ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ ಶಾಕಿಂಗ್ ಸುದ್ಧಿ : ಇನ್ನು ಮುಂದೆ ನಕಲಿ ಕರೆಗಳು ಎಸ್​ಎಮ್​ಎಸ್​ ಬ್ಯಾನ್

TRAI : ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ (telemarketing companies), ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಶಾಕ್ ನೀಡಿದೆ ಅದೇನೆಂದರೆ ದಿನ ನಿತ್ಯ ಫೋನಿಗೆ ಬರುವ ನಕಲಿ ಕರೆಗಳು ಮತ್ತು ಎಸ್​ಎಮ್​ಎಸ್​ಗಳನ್ನು (SMS) ಸಂಪೂರ್ಣವಾಗಿ ನಿರ್ಬಂಧಿಸಿದೆ. ಇದರಿಂದ ಜನರಿಗೆ (Shocking news for TRAI) ಅನಗತ್ಯ ಕರೆ ಮತ್ತು ಸಂದೇಶಗಳಿಂದ ನೆಮ್ಮದಿ ಸಿಗಲಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ.

ಆದರೂ ಸ್ಪ್ಯಾಮ್ ಕರೆಗಳು ಅಂದರೆ ಅನೇಕ ಜಾಹೀರಾತು (Advertisement) ಕುರಿತಾಗಿ ಬರುವ ಫೋನ್ ಕಾಲ್​ಗಳು ಮತ್ತು ಮೆಸೇಜ್​ಗಳಿಗೆ ಇದುವರೆಗೆ ಯಾವುದೇ ಕಡಿವಾಣ ಹಾಕಿರಲಿಲ್ಲ.

ಆದರೀಗ ಟ್ರಾಯ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿಯಮಗಳ ಪ್ರಕಾರ ಜನ ಸಾಮಾನ್ಯರಿಗೆ ಕಿರಿ ಕಿರಿ ಉಂಟು ಮಾಡುವ ನಕಲಿ ಕರೆಗಳು ಮತ್ತು ಎಸ್​ಎಮ್​ಎಸ್​ಗಳನ್ನು ನಿರ್ಬಂಧಿಸಿದೆ.

ಇತ್ತೀಚಿನ ದಿನಗಳಲ್ಲಿ ನಕಲಿ ಕರೆಗಳಿಂದ ಅನೇಕ ವಂಚನೆಗಳು ನಡೆಯುತ್ತಿದೆ ಅದರಲ್ಲೂ ಅನೇಕ ಟೆಲಿ ಮಾರ್ಕೆಟಿಂಗ್​ ಕಂಪನಿಗಳು ಬಳಕೆದಾರರಿಗೆ ದಿನ

ನಿತ್ಯ ಹಗಲು ರಾತ್ರಿಯೆನ್ನದೆ ಕರೆ ಮಾಡುತ್ತಿದೆ, ಮೆಸೇಜ್​ಗಳನ್ನು ಕಳುಹಿಸುತ್ತಿದೆ.

ಈಗಾಗಲೇ ಇದು ಬಳಕೆದಾರರಿಗೆ ಸಾಕಷ್ಟು ತೊಂದರೆ ಉಂಟು ಮಾಡುತ್ತಿದೆ. ಇದನ್ನು ಗಮನಿಸಿದ ಟ್ರಾಯ್​​ ಸಂಸ್ಥೆ ಟೆಲಿಮಾರ್ಕೆಟರ್‌ಗಳು 10 ಅಂಕಿಯ ಮೊಬೈಲ್ ಸಂಖ್ಯೆಗಳನ್ನು ಬಳಸುವುದನ್ನು

ನಿಲ್ಲಿಸಬೇಕಾಗುತ್ತದೆ ಎಂದು ಕಠಿಣ ನಿರ್ಧಾರ ತೆಗೆದುಕೊಂಡಿದೆ. ಇನ್ನು ಮುಂದೆ ಜಾಹೀರಾತಿಗಾಗಿ ಕರೆ,

ಮೆಸೇಜ್​ ಮಾಡುವಂತಹ ವಿಶೇಷ ಸಂಖ್ಯೆಗಳನ್ನು ಟ್ರಾಯ್​​ ಸಂಸ್ಥೆ (Troy Institute) ನಿರ್ಬಂಧಿಸುತ್ತದೆ .

