`ಸಿದ್ದರಾಮೋತ್ಸವ’ಕ್ಕೆ 6 ಲಕ್ಷಕ್ಕೂ ಅಧಿಕ ಮೈಸೂರು ಪಾಕ್ ಸ್ವೀಟ್ ತಯಾರಿ ; 50 ಎಕರೆ, 5 ಲಕ್ಷ ಜನ, 50 ಕೋಟಿ ಖರ್ಚು

Siddaramaiah

ಬೆಂಗಳೂರು : ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಅವರ 75ನೇ ವರ್ಷದ ಹುಟ್ಟಹಬ್ಬದ(Birthday) ಪ್ರಯುಕ್ತ ದಾವಣಗೆರೆಯಲ್ಲಿ(Davangere) ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದ ಸಿದ್ದತೆಗಳು ಭರದಿಂದ ಸಾಗಿವೆ. ಮೂಲಗಳ ಪ್ರಕಾರ ಈ ಕಾರ್ಯಕ್ರಮಕ್ಕೆ ಸುಮಾರು ಐದು ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ಸಾವಿರ ಜನರನ್ನು ಕರೆತರುವ ಗುರಿಯನ್ನು ಸ್ಥಳೀಯ ನಾಯಕರಿಗೆ ನೀಡಲಾಗಿದೆ.

ಹಳೆ ಮೈಸೂರು ಭಾಗದಿಂದ ಮತ್ತು ಉತ್ತರ ಕರ್ನಾಟಕ(North Karnataka) ಭಾಗದಿಂದ ಜನರನ್ನು ಕರೆತರುವ ಸಲುವಾಗಿ ಸಾರಿಗೆ ವ್ಯವಸ್ಥೆಯನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಈಗಾಗಲೇ ರಾಜ್ಯ ಸಾರಿಗೆ ಸಂಸ್ಥೆಯಿಂದ 7 ಸಾವಿರ ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದೆ. ಸಿದ್ದರಾಮೋತ್ಸವಕ್ಕೆ ಕಾರ್ಯಕ್ರಮದಿಂದಲೇ ರಾಜ್ಯ ಸಾರಿಗೆ ಸಂಸ್ಥೆ ಸುಮಾರು 39 ಲಕ್ಷ ರೂಪಾಯಿ ಆದಾಯ ಗಳಿಸುವ ನಿರೀಕ್ಷೆ ಇದೆ. ಇನ್ನು ದಾವಣಗೆರೆ ಹೊರವಲಯದಲ್ಲಿ 50 ಎಕರೆ ವಿಸ್ತಾರವಾದ ಪ್ರದೇಶದಲ್ಲಿ, ಅರಮನೆ ಮಾದರಿಯ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಆಗಮಿಸುತ್ತಿದ್ದು, ವೇದಿಕೆ ಮೇಲೆ ಕೇವಲ 45 ಗಣ್ಯರಿಗೆ ಮಾತ್ರ ಸ್ಥಳಾವಕಾಶ ನೀಡಲಾಗುತ್ತದೆ. ಮಾಜಿ ಸಚಿವರು, ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಇನ್ನು ವಿವಿಧ ಜಿಲ್ಲೆಗಳಿಂದ ಬರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅವರ ಅಭಿಮಾನಿಗಳಿಗಾಗಿ ದಾವಣಗೆರೆ, ಹುಬ್ಬಳ್ಳಿ(Hubbali) ಮತ್ತು ಚಿತ್ರದುರ್ಗದಲ್ಲಿ(Chitradurga) ಹೊಟೇಲ್ಗಳನ್ನು ಬುಕ್ಮಾಡಲಾಗಿದೆ. ಹೀಗಾಗಿ ಈ ಮೂರು ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ಹೊಟೇಲ್ಗಳನ್ನು ಕಾರ್ಯಕ್ರಮದ ಹಿನ್ನಲೆಯಲ್ಲಿ ಬುಕ್ಮಾಡಲಾಗಿದೆ.

ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಕಾರ್ಯಕ್ರಮದ ದಿನದಂದು ಭಾರೀ ವಾಹನಗಳಿಗೆ ನಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ ದಾವಣಗೆರೆಯಲ್ಲಿ ಹೆಚ್ಚುವರಿಯಾಗಿ ಆಟೋರಿಕ್ಷಾ(Autorickshaw) ಮತ್ತು ಕಾರುಗಳನ್ನು ನಿಯೋಜನೆ ಮಾಡಲಾಗಿದೆ. ಒಟ್ಟಾರೆಯಾಗಿ ಸಿದ್ದರಾಮೋತ್ಸವ ಕಾರ್ಯಕ್ರಮದ ಸಿದ್ದತೆಗಳು ಭರದಿಂದ ಸಾಗಿದ್ದು, ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ.

Exit mobile version