದಿರಿಸಿದರೆ ಲಗೇಜ್‌ ತಲೆನೋವಿಲ್ಲದೇ ಪ್ರಯಾಣಿಸಬಹುದು.

ಜೊತೆಗೆ ಬೆಂಗಳೂರುವರೆಗಿನ ರಸ್ತೆ ಮಾರ್ಗದ ಮೂಲಕ ತೆರಳುವ ಗೋಜು ತಪ್ಪಿದಂತಾಗಲಿದೆ.

ಶಿವಮೊಗ್ಗದಿಂದ ವಿಮಾನ ಸೇವೆ ಆರಂಭಗೊಂಡು ನಾಲ್ಕು ದಿನಗಳಾಗಿದ್ದು, ನಾಲ್ಕು ನಗರಗಳಿಗೆ ಕನೆಕ್ಟಿಂಗ್‌ ಫ್ಲೈಟ್ ನೀಡಲಾಗಿದೆ. ಇನ್ನಷ್ಟು ಮಾರ್ಗಗಳಿಗೂ ಇನ್ನು ಮುಂದೆ ಈ ಸೌಲಭ್ಯ ಸಿಗುವ ಸಾಧ್ಯತೆ

ಇರುವುದರಿಂದ ಸಾಕಷ್ಟು ಜನರಿಗೆ ಇದರ ಪ್ರಯೋಜನವಾಗಲಿದೆ ಎಂಬ ನಂಬಿಕೆಯಿದೆ. ಅಲ್ಲದೆ ಶಿವಮೊಗ್ಗದಿಂದ ಬೆಂಗಳೂರು ಮತ್ತು ಅಲ್ಲಿಂದ ಬೇರೆಡೆಗೆ ಟಿಕೆಟ್‌ ಕಾಯ್ದಿರಿಸಬೇಕಾದರೆ ಹಣ ಅಧಿಕ

ವ್ಯಯವಾಗುವುದಲ್ಲದೆ ಲಗೇಜ್‌ ಭಾರವೂ ಹೊರಬೇಕಾಗುತ್ತದೆ. ಅದೇ ಶಿವಮೊಗ್ಗದಿಂದ ದಿಲ್ಲಿ, ಹೈದರಾಬಾದ್‌, ಅಹಮದಾಬಾದ್‌ ಅಥವಾ ಚೆನ್ನೈಗೆ ಟಿಕೆಟ್‌ ಬುಕ್ಕಿಂಗ್‌ ಮಾಡಿದರೆ ಸಾಮಾನ್ಯ ದರ ಸರಾಸರಿ

300-400 ರೂ.ವರೆಗೆ ಹಣ ಉಳಿತಾಯ ಮಾಡಬಹುದು.

ಈ ಪ್ರಯೋಜನವನ್ನು ಪ್ರಯಾಣಿಕರು ಬಳಸಿಕೊಳ್ಳಬಹುದಾಗಿದ್ದು, ಮುಂಬರುವ ದಿನಗಳಲ್ಲಿ ಬೇಡಿಕೆ, ಪ್ರಯಾಣಿಕರ ಓಡಾಟ ಮತ್ತಿತರ ಅಂಶಗಳ ಆಧಾರದ ಮೇಲೆ ಇನ್ನಷ್ಟು ವಿಮಾನಗಳ ಓಡಾಟ

ಆರಂಭವಾಗುವ ನಿರೀಕ್ಷೆ ಇದೆ. ಖುದ್ದು ರಾಜ್ಯ ಸರಕಾರವೇ ವಿಮಾನ ನಿಲ್ದಾಣಕ್ಕೆ ಉತ್ತಮ ಭವಿಷ್ಯ ಇರುವುದಾಗಿ ಒಪ್ಪಿಕೊಂಡಿದೆ. ಪ್ರಸ್ತುತ ಒಂದೇ ವಿಮಾನ ಹಾರಾಟ ಲಭ್ಯವಿದ್ದರೂ ಪ್ರಯಾಣಿಕರು

ಕನೆಕ್ಟಿಂಗ್‌ ಫ್ಲೆಟ್ ಸೌಲಭ್ಯ ಬಳಸಬಹುದಾಗಿದೆ.

Exit mobile version