ಸಿದ್ದರಾಮೋತ್ಸವ : 25 ಕೋಟಿ ಖರ್ಚು, 5 ಲಕ್ಷ ಜನ, ರಾಹುಲ್‌ ಗಾಂಧಿ ಭಾಗಿ

Congress

ವಿಧಾನಸಭೆ ಚುನಾವಣೆಗೆ(Vidhansabha Election) ಮುನ್ನ ಪ್ರಬಲ ರಾಜಕೀಯ ಸಂದೇಶ ರವಾನಿಸುವ ದೃಷ್ಟಿಯಿಂದ ಆಗಸ್ಟ್ 3 ರಂದು ದಾವಣಗೆರೆಯಲ್ಲಿ(Davangere) ನಡೆಯಲಿರುವ ಸಿದ್ದರಾಮಯ್ಯನವರ(Siddaramaiah) ಹುಟ್ಟುಹಬ್ಬಕ್ಕೆ ಕನಿಷ್ಠ 25 ಕೋಟಿ ರೂ. ಖರ್ಚು ಮಾಡಿ, ಅದ್ದೂರಿಯಾಗಿ `ಉತ್ಸವʼ ಮಾಡಲು ಕಾಂಗ್ರೆಸ್‌(Congress) ನಾಯಕರು ಓಡಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಕೂಡಾ ಭಾಗಿಯಾಗಲಿದ್ದಾರೆ.

ಆದರೆ ಇನ್ನೊಂದೆಡೆ ರಾಜ್ಯದಲ್ಲಿ ಪ್ರವಾಹ(Flood) ಪರಿಸ್ಥಿತಿ ಎದುರಾಗಿದ್ದು, ಸರ್ಕಾರದ ಕಿವಿ ಹಿಂಡಬೇಕಾದವರೆಲ್ಲಾ ಉತ್ಸವಕ್ಕಾಗಿ ಚಂದಾ ಎತ್ತುತ್ತಿರುವುದು ದುರಂತವೇ ಸರಿ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 5 ಲಕ್ಷ ಜನರನ್ನು ಕರೆತಂದು, ಆಹಾರಕ್ಕಾಗಿ ಬರೋಬ್ಬರಿ 5 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ವಿಪಕ್ಷ ನಾಯಕರ ಈ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಖರ್ಚು ಮಾಡಲಾಗುತ್ತಿರುವ ಹಣ ಸುಮಾರು 25 ಕೋಟಿ ರೂ.ಗಳನ್ನು ದಾಟುತ್ತದೆ.

ಸಿದ್ದರಾಮಯ್ಯ ಅವರಂತ ಸಮಾಜವಾದಿ ಹಿನ್ನಲೆಯ ನಾಯಕ ಈ ರೀತಿಯ ಉತ್ಸವದ ಮೂಲಕ ಶಕ್ತಿ ಪ್ರದರ್ಶನಕ್ಕೆ ಹೊರಟಿರುವುದು ಸರಿಯಲ್ಲ. ಅದ್ದೂರಿ ಉತ್ಸವಗಳ ಮೂಲಕ ಮಾತ್ರ ಜನಸಾಮಾನ್ಯರನ್ನು ತಲುಪಬಹುದು ಎಂಬುದು ಶುದ್ದ ಸುಳ್ಳು. ಜನಪರ ವಾದ ಆಲೋಚನೆ ಮತ್ತು ಕಾರ್ಯಗಳ ಮೂಲಕವೇ ಜನಸಾಮಾನ್ಯರನ್ನು ತಲುಪಿ, ಜನನಾಯಕರಾದವರು ಅನೇಕರಿದ್ದಾರೆ. ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಕಾಂಗ್ರೆಸ್‌ ಪಕ್ಷದ(Congress Party) ಆಂತರಿಕ ವಿಚಾರವಾದರು,

ಸಾರ್ವಜನಿಕವಾಗಿ ಅದನ್ನು ಆಯೋಜಿಸುತ್ತಿರುವುದು, ಒಂದು ಇಡೀ ಪಕ್ಷವೇ ಅದಕ್ಕಾಗಿ ಶ್ರಮಿಸಿ, ಚಂದಾ ಎತ್ತುತ್ತಿರುವುದು ಒಳ್ಳೆಯ ನಡವಳಿಕೆಯ ಸಂಕೇತವಲ್ಲ. ಸಿದ್ದರಾಮಯ್ಯ ಅವರು ಜನಪರ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ರೀತಿಯ ಉತ್ಸವಗಳಿಗಾಗಿ ವಿನಿಯೋಗಿಸುತ್ತಿರುವ ಹಣ ಅವರ ಸಮಾಜವಾದಿ ಸಿದ್ದಾಂತವನ್ನು ಅಣುಕಿಸುವಂತಿದೆ. ಸಮಾಜವಾದಿ, ಅಹಿಂದ ನಾಯಕರೊಬ್ಬರು 25 ಕೋಟಿ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಇದೇ ಮೊದಲು ಇರಬಹುದೇನೋ.. ಎಂದು ಅನೇಕ ಬಿಜೆಪಿ ನಾಯಕರು(BJP Leaders) ಲೇವಡಿ ಮಾಡಿದ್ದಾರೆ.

Exit mobile version