ಈ ಮೂಲಕ ಬಳಕೆದಾರರಿಗೆ ಕಿರಿ ಕಿರಿ ನೀಡುವ ಕರೆಗಳು ಮತ್ತು ಮೆಸೇಜ್‌ಗಳಿಂದ ಮುಕ್ತಿ ದೊರಕಲಿದೆ.

ಇದರಿಂದ ಬ್ಯಾಂಕ್ಗಳಿಂದ ಎಂದು ಹೇಳಿಕೊಂಡು ಮಾಡುವ ನಕಲಿ ಕರೆಗಳು, ವಿಮಾ ಕಂಪನಿಗಳ ಹೆಸರಿನಲ್ಲಿ (Shocking news for TRAI) ನಾನಾ ಸಂಖ್ಯೆಗಳಿಂದ ವಂಚಕರು ಮಾಡುವ

ಕರೆಗಳು ಮತ್ತು ಸಂದೇಶಗಳಿಂದ ಪಾರಾಗಬಹುದು.

ಈ ನಿಯಮವನ್ನು ಟೆಲಿಕಾಂ ಸಂಸ್ಥೆಗಳು ಮೀರಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಈಗಾಗಲೇ ಸೂಚನೆ ನೀಡಿದೆ.

ಏರ್ಟೆಲ್ (telecom)ಸಂಸ್ಥೆಯು ಈಗಾಗಲೇ ಸ್ಪ್ಯಾಮ್ ಫಿಲ್ಟರ್ ಬಳಕೆ ಪ್ರಾರಂಭಿಸಿದೆ ಮತ್ತು , ರಿಲಯನ್ಸ್ ಜಿಯೋ ಕೂಡ ಶೀಘ್ರವೇ ಪ್ರಾರಂಭಿಸುವ ಸಾಧ್ಯತೆ ಇದೆ.

ಇನ್ನು ಮುಂದೆ ಟ್ರೂ ಕಾಲರ್ ಮಾದರಿಯಲ್ಲಿ ಮತ್ತೊಂದು ಹೊಸ ಆ್ಯಪ್ ಬಿಡುಗಡೆ : ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್

ಇಂಡಿಯಾವು (Telecom Regulatory Authority of India) ಅತೀ ಶೀಘ್ರದಲ್ಲೇ ಒಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಲಿದೆ.

ಟ್ರೂ ಕಾಲರ್‌ ಅಪ್ಲಿಕೇಶನ್ (True Caller App) ಮಾದರಿಯಲ್ಲಿಯೇ ಈ ಆಪ್ ಕಾರ್ಯ ನಿರ್ವಹಿಸಿತ್ತದೆ.

ಈ ಆಪ್ ಮುಖಾಂತರ ನಮಗೆ ಯಾರು ಕರೆ ಮಾಡುತ್ತಾರೆ ಅವರ ಹೆಸರು ಕೆಯ್ಕ್ ದಾಖಲೆಯಲ್ಲಿ ಯಾವ ಹೆಸರು ಇರುತ್ತದೋ ಅದೇ ಹೆಸರು ಫೋನ್ ಪರದೆ ಮೇಲೆ ಬರುತ್ತದೆ.

ಅಂದರೆ ಸಿಮ್ ಖರೀದಿಸುವಾಗ ಜನರು KYCಗೆ ಯಾವ ದಾಖಲೆ ಕೊಡುತ್ತಾರೋ ಅದೇ ಹೆಸರು ಬರುತ್ತದೆ.

ಇದರಿಂದ ಅಪರಿಚಿತ ಕರೆಗಳ ಕಾಲರ್ ಐಡಿ ತೋರಿಸುತ್ತದೆ ಎಂದು ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಅಧ್ಯಕ್ಷ ಪಿ.ಡಿ.ವಘೇಲಾ ಇತ್ತೀಚೆಗೆ ಹೇಳಿದ್ದಾರೆ.

Exit mobile version