ಶ್ವೇತ ಭವನಕ್ಕೆ ಕಾಲಿಡಲು ಬೈಡೆನ್ ಸಜ್ಜು

ವಾಷಿಂಗ್ಟನ್ ನ.9: ಅಮೆರಿಕಾ ಚುನಾವಣೆಯಲ್ಲಿ ಗೆದ್ದ ಜೋ ಬೈಡೆನ್ ಅವರು ಅಮೆರಿಕಾದ ಶಕ್ತಿ ಕೇಂದ್ರವಾದ ಶ್ವೇತಭವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ಚುನಾವಣೆಯಲ್ಲಿ ಸೋತ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋಲನ್ನು ಒಪ್ಪಿಕೊಳ್ಳಲು ತಯಾರಿಲ್ಲದೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಟ್ರಂಪ್ ಸುಪ್ರೀಂ ಕೋರ್ಟಲ್ಲಿ  ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ತಂಡ ಇಂದು ಅಧಿಕಾರಿಗಳ ವಿರುದ್ಧ ಕಾನೂನು ಉಲ್ಲಂಘಿಸಿ, ನಾಗರೀಕ ಹಕ್ಕುಗಳನ್ನು ಉಲ್ಲಂಘಿಸಿ ಅಸರ‍್ಪಕವಾಗಿ ಚುನಾವಣೆ ನಡೆಸಿದ್ದಾರೆ ಎಂದು ಬಲವಾದ ಮೊಕದ್ದಮೆ ಹೂಡಲು ತಯಾರಾಗಿದ್ದಾರೆ.

ಪಲಿತಾಂಶ ಪ್ರಕಟವಾದಂತೆ ಜೋ ಬೈಡೆನ್ ಹಾಗೂ ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.  ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲ್ಯೂ ಬುಷ್ ಅವರೂ ಅಭಿನಂದಿಸಿದ್ದಾರೆ. ಜೋ ಬೈಡೆನ್ ವೆಬ್ಸೈಟ್ ಆರಂಭಿಸಿ ಅದರಲ್ಲಿ ನಾಲ್ಕು ಪ್ರಮುಖ ಆದ್ಯತೆಗಳನ್ನು ಪಟ್ಟಿ ಮಾಡಿದ್ದು ಕೋವಿಡ್-೧೯ ಆರ್ಥಿಕ ಪುನಚ್ಚೇತನ, ಜನಾಂಗೀಯ ಸಮಾನತೆ,ಅ ಮತ್ತು ಹವಾಮಾನ ಬದಲಾವಣೆ ಮುಂತಾದವುಗಳನ್ನು ಅಧ್ಯಕ್ಷರಾದ ತಕ್ಷಣ ಮಾಡಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.ಜೋ ಬೈಡೆನ್ ಅವರು ಅಮೆರಿಕಾದ ೪೬ನೇ ಅಧ್ಯಕ್ಷರಾಗಿ ೨೦೨೧ರ ಜನವರಿ ೨೦ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜಾನ್ ಎಫ್ ಕೆನಡಿಯವರ ನಂತರ ಅಮೆರಿಕಾದ ಎರಡನೇ ಅಧ್ಯಕ್ಷರಾಗಿ ಜೋ ಬೈಡೆನ್ ಅವರು ೨ನೇ ಕ್ಯಾಥೋಲಿಕ್ ಅಧ್ಯಕ್ಷರಾಗಿದ್ದಾರೆ. ತಮ್ಮ ತವರು ಡೆಲವರೆಯ ವಿಲ್ಮಿಂಗ್ಟನ್‌ನಲ್ಲಿ ರ‍್ಚಿಗೆ ಬೇಟಿ ನೀಡಿದ ಅವರು ಚುನಾವಣೆ ನ್ಯಾಯಯುತವಾಗಿ ನಡೆದಿದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಲೊಪ್ಪಿಕೊಳ್ಳುವುದು ಅನಿವರ‍್ಯವೆಂದು ಹೇಳಿದ್ದಾರೆ.

Exit mobile version