ಶಿವಣ್ಣನ ಹೊಸ ಸಿನಿಮಾ `ಶಿವಪ್ಪ’

“ಗೋಲಿ ಸೋಡ ಖ್ಯಾತಿಯ ವಿಜಯ್ ಮಿಲ್ಟನ್ ಅವರ ನಿರ್ದೇಶನದ ಚಿತ್ರ ಶಿವಪ್ಪ. ರುಸ್ತುಂ' ಸಿನಿಮಾ ಸಮಯದಲ್ಲಿ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಸೂಚಿಸಿರುವ ಕತೆ ಇದು. ಪೊಗರು ಚಿತ್ರಕ್ಕೆ ಕತೆ ಮಾಡಿರುವ ವಿಜಯ್ ಮಿಲ್ಟನ್ ಬಗ್ಗೆ ನನಗೂ ಗೊತ್ತಿತ್ತು. ಮಾತ್ರವಲ್ಲ ದಿಯಾ ಖ್ಯಾತಿಯ ಪೃಥ್ವಿ ಅವರೂ ಚಿತ್ರದಲ್ಲಿದೆ. ಧನಂಜಯ್ ಅವರಿದ್ದಾರೆ. ಹಾಗಾಗಿ ಸಿನಿಮಾ ಇಂಟರೆಸ್ಟಿಂಗ್ ಅನಿಸುತ್ತದೆ" ಎಂದರು ಶಿವಣ್ಣ. ಅವರು ದೊಡ್ಡ ಗಣಪತಿ ದೇವಾಲಯದಲ್ಲಿ ಇಂದು ನೆರವೇರಿದಶಿವಪ್ಪ’ ಚಿತ್ರದ ಮುಹೂರ್ತ ಸಮಾರಂಭದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡುತ್ತಿದ್ದರು.

ಭಜರಂಗಿ-2' ಚಿತ್ರದ ಬ್ಯಾಲೆನ್ಸ್ ಶೂಟಿಂಗ್ ಮುಗಿಸಿದ ಮೇಲೆ ಹೊಸದಾಗಿ ಶುರು ಮಾಡಿದ ಚಿತ್ರ ಇದು. ಯುವ ನಿರ್ಮಾಪಕ ಜೊತೆಗಿದ್ದಾರೆ . ಚಿತ್ರದಲ್ಲಿ ಹೊಸತನ ಎನ್ನುವುದಕ್ಕಿಂತಲೂ ಎಂಟರ್ಟೇನ್ಮೆಂಟ್ ನಲ್ಲಿ ಹೊಸತನ ಇದೆ. ಇದೊಂದು ಮಲ್ಟಿ ಸ್ಟಾರರ್ ಸಿನಿಮಾ ಎನ್ನುವುದಕ್ಕಿಂತಲೂ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಹಾಗಾಗಿ ಇದು ಶಿವರಾಜ್ ಕುಮಾರ್ ಸಿನಿಮಾ ಎನ್ನುವುದಕ್ಕಿಂತ ವಿಜಯ್ ಮಿಲ್ಟನ್ ಸಿನಿಮಾ ಎಂದೇ ಹೇಳಬಹುದು.

ಚಿತ್ರದಲ್ಲಿ ಶಶಿಕುಮಾರ್ ಅವರು ಕೂಡ ಒಂದು ಪ್ರಮುಖ ಪಾತ್ರವನ್ನು ಮಾಡ್ತಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಹೊಂದಿಕೊಂಡಿರುವ ಕತೆ ಇದೆ. ಒಬ್ಬ ವ್ಯಕ್ತಿ ತಪ್ಪು ಮಾಡುವ ಮೊದಲೇ ತಡೆದರೆ ಅದೇ ಉತ್ತಮ. ಯಾಕೆಂದರೆ ತಪ್ಪು ಎಂದು ಗೊತ್ತಿರುವಾಗ ತಪ್ಪು ಮಾಡಲು ಹೋಗಲೇಬಾರದು. ಅದನ್ನು ತಡೆಯುವ ಕುರಿತಾದ ಸಬ್ಜೆಕ್ಟ್ ಇದೆ.

ಹಾಗಂತ ಇಲ್ಲಿ ಸಿಸ್ಟಮ್ ಅಥವಾ ಮೀಡಿಯಾವನ್ನು ಬ್ಲೇಮ್ ಮಾಡುವಂಥ ಸಬ್ಜೆಕ್ಟ್ ಇಲ್ಲ.ಧನಂಜಯ್ ಅವರಿಗೆಟಗರು’ಗಿಂತ ವಿಭಿನ್ನವಾದ ಪಾತ್ರ. ಈ ಚಿತ್ರದಲ್ಲಿ ನಾಯಕನಿಗೆ ಪೆಕ್ಯುಲಿಯರ್ ಆಗಿರುವ ರೊಮಾನ್ಸ್ ಸನ್ನಿವೇಶಗಳಿವೆ. ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಏಳು ಹೊಡೆದಾಟದ ದೃಶ್ಯಗಳಿವೆ ಎನ್ನುವಂಥ ಮಾಹಿತಿಗಳನ್ನು ಶಿವರಾಜ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು. ನಿರ್ದೇಶಕ ವಿಜಯ್ ಮಿಲ್ಟನ್, ನಟ ಪೃಥ್ವಿ ಅಂಬಾರ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ನಿರ್ನಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version